ನ್ಯೂಸ್

ಎಚ್​ಎಲ್​ಎಲ್ ಹೆಲ್ತ್​ಕೇರ್​ನಲ್ಲಿ ಪದವೀಧರರ ನೇಮಕಾತಿ: 56 ಹುದ್ದೆಗಳಿಗೆ ಆಹ್ವಾನ

suchetana

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸಯವ ಸಾರ್ವಜನಿಕ ವಲಯದ ಉದ್ಯಮ ಹಾಗೂ ಮಿನಿರತ್ನ ಸಂಸ್ಥೆಗಳಲ್ಲಿ ಒಂದಾಗಿರುವ ಎಚ್​ಎಲ್​ಎಲ್ ಲೈಫ್​ಕೇರ್ ಲಿಮಿಟೆಡ್ ಉತ್ತಮ ಗುಣಮಟ್ಟದ ಆರೋಗ್ಯ ಉತ್ಪನ್ನ ಮತ್ತು ಸೇವೆಗಳ ಕುರಿತು ಕಾರ್ಯನಿರ್ವಹಿಸುತ್ತದೆ. ಪ್ರಸ್ತುತ ಸಂಸ್ಥೆಯ ವಿವಿಧ ಘಟಕಗಳಲ್ಲಿ ಖಾಲಿ ಇರುವ ಹಲವು ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿ ಅಧಿಸೂಚನೆ ಹೊರಡಿಸಿದೆ.

ಯಾವ ನಗರಗಳಲ್ಲಿ ನೇಮಕಾತಿ?:

ಕರ್ನಾಟಕ ಸೇರಿದಂತೆ ತಮಿಳುನಾಡು, ಚೆನ್ನೈ, ಆಂಧ್ರಪ್ರದೇಶ, ತೆಲಂಗಾಣ, ಗೋವಾ, ಕೇರಳ, ಪಂಜಾಬ್, ಹರಿಯಾಣ, ಚಂಡೀಗಢ, ಮಹಾರಾಷ್ಟ್ರ, ಮುಂಬೈ/ನಾಗ್​ಪುರಗಳಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದೆ.

ದಕ್ಷಿಣ ಭಾರತದ ಹುದ್ದೆಗಳ ವಿವರ

* ಹಿಂದಿ ಟ್ರಾನ್ಸ್​ಲೇಟರ್- 1 * ಜೂನಿಯರ್ ಅಕೌಂಟ್ ಆಫೀಸರ್- 2

- ಫ್ರಂಟ್ ಲೈನ್ ಸೇಲ್ಸ್

* ಬಿಜಿನೆಸ್ ಡೆವಲಪ್​ವೆುಂಟ್ ಎಕ್ಸಿಕ್ಯೂಟೀವ್-ಐಐಐ (ಫಾರ್ಮ ಡಿವಿಷನ್) - 9

* ಏರಿಯಾ ಸೇಲ್ಸ್ ಮ್ಯಾನೇಜರ್ (ಫಾರ್ಮ ಡಿವಿಷನ್) - 1

* ಏರಿಯಾ ಸೇಲ್ಸ್ ಮ್ಯಾನೇಜರ್/ ಅಸಿಸ್ಟೆಂಟ್ ರೀಜನಲ್ ಮ್ಯಾನೇಜರ್/ ಡೆಪ್ಯುಟಿ ರೀಜನಲ್ ಮ್ಯಾನೇಜರ್ (ಕನ್​ಸ್ಯೂಮರ್ ಬಿಜಿನೆಸ್ ಡಿವಿಷನ್) - 6

-ಸೇಲ್ಸ್ ಆಂಡ್ ಸರ್ವಿಸ್ (ವೆಂಡಿಂಗ್ ಬಿಜಿನೆಸ್ ಡಿವಿಷನ್)

* ಮಾರ್ಕೆಟಿಂಗ್ ಎಕ್ಸಿಕ್ಯೂಟೀವ್/ ಬಿಜಿನೆಸ್ ಡೆವಲಪ್​ವೆುಂಟ್ ಎಕ್ಸಿಕ್ಯೂಟೀವ್/ ಸರ್ವಿಸ್ ಎಕ್ಸಿಕ್ಯೂಟೀವ್ - 2

- ಸಿವಿಲ್ ಪ್ರಾಜೆಕ್ಟ್​ಸ್ (ಹೈಕೇರ್ ಡಿವಿಷನ್)

* ಸೀನಿಯರ್ ಟೆಕ್ನಿಕಲ್ ಆಫೀಸರ್ - 2

* ಟೆಕ್ನಿಕಲ್ ಆಫೀಸರ್ - 7

* ಜೂನಿಯರ್ ಟೆಕ್ನಿಕಲ್ ಆಫೀಸರ್ - 1

* ಡೆಪ್ಯುಟಿ ರೀಜನಲ್ ಮ್ಯಾನೇಜರ್ ಪ್ರೊಕ್ಯೂರ್​ವೆುಂಟ್-1

* ಡೆಪ್ಯುಟಿ ರೀಜನಲ್ ಮ್ಯಾನೇಜರ್ ಪ್ರಾಜೆಕ್ಟ್​ಸ್ - 1

ವಿದ್ಯಾರ್ಹತೆ: ಹಿಂದಿಯಲ್ಲಿ ಎಂಎ, ಎಂಬಿಎ/ಎಂಕಾಂ, ಬಿಎ, ಬಿಇ, ಬಿಟೆಕ್, ಬಿಆರ್ಕ್, ಡಿಪ್ಲೊಮಾ ಪದವಿ ಜತೆ ಫಾರ್ಮ ಉತ್ಪನ್ನ, ಎಫ್​ಎಂಸಿಜಿ/ ಒಟಿಸಿ ಉತ್ಪನ್ನಗಳ ಸೇಲ್ಸ್, ಮಾರ್ಕೆಟಿಂಗ್, ಬಿಜಿನೆಸ್ ಡೆವಲಪ್​ವೆುಂಟ್/ ಅವೇರ್​ನೆಸ್ ಕ್ಯಾಪೇನ್/ ಸರ್ವಿಸ್ ಎಕ್ಸಿಪಿರಿಯನ್ಸ್ ಹಾಗೂ ವೃತ್ತಿ ಸಂಬಂಧಿತ ಕ್ಷೇತ್ರದಲ್ಲಿ ವೃತ್ತಿ ಅನುಭವ ಹೊಂದಿರಬೇಕು.

ವಯೋಮಿತಿ: ಎಲ್ಲ ಹುದ್ದೆಗೂ 1.10.2021ಕ್ಕೆ ಅನ್ವಯವಾಗುವಂತೆ ಗರಿಷ್ಠ 37 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.

ವೇತನ: ಹುದ್ದೆಗಳಿಗೆ ಅನುಗುಣವಾಗಿ ಮಾಸಿಕ 9,000 ರೂ. ನಿಂದ 32,500 ರೂ. ವರೆಗೆ ಇದೆ.

ಸೂಚನೆ: ಅಭ್ಯರ್ಥಿಗಳು ಆನ್​ಲೈನ್ ಅಥವಾ ಅಂಚೆ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಅಂಚೆ ಮೂಲಕ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಲಕೋಟೆ ಮೇಲೆ ಯಾವ ಹುದ್ದೆಗೆ ಅರ್ಜಿ ಸಲ್ಲಿಸಲಾಗುತ್ತಿದೆ ಎಂದು ಸ್ಪಷ್ಟವಾಗಿ ಬರೆದು GM (HR & ADMIN) HLL-CMO # 26/4 HLL BHAVAN, VELACHERY-TAMBARAM MAIN ROAD, PALLIKARANAI, CHENNAI - 600 100 600 100 ವಿಳಾಸಕ್ಕೆ ಕಳುಹಿಸಲು ಸೂಚಿಸಲಾಗಿದೆ.

ಅರ್ಜಿ ಸಲ್ಲಿಸಲು ಕೊನೇ ದಿನ: 30.10.2021

ಅಧಿಸೂಚನೆಗೆ: https://bit.ly/3mev28D

ಮಾಹಿತಿಗೆ: http://www.lifecarehll.com