More

    ಸೇನಾ ಪಡೆಯಲ್ಲಿ 100 ವಿವಿಧ ಹುದ್ದೆಗಳಿಗೆ ಆಹ್ವಾನ: ಬೆಂಗಳೂರಿನಲ್ಲಿ ನೇಮಕಾತಿ ಪರೀಕ್ಷೆ

    ರಕ್ಷಣಾ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುವ ಅರ್ಮಿ ಸರ್ವೀಸ್​ ಕೋರ್​ ಸೆಂಟರ್​ನ (ಎಎಸ್​ಸಿ- ಸೌತ್​) ಬೆಂಗಳೂರು ಟಕ 2 ಎಟಿಸಿಯಲ್ಲಿ ವಿವಿಧ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತದೆ. ಆಸಕ್ತ ಅಭ್ಯರ್ಥಿಗಳು ಟೈಪ್​ ಮಾಡಿದ ಅಥವಾ ಕೈ ಬರಹದಲ್ಲಿ ಬರೆದ ಅರ್ಜಿ ಯನ್ನು ಸಲ್ಲಿಸಲು ಸೂಚಿಸಲಾಗಿದೆ.

    ಹುದ್ದೆ ವಿವರ
    * ಸಿವಿಲ್​ ಮೋಟಾರ್​ ಡೆವರ್​ – 42
    * ಕ್ಲೀನರ್​ – 40
    * ಕುಕ್​ – 15
    * ಸಿವಿಲಿಯನ್​ ಕೆಟರಿಂಗ್​ ಇನ್​ಸ್ಟ್ರಕ್ಟರ್​ – 3

    ಶೈಕ್ಷಣಿಕ ಅರ್ಹತೆ: ಎಸ್ಸೆಸ್ಸೆಲ್ಸಿ, ಡಿಪ್ಲೊಮಾ, ಭಾರಿ ಹಾಗೂ ಲು ವಾಹನದ ವಾಹನ ಚಾಲನಾ ಪರವಾನಗಿ ಹೊಂದಿರಬೇಕು. ಅಡಿಗೆ ಮಾಡುವುದರಲ್ಲಿ ಪರಿಣಿತಿ ಹೊಂದಿರಬೇಕು. ಬೇಸಿಕ್​ ಇಂಗ್ಲಿಷ್​ ಭಾಷಾ ಜ್ಞಾನ ಅವಶ್ಯ.

    ವಯೋಮಿತಿ: ಕನಿಷ್ಠ 18 ವರ್ಷ ಗರಿಷ್ಠ 25 ವರ್ಷ ವಯೋಮಿತಿ ನಿಗದಿಪಡಿಸಲಾಗಿದ್ದು, ಮೀಸಲಾತಿ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮದನ್ವಯ ವಯೋಸಡಿಲಿಕೆ ಇದೆ.

    ಎಲ್ಲೆಲ್ಲಿ ನೇಮಕಾತಿ?: ಅಸ್ಸಾಂ, ಹರಿಯಾಣ, ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡಿನ ನಗರಗಳಾದ ಬೆಂಗಳೂರು, ಚೆನ್ನೆ$, ಜಲಂಧರ್​, ಕಪ್ರಲ್ಸ್​, ಮಿಸ್ಸಾಮರಿ, ಬಿಡಿ ಬರಿ, ಭಟಿಂಡಾ, ಕಾಲ್ಕಾ, ಮಥುರಾ, ಪಠಾನ್​ಕೋಟ್​, ಪುಣೆ, ಬೆಂಗ್ದುಬಿ, ಚಾಂದ್​ಮಂದಿರ್​, ಮುಂಬೈ, ದೆಹಲಿ ಕೇಂದ್ರಗಳಲ್ಲಿ ನೇಮಕ ಮಾಡಿಕೊಳ್ಳಲಾಗುವುದು.

    ಮೀಸಲಾತಿ: ಸಾಮಾನ್ಯವರ್ಗದ ಅಭ್ಯರ್ಥಿಗೆ 32 ಸ್ಥಾನ, ಎಸ್ಸಿಗೆ 14, ಎಸ್ಟಿಗೆ 7, ಇತರ ಹಿಂದುಳಿದ ವರ್ಗಕ್ಕೆ 26, ಆಥಿರ್ಕವಾಗಿ ದುರ್ಬಲವಾಗಿರುವ ಅಭ್ಯರ್ಥಿಗೆ 86, ಎಂಎಸ್​ಪಿಗೆ 4, ಮಾಜಿ ಸೈನಕರಿಗೆ 9 ಸ್ಥಾನ ಮೀಸಲಿರಿಸಲಾಗಿದೆ.

    ವೇತನ: ಡೆವರ್​ಗೆ ಮಾಸಿಕ 19,900 ರೂ., ಕ್ಲೀನರ್​ಗೆ ಮಾಸಿಕ 18,000 ರೂ., ಕುಕ್​ಗೆ ಮಾಸಿಕ 19,900ರೂ. ಹಾಗೂ ಇನ್​ಸ್ಟ್ರಕ್ಟರ್​ಗೆ ಮಾಸಿಕ 19,900 ರೂ. ವೇತನ ಇದ್ದು, ವಾಷಿರ್ಕ ಶೇ.3 ವೇತನ ಹೆಚ್ಚಳ ಇರುತ್ತದೆ.

    ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ, ಕೌಶಲ ಪರೀಕ್ಷೆ, ದೈಹಿಕ ಪರೀಕ್ಷೆ ನಡೆಸಿ ಆಯ್ದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಆಹ್ವಾನಿಸಲಾಗುವುದು. ಎಲ್ಲ ಪರೀಕ್ಷೆಗಳ ಕೇಂದ್ರವು ಬೆಂಗಳೂರು ಆಗಿರುತ್ತದೆ.
    ಅರ್ಜಿ ಸಲ್ಲಿಸಲು ಕೊನೇ ದಿನ: 11.7.2021 (ಅಧಿಸೂಚನೆ ಹೊರಡಿಸಿದ 30 ದಿನದ ಒಳಗೆ)
    ಅರ್ಜಿ ಸಲ್ಲಿಸುವ ವಿಳಾಸ: Presiding Officer, Civilian Direct Recruitment Board, CHQ, ASC Centre South – 2 ATC, Agram post, Bangalore-530007

    ಅಧಿಸೂಚನೆಗೆ: https://bit.ly/3gAT0XQ

    ಮಾಹಿತಿಗೆ: indianarmy.nic.in

    ಕೇಂದ್ರ ಸರ್ಕಾರದ ಜವಳಿ ಸಚಿವಾಲಯದಲ್ಲಿ ವಿವಿಧ ಹುದ್ದೆಗಳಿಗೆ ಆಹ್ವಾನ- ಕೆಲವೇ ದಿನಗಳು ಬಾಕಿ

    ವಿವಿಧ ಪದವೀಧರರಿಗೆ ಸಿಸಿಐನಲ್ಲಿ ಭರಪೂರ ಉದ್ಯೋಗಾವಕಾಶ- 46 ಹುದ್ದೆಗಳಿಗೆ ಆಹ್ವಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts