ನ್ಯೂಸ್

ವಿವಿಧ ಪದವೀಧರಿಗೆ ಜೈವಿಕ ತಂತ್ರಜ್ಞಾನ ಸಂಸ್ಥೆಯಲ್ಲಿ ನೇಮಕಾತಿ- 49 ಹುದ್ದೆಗಳಿಗೆ ಆಹ್ವಾನ

ಜೈವಿಕ ತಂತ್ರಜ್ಞಾನ ಇಲಾಖೆಯ ಅಧೀನದಲ್ಲಿ ಕಾರ್ಯನಿರ್ವಹಿಸುವ ರೀಜನಲ್​ ಸೆಂಟರ್​ ಫಾರ್​ ಬಯೋಟೆಕ್ನಾಲಜಿ (ಆರ್​ಸಿಬಿ) ಜೈವಿಕ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ವಿಶ್ವಮಟ್ಟದ ಶಿಕ್ಷಣ, ತರಬೇತಿ, ಸಂಶೋಧನೆ ನಡೆಸಿ ಉತ್ತಮ ಗುಣಮಟ್ಟದ ಮಾನವ ಸಂಪನ್ಮೂಲವನ್ನು ರಚಿಸುವ ಕಾರ್ಯದಲ್ಲಿ ತೊಡಗಿಕೊಂಡಿದೆ. ಪ್ರಸ್ತುತ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ. ಹಲವು ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪ್ರತ್ಯೇಕ ಅರ್ಜಿ ಸಲ್ಲಿಸಬೇಕು. ಎಸ್​ಸಿ, ಎಸ್​ಟಿ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಆಹ್ವಾನಿಸಿದರೆ ಅವರಿಗೆ 2ನೇ ದರ್ಜೆಯ ರೈಲ್ವೆ ಪ್ರಯಾಣ ಭತ್ಯೆ ನೀಡಲಾಗುವುದು.

ಒಟ್ಟು ಹುದ್ದೆಗಳು: 49

ಇಂಡಿಯನ್​ ಬಯಾಲಾಜಿಕಲ್​ ಡೇಟಾ ಸೆಂಟರ್​ ಫೇಸ್​1 ರಲ್ಲಿ ಸೀನಿಯರ್​ ಸೈಂಟಿಸ್ಟ್​ (ಬಯೋಇನ್​ಫಾರ್ಮಾಟಿಕ್ಸ್​/ ಐಟಿ) - 2,

ರಿಸರ್ಚ್​ ಕನ್ಸಲ್ಟಂಟ್​ - 2,

ಡೇಟಾಬೇಸ್​ ಮ್ಯಾನೇಜರ್​ - 4,

ಸೈಂಟಿಸ್ಟ್​ - 2,

ಡೇಟಾ ಬೇಸ್​ ಇಂಜಿನಿಯರ್​/ ಸಾಫ್ಟ್‌ವೇರ್​ ಡೆವಲಪರ್​ - 10,

ಡೇಟಾ ಕ್ಯುರೇಟರ್​ - 12,

ಸಿಸ್ಟಂ ಅಡ್ಮಿನಿಸ್ಟ್ರೆಟರ್​ - 3,

ಸ್ಟೋರೇಜ್​ ಅಡ್ಮಿನಿಸ್ಟ್ರೆಟರ್​ - 2,

ನೆಟ್​ವರ್ಕ್​ ಅಡ್ಮಿನಿಸ್ಟ್ರೆಟರ್​ - 2,

ಸೀನಿಯರ್​ ಪ್ರೋಗ್ರಾಮರ್​ - 2,

ಅಡ್ಮಿನಿಸ್ಟ್ರೆಟೀವ್​ ಆಫೀಸರ್​ - 1,

ಪ್ರೋಗ್ರಾಮರ್​ - 3,

ಟೆಕ್ನಿಕಲ್​ ಅಸಿಸ್ಟೆಂಟ್​-ಎ - 1 ಹುದ್ದೆ ಇದೆ.

ಬಿಎಸ್​ಸಿ ಬಯೋನೆಸ್ಟ್​ ಬಯೋ-ಇನ್​ಕ್ಯುಬೇಟರ್​ (ಬಿಬಿಬಿ)ಯಲ್ಲಿ ಟೆಕ್ನಿಕಲ್​ ಅಸಿಸ್ಟೆಂಟ್​ - 1, ಡಿಬಿಟಿ-ಎಚ್​ಆರ್​ಡಿ ಪ್ರಾಜೆಕ್ಟ್​ ಆ್ಯಂಡ್​ ಮ್ಯಾನೇಜ್​ಮೆಂಟ್​ ಯೂನಿಟ್​ (ಪಿಎಂಯು)ಯಲ್ಲಿ ಗ್ರಾಂಟ್ಸ್​ ಅಡ್ವೈಸರ್​ - 1, ಸೀನಿಯರ್​ ಅಕೌಂಟ್ಸ್​ ಅಸಿಸ್ಟೆಂಟ್​ - 1 ಹುದ್ದೆ ಇದೆ.

ಬಿಕಾಂ/ಬಿಬಿಎ/ಸಿಎ/ಐಸಿಡಬ್ಲುಎ, ಲೈಫ್‌ ಸೈನ್ಸ್​ನಲ್ಲಿ ಪದವಿ, ಸಿಎಸ್​/ ಐಟಿ/ ಇ ಆ್ಯಂಡ್​ ಸಿಯಲ್ಲಿ ಬಿ.ಟೆಕ್​/ಎಂಎಸ್ಸಿ/ ಎಂಸಿಎ, ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ, ಪಿಎಚ್​ಡಿ ಮಾಡಿದ್ದು, ಕಂಪ್ಯೂಟರ್​ ಜ್ಞಾನ ಜತೆ ವೃತ್ತಿ ಅನುಭವ ಇರುವ ಹುದ್ದೆಗಳಿಗೆ ಅನುಗುಣವಾಗಿ ಗರಿಷ್ಠ 30, 35 ರಿಂದ 50 ವರ್ಷ ವಯೋಮಿತಿಯಲ್ಲಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಹುದ್ದೆಗಳಿಗೆ ಅನುಗುಣವಾಗಿ ಮಾಸಿಕ 40,000 ರೂ. ನಿಂದ 2,04,416 ರೂ. ವೇತನ ನಿಗದಿಪಡಿಸಲಾಗಿದೆ.

ಅಧಿಸೂಚನೆಗೆ: https://bit.ly/3bkPUW8

ಮಾಹಿತಿಗೆ: www.rcb.res.in