More

    ಕೃಷಿ ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

    ಧಾರವಾಡದ ಕೃಷಿ ವಿಶ್ವ ವಿದ್ಯಾಲಯದಲ್ಲಿ ಅಧಿಕಾರಿ ವೃಂದದ ವಿವಿಧ ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ನೇಮಕ ಮಾಡಿಕೊಳ್ಳಲಾಗುತ್ತಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಡೈರೆಕ್ಟರ್​ ಆಫ್‌ ​ ಎಜುಕೇಷನ್​ ಹುದ್ದೆಯು ಕಲ್ಯಾಣ ಕರ್ನಾಟಕದ ಅಭ್ಯರ್ಥಿಗೆ ಮೀಸಲಿರಿಸಲಾಗಿದೆ.

    ಒಟ್ಟು ಹುದ್ದೆಗಳು: 11

    ಹುದ್ದೆ ವಿವರ
    * ಸಂಶೋಧನಾ ನಿರ್ದೇಶಕ – 1 * ವಿಸ್ತರಣಾ ನಿರ್ದೇಶಕ- 1 * ವಿದ್ಯಾರ್ಥಿ ಕ್ಷೇಮಪಾಲಕ- 1 * ವಿಶ್ವವಿದ್ಯಾಲಯ ಗ್ರಂಥಪಾಲಕ – 1 * ಡೀನ್​ (ಪೋಸ್ಟ್​ ಗ್ರಾಜುಯೇಷನ್​ ಸ್ಟಡಿಸ್​-1, ಧಾರವಾಡದ ಕೃಷಿ ಕಾಲೇಜು-1, ಹನುಮನಮಟ್ಟಿ ಕೃಷಿ ಕಾಲೇಜು-1, ವಿಜಯಪುರ ಕೃಷಿ ಕಾಲೇಜು – 1, ಕಮ್ಯುನಿಟಿ ಸೈನ್ಸ್​-ಧಾರವಾಡದ ಕಮ್ಯುನಿಟಿ ಸೈನ್ಸ್​ ಕಾಲೇಜು-1, ಫಾರೆಸ್ಟ್ರಿ- ಶಿರಸಿ ಫಾರೆಸ್ಟ್ರಿ ಕಾಲೇಜು – 1) – 6, ಶಿಕ್ಷಣ ನಿರ್ದೇಶಕ – 1

    ಶೈಕ್ಷಣಿಕ ಅರ್ಹತೆ: ಲೈಬ್ರರಿ ಸೈನ್ಸ್​/ ಇನ್​ಮೇರ್ಷನ್​ ಸೈನ್ಸ್​/ ಡಾಕ್ಯುಮೆಂಟೇಷನ್​ನಲ್ಲಿ ಸ್ನಾತಕೋತ್ತರ ಪದವಿ, ಕೃಷಿ ವಿಜ್ಞಾನದಲ್ಲಿ ಪದವಿ, ಸ್ನಾತಕೋತ್ತರ ಪದವಿ, ಡಾಕ್ಟೋರಲ್​ ಪದವಿ ಪಡೆದಿದ್ದು, ಸಿಜಿಪಿಎಯಲ್ಲಿ 2.75 ಹಾಗೂ ಒಜಿಪಿಎನಲ್ಲಿ 8 ಅಂಕ ಪಡೆದಿರಬೇಕು. ವೃತ್ತಿ ಅನುಭವ ಕೇಳಲಾಗಿದೆ. ಕನ್ನಡ ಭಾಷಾ ಜ್ಞಾನ ಅವಶ್ಯ.

    ಅರ್ಜಿ ಶುಲ್ಕ: ಎಸ್ಸಿ, ಎಸ್ಟಿ ಅಭ್ಯರ್ಥಿಗಳು 1,500 ರೂ. ಪ್ರೊಸೆಸಿಂಗ್​ ಶುಲ್ಕ, ಹಾಗೂ ಇತರ ಅಭ್ಯರ್ಥಿಗಳು 3,000 ರೂ. ಪ್ರೊಸೆಸಿಂಗ್​ ಶುಲ್ಕ ಪಾವತಿಸಬೇಕು.

    ಆಯ್ಕೆ ಪ್ರಕ್ರಿಯೆ: ಶೈಕ್ಷಣಿಕ ಅಂಕ, ಅಕಾಡೆಮಿಕ್​/ ಆಡಳಿತಾತ್ಮಕ ವೃತ್ತಿ ಅನುಭವ, ಪಬ್ಲಿಕೇಷನ್ಸ್​, ಹೊರರಾಜ್ಯದಲ್ಲಿನ ಅನುಭವ, ವಿಶೇಷ ಪ್ರಶಸ್ತಿಗಳು, ಅಂತಾರಾಷ್ಟ್ರೀಯ ತಿಳಿವಳಿಕೆ ಹಾಗೂ ಸಂದರ್ಶನದಲ್ಲಿನ ಪಾಲ್ಗೊಳ್ಳುವಿಕೆ ಆಧರಿಸಿ ಅಭ್ಯರ್ಥಿಗಳ ಆಯ್ಕೆ ಮಾಡಲಾಗುವುದು.

    ಅರ್ಜಿ ಸಲ್ಲಿಸಲು ಕೊನೇ ದಿನ: 24.6.2021
    ಅರ್ಜಿ ಸಲ್ಲಿಕೆ ವಿಳಾಸ: The Rigistrar, , University of Agricultural Sciences, Dharwad – 580 005

    ಅಧಿಸೂಚನೆಗೆ: https://bit.ly/3uwh6YJ
    ಮಾಹಿತಿಗೆ: www.uasd.edu

    ಸೇನಾ ಪಡೆಯಲ್ಲಿ 100 ವಿವಿಧ ಹುದ್ದೆಗಳಿಗೆ ಆಹ್ವಾನ: ಬೆಂಗಳೂರಿನಲ್ಲಿ ನೇಮಕಾತಿ ಪರೀಕ್ಷೆ

    ಎಂಡಿ, ಎಂಎಸ್‌ ಪದವೀಧರರಿಗೆ ಟಾಟಾ ಸ್ಮಾರಕ ಆಸ್ಪತ್ರೆಯಲ್ಲಿ ನೇಮಕಾತಿ- ಒಂದು ಲಕ್ಷ ರೂ. ಸಂಬಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts