ನ್ಯೂಸ್

ವಿಜ್ಞಾನ ವಿಭಾಗದ ಪದವೀಧರರಿಗೆ ಆಯುರ್ವೇದ ಸಂಸ್ಥೆಯಲ್ಲಿ ಉದ್ಯೋಗಾವಕಾಶ

suchetana

ಬೆಂಗಳೂರಿನಲ್ಲಿರುವ ಸೆಂಟ್ರಲ್ ಆಯುರ್ವೇದ ರಿಸರ್ಚ್ ಇನ್‍ಸ್ಟಿಟ್ಯೂಟ್ ಕೇಂದ್ರ ಆಯುಷ್ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಪ್ರಸ್ತುತ ಗುತ್ತಿಗೆ ಆಧಾರದಲ್ಲಿ ವಿವಿಧ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲು ನೇರ ಸಂದರ್ಶನಕ್ಕೆ ಮುಂದಾಗಿದೆ.

ಒಟ್ಟು ಹುದ್ದೆಗಳು: 19

ಆಯುರ್ವೇದ ಸಂಸ್ಥೆ ಮಧುಮೇಹಕ್ಕೆ ಸಂಬಂಧಿಸಿದ Centre of Excellence in Research and Clinical services for Madhumeha (Diabetes Mellitus) ಯೋಜನೆಯಲ್ಲಿ ಕಾರ್ಯನಿರ್ವಹಿಸಲು ಅರ್ಹ ಅಭ್ಯರ್ಥಿಗಳ ಹುಡುಕಾಟದಲ್ಲಿದ್ದು, ಅಭ್ಯರ್ಥಿಗಳನ್ನು ನೇರ ಸಂದರ್ಶನಕ್ಕೆ ಆಹ್ವಾನಿಸಿದೆ. ಈ ಹುದ್ದೆಗಳು 3 ವರ್ಷದ ಒಪ್ಪಂದಕ್ಕೆ ಒಳಪಟ್ಟಿದ್ದು, ಲಿಖಿತ ಪರೀಕ್ಷೆ/ ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವುದು.

ಹುದ್ದೆ ವಿವರ

* ಕನ್ಸಲ್ಟಂಟ್ (ಆಯುರ್ವೇದ-1, ಅಡ್ಮಿನ್ - 1, ಮೆಡಿಸಿನ್-1) - 3

* ಎಸ್‍ಆರ್‍ಎï (ಐಟಿ-1, ಆಯುರ್ವೇದ -2, ಯೋಗ- 1, ಬಯೋ-ಸ್ಟಾೃಟಿಸ್ಟಿಕ್ಸ್-1, ಕೆಮಿಸ್ಟ್ರಿ-1) - 6

* ಸೋಷಿಯಲ್ ವರ್ಕರ್ - 2

* ಡೇಟಾ ಎಂಟ್ರಿ ಆಪರೇಟರ್ - 2

* ಮಲ್ಟಿ ಟಾಸ್ಕಿಂಗ್ ಅಟೆಂಡೆಂಟ್ - 2

* ಪಂಚಕರ್ಮ ಟೆಕ್ನಿಷಿಯನ್ - 2

* ಡ್ರೈವರ್ - 1

* ಸ್ಪೆಷಲಿಸ್ಟ್ ಕನ್ಸಲ್ಟಂಟ್ - 1

ವಿದ್ಯಾರ್ಹತೆ: ಎಸ್ಸೆಸ್ಸೆಲ್ಸಿ, ಪಂಚಕರ್ಮ ಟೆಕ್ನಿಷಿಯನ್ ಕೋರ್ಸ್‍ನಲ್ಲಿ ಡಿಪ್ಲೋಮಾ, ಪದವಿ, ಸೋಷಿಯಲ್ ವರ್ಕ್/ ಕ್ಲಿನಿಕಲ್ ಸೈಕಾಲಜಿ, ಆಯುರ್ವೇದಿಕ್ ಮೆಡಿಸಿನ್‍ನಲ್ಲಿ ಪದವಿ, ಕೆಮಿಸ್ಟ್ರಿಯಲ್ಲಿ ಸ್ನಾತಕೋತ್ತರ ಪದವಿ/ ಕೆಮಿಕಲ್ ಸೈನ್ಸ್, ಕಂಪ್ಯೂಟರ್ ಸೈನ್ಸ್, ಇನ್​ಫರ್ಮೇಷನ್ ಟೆಕ್ನಾಲಜಿಯಲ್ಲಿ ಬಿ.ಟೆಕ್, ಸ್ಟ್ಯಾಟಿಸ್ಟಿಕ್ಸ್‍ನಲ್ಲಿ ಸ್ನಾತಕೋತ್ತರ ಪದವಿ, ಯೋಗ ಎಂಎಸ್ಸಿ, ಬಿಎಎಂಎಸ್, ಎಂಬಿಬಿಎಸ್, ಎಂಡಿ ಮಾಡಿದ್ದು, ವೃತ್ತಿ ಅನುಭವ ಹೊಂದಿರಬೇಕು.

ವಯೋಮಿತಿ: ಕನ್ಸಲ್ಟಂಟ್ ಹುದ್ದೆಗೆ ಗರಿಷ್ಠ 65 ವರ್ಷ, ಎಸ್‍ಆರ್‍ಎಫ್​ಗೆ ಗರಿಷ್ಠ 35 ವರ್ಷ, ಉಳಿದ ಹುದ್ದೆಗಳಿಗೆ ಗರಿಷ್ಠ 30 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.

ವೇತನ: ಕನ್ಸಲ್ಟಂಟ್ ಹುದ್ದೆಗೆ ಮಾಸಿಕ 50,000 ರೂ., ಜೆಆರ್‍ಎಫ್​ಗೆ ಮಾಸಿಕ 35,000 ರೂ. ವೇತನ ಹಾಗೂ ಶೇ.24 ಮನೆ ಬಾಡಿಗೆ ಭತ್ಯೆ, ಮಲ್ಟಿ ಟಾಸ್ಕಿಂಗ್ ಅಟೆಂಡೆಂಟ್‍ಗೆ ಮಾಸಿಕ 16,000 ರೂ., ಸ್ಪೆಷಲಿಸ್ಟ್​ಗೆ ಪ್ರತಿ ಭೇಟಿಗೆ 3000 ರೂ. ಹಾಗೂ ಉಳಿದ ಹುದ್ದೆಗಳಿಗೆ ಮಾಸಿಕ 20,000 ರೂ. ವೇತನ ನಿಗದಿಪಡಿಸಲಾಗಿದೆ.

ಸಂದರ್ಶನಕ್ಕೆ ಹಾಜರಾಗುವ ದಿನ: ಏಪ್ರಿಲ್ 21 ಮತ್ತು 22 ರಂದು ಬೆಳಗ್ಗೆ 10 ಗಂಟೆಯಿಂದ

ಸಂದರ್ಶನ ನಡೆಯುವ ಸ್ಥಳ: # 12, U ttarahalli M anavarthe K aval, U ttarahalli (H obli), B angalore South (Tq.), K anakapura M ain Road, T alaghattapura (post), B engaluru-560109

ಅಧಿಸೂಚನೆಗೆ: https://bit.ly/31WTekT

ಮಾಹಿತಿಗೆ: http://www.ccras.nic.in

ಹೆಚ್ಚಿನ ಉದ್ಯೋಗ ಸುದ್ದಿಗೆ ಕ್ಲಿಕ್ಕಿಸಿ: