ನ್ಯೂಸ್

ಎಸ್‌ಎಸ್‌ಎಲ್‌ಸಿ ಉತ್ತೀರ್ಣರಿಗೆ ಭರ್ಜರಿ ಅವಕಾಶ- ವಿವಿಧ ಹುದ್ದೆಗಳಿಗೆ ಆಹ್ವಾನ

suchetana

ರಕ್ಷಣಾ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುವ ಮುಂಬೈನಲ್ಲಿರುವ ಮಜಗಾಂವ್​ ಡಾಕ್​ ಶಿಪ್​ಬಿಲ್ಡರ್ಸ್​ ಲಿಮಿಟೆಡ್​ (ಎಂಡಿಎಲ್​) ನಾನ್​ ಎಕ್ಸಿಕ್ಯೂಟಿವ್​ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗಳು 3 ವರ್ಷದ ಅವಧಿಗೆ ಒಳಪಟ್ಟಿದ್ದು, ನಂತರ ಸಂಸ್ಥೆಯ ಅವಶ್ಯಕತೆಗೆ ಅನುಗುಣವಾಗಿ 1 ವರ್ಷ ಅವಧಿ ವಿಸ್ತರಿಸಲಾಗುವುದು. ಲಿಖಿತ ಪರೀಕ್ಷೆ, ಶಿಪ್​ ಬಿಲ್ಡಿಂಗ್​ ಇಂಡಸ್ಟ್ರಿಯಲ್ಲಿನ ವೃತ್ತಿ ಅನುಭವ, ಟ್ರೇಡ್​ ಪರೀಕ್ಷೆನಡೆಸಿ ಅಭ್ಯರ್ಥಿಗಳ ಆಯ್ಕೆ ಮಾಡಲಾಗುವುದು.
ಒಟ್ಟು ಹುದ್ದೆಗಳು: 1,388

ಹುದ್ದೆ ವಿವರ
* ಎಸಿ, ರೆಫ್ರಿಜರೇಟರ್​ ಮೆಕ್ಯಾನಿಕ್​ - 5
* ಕಂಪ್ರೆಸರ್​ ಅಟೆಂಡೆಂಟ್​ - 5
* ಕಾರ್ಪೆಂಟರ್​ - 81
* ಚಿಪ್ಪರ್​ ಗೆಂಡರ್​ - 13
* ಕಾಂಪೋಸಿಟ್​ ವೆಲ್ಡರ್ಸ್​ - 132
* ಡೀಸೆಲ್​ ಕ್ರೇನ್​ ಆಪರೇಟರ್​ - 5
* ಡೀಸೆಲ್​ ಕಂ ಮೋಟಾರ್​ ಮೆಕ್ಯಾನಿಕ್​ - 4
* ಜೂನಿಯರ್​ ಡ್ರಾಫ್ಟ್‌​ಮನ್​ - 54
* ಎಲೆಕ್ಟ್ರಿಷಿಯನ್​ - 204
* ಎಲೆಕ್ಟ್ರಾನಿಕ್​ ಮೆಕ್ಯಾನಿಕ್​ - 55
* ಫಿಟ್ಟರ್​ - 119
* ಜೂ. ಕ್ಯು ಸಿ ಇನ್ಸ್​ಪೆಕ್ಟರ್​ (ಮೆಕ್ಯಾನಿಕಲ್​) - 13
* ಗ್ಯಾಸ್​ ಕಟರ್​ - 38
* ಮಷಿನಿಸ್ಟ್​ - 28
* ಮಿಲ್​ಫೈಟ್​ ಮೆಕ್ಯಾನಿಕ್​ - 10
* ಪೇಂಟರ್​ - 100
* ಪಫೈಪ್​ ಫಿಟ್ಟರ್​ - 140
* ರಿಗ್ಗರ್​ - 88
* ಸ್ಟ್ರಕ್ಚರಲ್​ ಫ್ಯಾಬ್ರಿಕೇಟರ್​ - 125
* ಸ್ಟೋರ್​ ಕೀಪರ್​ - 10
* ಯುಟಿಲಿಟಿ ಹ್ಯಾಂಡ್​ - 14
* ಪ್ಲಾನರ್​ ಎಸ್ಟಿಮೇಟರ್​ (ಮೆಕ್ಯಾನಿಕಲ್​-4, ಎಲೆಕ್ಟ್ರಿಕಲ್​-4) - 8
* ಪ್ಯಾರಾಮೆಡಿಕ್ಸ್​ - 2
* ಯುಟಿಲಿಟಿ ಹ್ಯಾಂಡ್​ - 135

ವಿದ್ಯಾರ್ಹತೆ: 8ನೇ ತರಗತಿ, ಎಸ್​ಎಸ್​ಎಲ್​ಸಿ, ಎಚ್​ಎಸ್​ಸಿ, ಎನ್​ಎಸಿ, ದ್ವೀತಿಯ ಪಿಯುಸಿ, ಡಿಪ್ಲೊಮಾ/ ಇಂಜಿನಿಯರಿಂಗ್​ ಪದವಿ, ಟ್ರೇಡ್​ಗಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಅಪ್ರೆಂಟೀಸ್​ ತರಬೇತಿಯ ಪ್ರಮಾಣಪತ್ರ ಹೊಂದಿರಬೇಕು.

ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ 38 ವರ್ಷ. ಮೀಸಲಾತಿ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮದನ್ವಯ ವಯೋಸಡಿಲಿಕೆ ಇದೆ.

ವೇತನ: ಸ್ಕಿಲ್ಡ್​ ಗ್ರೇಡ್​ 1 ಹುದ್ದೆಗೆ ಮಾಸಿಕ 17,000-64,360 ರೂ., ಸೆಮಿ ಸ್ಕಿಲ್ಡ್​ ಗ್ರೇಡ್​ 1 ಹುದ್ದೆಗೆ ಮಾಸಿಕ 13,200-49,910 ರೂ. ವೇತನ ಜತೆ ಡಿಎ, ಮನೆ ಬಾಡಿಗೆ ಭತ್ಯೆ, ಸಿಪಿಎಫ್‌​ ಹಾಗೂ ಇತರ ಭತ್ಯೆಗಳನ್ನು ನೀಡಲಾಗುವುದು.

ಮೀಸಲಾತಿ: ಎಸ್ಸಿಗೆ 112, ಎಸ್ಟಿಗೆ 93, ಇತರ ಹಿಂದುಳಿದ ವರ್ಗಕ್ಕೆ 293, ಆಥಿರ್ಕವಾಗಿ ದುರ್ಬಲವಾಗಿರುವ ಅಭ್ಯರ್ಥಿಗೆ 132, ಸಾಮಾನ್ಯವರ್ಗದ ಅಭ್ಯರ್ಥಿಗೆ 694 ಸ್ಥಾನ ಮೀಸಲಿರಿಸಲಾಗಿದೆ. ಇದಲ್ಲದೇ ಬ್ಯಾಕ್​ಲಾಗ್​ ಹುದ್ದೆಗಳಲ್ಲಿ ಎಸ್ಸಿಗೆ 8, ಎಸ್ಟಿಗೆ 38, ಇತರ ಹಿಂದುಳಿದ ವರ್ಗದ ಅಭ್ಯರ್ಥಿಗೆ 18 ಸ್ಥಾನ ಕಾಯ್ದಿರಿಸಲಾಗಿದೆ. ಇದರಲ್ಲಿ 56 ಸ್ಥಾನಗಳನ್ನು ಅಂಗವಿಕಲ ಅಭ್ಯರ್ಥಿಗಳಿಗಾಗಿ ಮೀಸಲಿರಿಸಲಾಗಿದೆ.

ಅರ್ಜಿ ಶುಲ್ಕ: ಎಸ್ಸಿ, ಎಸ್ಟಿ, ಅಂಗವಿಕಲ, ಮಾಜಿ ಸೈನಿಕ ಅಭ್ಯರ್ಥಿಗಳನ್ನು ಹೊರತುಪಡಿಸಿ ಉಳಿದ ಅಭ್ಯರ್ಥಿಗಳು 100 ರೂ. ಶುಲ್ಕ ಪಾವತಿಸಬೇಕು.

ಅರ್ಜಿ ಸಲ್ಲಿಸಲು ಕೊನೇ ದಿನ: 4.7.2021
ಅಧಿಸೂಚನೆಗೆ: https://bit.ly/3wyqT26
ಮಾಹಿತಿಗೆ: https://mazagondock.in/