ಭಾರತೀಯ ರಿಸರ್ವ್ ಬ್ಯಾಂಕ್ ನೋಟ್ ಮುದ್ರಣ್ ಪ್ರೈವೇಟ್ ಲಿಮಿಟೆಡ್ನ ನೆಟ್ವರ್ಕಿಂಗ್ ಮತ್ತು ಸೈಬರ್ ಸೆಕ್ಯುರಿಟಿ ವಿಭಾಗದಲ್ಲಿ ಡೆಪ್ಯುಟಿ ಮ್ಯಾನೇಜರ್ ಹಾಗೂ ಇಆರ್ಪಿ ವಿಭಾಗದಲ್ಲಿ ಮ್ಯಾನೇಜರ್ ಹುದ್ದೆಗೆ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಒಟ್ಟು ಹುದ್ದೆಗಳು: 9
ಆಯ್ಕೆ ಆಗುವ ಅಭ್ಯರ್ಥಿಗಳನ್ನು ಮೈಸೂರು, ಪಶ್ಚಿಮ ಬಂಗಾಳದ ಸಾಲ್ಬೋನಿಯಲ್ಲಿರುವ ಮುದ್ರಣ ಘಟಕ ಹಾಗೂ ಬೆಂಗಳೂರಿನ ಕಾಪೋರೇಟ್ ಕಚೇರಿಗೆ ನೇಮಕ ಮಾಡಿಕೊಳ್ಳಲಾಗುತಿದೆ. ಆನ್ಲೈನ್ ಅರ್ಜಿಯನ್ನು ವೆಬ್ಸೈಟ್ನಲ್ಲಿ ಪಡೆಯಬಹುದಾಗಿದೆ.
ಹುದ್ದೆ ವಿವರ
* ಡೆಪ್ಯುಟಿ ಮ್ಯಾನೇಜರ್ - 6
ನೆಟ್ವರ್ಕಿಂಗ್, ಸೈಬರ್ ಸೆಕ್ಯುರಿಟಿ ಕ್ಷೇತ್ರದಲ್ಲಿ ತಾಂತ್ರಿಕ ಮತ್ತು ಕ್ರಿಯಾತ್ಮಕ ಪ್ರಾವಿಣ್ಯತೆ ಹಾಗೂ ವೃತ್ತಿ ಅನುಭವ ಇರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು. ಕಂಪ್ಯೂಟರ್ ಸೈನ್ಸ್/ ಎಲೆಕ್ಟ್ರಾನಿಕ್ಸ್ ಆಂಡ್ ಕಮ್ಯುನಿಕೇಷನ್/ ಇನ್ಫಮೇಷನ್ ಟೆಕ್ನಾಲಜಿಯಲ್ಲಿ ಬಿಇ/ಬಿ.ಟೆಕ್ ಪದವಿ ಪಡೆದಿರುವ ಅಭ್ಯರ್ಥಿಗಳು ಅರ್ಹರಾಗಿದ್ದು, ಗರಿಷ್ಠ 30-45 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಮೀಸಲಾತಿ ಅಭ್ಯರ್ಥಿಗಳಿಗೆ ವಯೋ ಸಡಿಲಿಕೆ ಇದೆ. 7ನೇ ವೇತನ ಆಯೋಗದ 11ನೇ ಶ್ರೇಣಿಯನ್ವಯ ಮಾಸಿಕ 69,700 ರೂ. ವೇತನ ಇದ್ದು, ಡಿಎ, ಗ್ರಾಚುಟಿ, ಸಿಪಿಎಫ್ ಹಾಗೂ ಇತರ ಭತ್ಯೆಗಳು ಇದೆ. ಎಸ್ಸಿ, ಎಸ್ಟಿ, ಅಂಗವಿಕಲ, ಮಹಿಳಾ, ಮಾಜಿ ಸೈನಿಕ ಹಾಗೂ ಸಂಸ್ಥೆ ಅಭ್ಯರ್ಥಿಗಳನ್ನು ಹೊರತುಪಡಿಸಿ ಉಳಿದ ಅಭ್ಯರ್ಥಿಗಳು 300 ರೂ. ಅರ್ಜಿ ಶುಲ್ಕ ಪಾವತಿಸತಕ್ಕದ್ದು.
* ಮ್ಯಾನೇಜರ್ ಇಆರ್ಪಿ - 3
ಯಾವುದೇ ಇಂಜಿನಿಯರಿಂಗ್ ವಿಷಯದಲ್ಲಿ ಮೊದಲ ದರ್ಜೆಯಲ್ಲಿ ಪದವಿ ಪಡೆದಿರಬೇಕು. ಟೆಕ್ನಾಲಜಿ/ ಅಪ್ಲಿಕೇಷನ್ ಸ್ಪೆಷಲಿಸ್ಟ್ನಲ್ಲಿ ಎಸ್ಎಪಿ ಪ್ರಮಾಣಪತ್ರ ಪಡೆದಿರಬೇಕು. ವೃತ್ತಿ ಅನುಭವ ಕೇಳಲಾಗಿದೆ. ಕನಿಷ್ಠ 35 ರಿಂದ 50 ವರ್ಷ ವಯೋಮಿತಿ ನಿಗದಿಪಡಿಸಲಾಗಿದ್ದು, 2.10.1971-1.10.1986ರ ನಡುವೆ ಜನಿಸಿರಬೇಕು. ಮಾಸಿಕ 1,26,000 ರೂ. ವೇತನ ಇದೆ. ಆಯ್ಕೆಯಾಗುವ ಅಭ್ಯರ್ಥಿಗಳನ್ನು ಒಂದು ವರ್ಷ ಪ್ರೊಬೆಷನರಿ ಅವಧಿಗೆ ಒಳಪಡಿಸಲಾಗುವುದು. ಈ ಹುದ್ದೆಗೆ ಅರ್ಜಿ ಶುಲ್ಕ ಇಲ್ಲ.
ಆಯ್ಕೆ ಪ್ರಕ್ರಿಯೆ: ಆನ್ಲೈನ್ ಮೂಲಕ ಬಹು ಆಯ್ಕೆ ಮಾದರಿಯ ಲಿಖಿತ ಪರೀಕ್ಷೆ ನಡೆಸಲಾಗುವುದು. ನಂತರ ಗುಂಪು ಚರ್ಚೆ ಮತ್ತು ಸಂದರ್ಶನ ಇರುತ್ತದೆ. ಲಿಖಿತ ಪರೀಕ್ಷೆಯನ್ನು ಡಿಸೆಂಬರ್ನಲ್ಲಿ ನಡೆಸಲಾಗುವುದು. ಇದಕ್ಕೆ ಸಂಬಂಧಿಸಿದ ಮಾಹಿತಿಯನ್ನು ವೆಬ್ಸೈಟ್ನಲ್ಲಿ ನೀಡಲಾಗುವುದು. ಬೆಂಗಳೂರು, ಚೆನ್ನೈ, ಕೋಲ್ಕತ್ತ, ದೆಹಲಿ, ಮುಂಬೈನಲ್ಲಿ ಪರೀಕ್ಷಾ ಕೇಂದ್ರ ಇರಲಿದ್ದು, ಅಭ್ಯರ್ಥಿಗಳು ಯಾವುದಾದರೂ ಒಂದು ಕೇಂದ್ರ ಆಯ್ಕೆ ಮಾಡಿಕೊಳ್ಳಬಹುದಾಗಿದೆ.
ಅರ್ಜಿ ಸಲ್ಲಿಸಲು ಕೊನೇ ದಿನ: 19.11.2021
ಅಧಿಸೂಚನೆಗೆ: https://bit.ly/3EwJj71
ಮಾಹಿತಿಗೆ: http://www.brbnmpl.co.in