ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮ (ಎನ್ಎಂಡಿಸಿ) ಚತ್ತೀಸಗಢ್ದ ಬಛೇಲಿ ಟಕದಲ್ಲಿ ಅಪ್ರೆಂಟೀಸ್ ಹಾಗೂ ಇತರ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಒಟ್ಟು ಹುದ್ದೆಗಳು: 59
ಎನ್ಎಂಡಿಸಿ ಲಿಮಿಟೆಡ್ನಲ್ಲಿನ ಅಪ್ರೆಂಟೀಸ್ ತರಬೇತಿಗೆ ಹಾಜರಾಗಲು ಆಸಕ್ತರಾಗಿರುವ ಅಭ್ಯರ್ಥಿಗಳು ತಮ್ಮ ಸ್ವವಿವರ, ಶೈಕ್ಷಣಿಕ ಪ್ರಮಾಣಪತ್ರ, ಭಾವಚಿತ್ರ ಹಾಗೂ ಇತರ ಅಗತ್ಯ ದಾಖಲೆಗಳನ್ನು ಅರ್ಜಿಸಲ್ಲಿಕೆ ಅಂತಿಮ ದಿನಾಂಕದ ಒಳಗಾಗಿ ಇಮೇಲ್ ವಿಳಾಸ www.mhrdnats.gov.inಗೆ ಮೇಲ್ ಮಾಡಲು ಕೋರಲಾಗಿದೆ. ಅಪ್ರೆಂಟೀಸ್ ತರಬೇತಿಯು ಒಂದು ವರ್ಷ ಇರಲಿದೆ.
ಹುದ್ದೆ ವಿವರ
* ಗ್ರಾಜುಯೇಟ್ ಅಪ್ರೆಂಟೀಸ್ - 16
* ಟೆಕ್ನಿಷಿಯನ್ ಅಪ್ರೆಂಟೀಸ್ - 13
* ಪ್ರೋಗ್ರಾಮಿಂಗ್ ಆ್ಯಂಡ್ ಸಿಸ್ಟಂ ಅಡ್ಮಿನಿಸ್ಟ್ರೆಷನ್ ಅಸಿಸ್ಟೆಂಟ್ (ಪಿಎಎಸ್ಎಎಎ) - 30
ವಿದ್ಯಾರ್ಹತೆ: ಸಿವಿಲ್, ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಎಲೆಕ್ಟ್ರಿಕಲ್ ಆ್ಯಂಡ್ ಎಲೆಕ್ಟ್ರಾನಿಕ್ಸ್, ಮೈನಿಂಗ್ ಇಂಜಿನಿಯರಿಂಗ್ನಲ್ಲಿ 4 ವರ್ಷದ ಪದವಿ, ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್ ಆ್ಯಂಡ್ ಟೆಲಿ ಕಮ್ಯುನಿಕೇಷನ್, ಮೈನಿಂಗ್, ಮಾರ್ಡನ್ ಆಫೀಸ್ ಪ್ರಾಕ್ಟೀಸ್ ಮ್ಯಾನೇಜ್ಮೆಂಟ್ ಮತ್ತು ಕಂಪ್ಯೂಟರ್ ಸೈನ್ಸ್ ಆ್ಯಂಡ್ ಅಪ್ಲಿಕೇಷನ್ನಲ್ಲಿ 3 ವರ್ಷದ ಡಿಪ್ಲೊಮಾ, ಕಂಪ್ಯೂಟರ್ ಆಪರೇಟರ್ ಆ್ಯಂಡ್ ಪ್ರೋಗ್ರಾಮಿಂಗ್ ಅಸಿಸ್ಟೆಂಟ್ (ಸಿಒಪಿಎ)ನಿಂದ ವೃತ್ತಿಪರ ತರಬೇತಿಗಾಗಿ ಪಡೆದ ರಾಷ್ಟ್ರೀಯ ಕೌನ್ಸಿಲ್ ನೀಡಿದ ರಾಷ್ಟ್ರೀಯ ಟ್ರೇಡ್ ಪ್ರಮಾಣಪತ್ರ ಹೊಂದಿರುವವರು ಅರ್ಜಿಸಲ್ಲಿಸಬಹುದು. (ಸೂಚನೆ: ಪದವಿ/ ಡಿಪ್ಲೊಮಾ/ಐಟಿಐ ಮುಗಿಸಿ 3 ವರ್ಷ ಆಗಿರುವ ಅಭ್ಯರ್ಥಿಗಳು, ಈಗಾಗಲೇ ಅಪ್ರೆಂಟಿಷಿಪ್ ತರಬೇತಿ ಪಡೆದಿರುವ ಅಭ್ಯರ್ಥಿಗಳು, 1 ವರ್ಷಕ್ಕಿಂತ ಹೆಚ್ಚು ವೃತ್ತಿ ಅನುಭವ ಇರುವ ಅಭ್ಯರ್ಥಿಗಳು ಅರ್ಹರಲ್ಲ.)
ಸ್ಟೆ$ಪೆಂಡ್: ಗ್ರಾಜುಯೇಟ್ ಅಪ್ರೆಂಟೀಸ್‌ಗೆ ಮಾಸಿಕ 20,000 ರೂ., ಟೆಕ್ನಿಷಿಯನ್ ಅಪ್ರೆಂಟೀಸ್‌ಗೆ ಮಾಸಿಕ 16,000 ರೂ., ಟ್ರೇಡ್ ಅಪ್ರೆಂಟೀಸ್‌ಗೆ ಮಾಸಿಕ 10,000 ರೂ. ಗೌರವಧನ ನೀಡಲಾಗುವುದು.
ಸೂಚನೆ: ಬಿಐಒಎಂ ಬಿಛೇಲಿ ಟಕದಲ್ಲಿ ಅಪ್ರೆಂಟೀಸ್ ತರಬೇತಿ ಪಡೆಯಬಯಸುವ ಟ್ರೇಡ್ ಅಪ್ರೆಂಟೀಸ್ ಅಭ್ಯರ್ಥಿಗಳು www.mhrdnats.gov.in
ನಲ್ಲಿ ನೋಂದಾಯಿತರಾಗಿರಬೇಕು. ಪದವಿ ಹಾಗೂ ಐಟಿ ಅಪ್ರೆಂಟಿಷಿಪ್ ತರಬೇತಿ ಪಡೆಯಬಯಸುವ ಅಭ್ಯರ್ಥಿಗಳು ಡಿಡಿಡಿ.ಞಜ್ಟಛ್ಞಚಠಿಠ.ಜಟಡ.ಜ್ಞಿ ನಲ್ಲಿ ಕಡ್ಡಾಯವಾಗಿ ನೋಂದಾಯಿತರಾಗಿರಬೇಕು.
ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳ ಶೈಕ್ಷಣಿಕ ಅಂಕ ಆದರಿಸಿ ಮೆರಿಟ್ ಲಿಸ್ಟ್ ಸಿದ್ಧಡಿಸಲಾಗುವುದು. ಶಾರ್ಟ್ಲಿಸ್ಟ್ನಲ್ಲಿರುವ ಅಭ್ಯರ್ಥಿಗಳಿಗೆ ಮೇಲ್/ ಅಂಚೆ/ ಎಸ್ಎಂಎಸ್ ಮೂಲಕ ಮುಂದಿನ ಆಯ್ಕೆ ವಿಧಾನ ತಿಳಿಸಲಾಗುವುದು.
ಅರ್ಜಿಸಲ್ಲಿಸಲು ಕೊನೇ ದಿನ: 15.6.2021
ಅಧಿಸೂಚನೆಗೆ: https://bit.ly/34m5Svc
ಮಾಹಿತಿಗೆ: www.nmdc.co.in