ನ್ಯೂಸ್

ವಿವಿಧ ವಿಷಯಗಳಲ್ಲಿ ಡಿಪ್ಲೋಮಾ, ಇಂಜಿನಿಯರಿಂಗ್​ ಮುಗಿಸಿದವರಿಗೆ ಇಲ್ಲಿದೆ ಭರ್ಜರಿ ಅವಕಾಶ

suchetana

ಕೇಂದ್ರ ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುವ ಚೆನ್ನೈನಲ್ಲಿರುವ ಮದ್ರಾಸ್ ಫರ್ಟಿಲೈಸರ್ಸ್ ಲಿಮಿಟೆಡ್ ಒಂದು ವರ್ಷದ ಒಪ್ಪಂದದ ಅಡಿಯಲ್ಲಿ ಗ್ರಾಜುಯೇಟ್ ಮತ್ತು ಡಿಪ್ಲೋಮಾ ಪದವೀಧರರಿಂದ ಅಪ್ರೆಂಟಿಷಿಪ್‍ಗೆ ಅರ್ಜಿ ಆಹ್ವಾನಿಸಿ ಅಧಿಸೂಚನೆ ಹೊರಡಿಸಿದೆ. ಒಟ್ಟು ಸ್ಥಾನಗಳು: 45

ಅಪ್ರೆಂಟಿಸ್ ಆ್ಯಕ್ಟ್ 1973ರ ಅಡಿಯಲ್ಲಿ ತರಬೇತಿ ನೀಡಲಾಗುವುದು. ಈಗಾಗಲೇ ಅಪ್ರೆಂಟಿಸ್ ತರಬೇತಿ ಪಡೆದಿರುವ ಅಥವಾ ತರಬೇತಿ ಪಡೆಯುತ್ತಿರುವ ಅಭ್ಯರ್ಥಿಗಳಿಗೆ ಹಾಗೂ ಒಂದು ಅಥವಾ ಅದಕ್ಕಿಂತ ಹೆಚ್ಚಿನ ವೃತ್ತಿ ಅನುಭವ ಇರುವ ಅಭ್ಯರ್ಥಿಗಳಿಗೂ ಅವಕಾಶ ಇರುವುದಿಲ್ಲ.

-ಗ್ರಾಜುಯೇಟ್ ಅಪ್ರೆಂಟಿಸ್ (ಕೆಟಗರಿ ಐ) - 21

* ಕೆಮಿಕಲ್ (ಕೆಮಿಕಲ್, ಪೆಟ್ರೋಕೆಮಿಕಲ್, ಪೆಟ್ರೋಲಿಯಂ, ಪೆಟ್ರೋ-ಟೆಕ್ನಾಲಜಿ) ಇಂಜಿನಿಯರಿಂಗ್- 13

* ಮೆಕ್ಯಾನಿಕಲ್/ ಆಟೋಮೊಬೈಲ್ ಇಂಜಿನಿಯರಿಂಗ್ - 3

* ಎಲೆಕ್ಟ್ರಿಕಲ್ ಆ್ಯಂಡ್ ಎಲೆಕ್ಟ್ರಾನಿಕ್ಸ್/ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ - 1

* ಇನ್‍ಸ್ಟ್ರುಮೆಂಟೇಷನ್ (ಐಸಿಇ, ಇಐಇ) ಇಂಜಿನಿಯರಿಂಗ್ - 1

* ಸಿವಿಲ್ ಇಂಜಿನಿಯರಿಂಗ್ - 1

* ಐಟಿ/ ಸಿಎಸ್ -(ಇಸಿಇ) - 2

- ಟೆಕ್ನಿಷಿಯನ್ (ಡಿಪ್ಲೋಮಾ) ಅಪ್ರೆಂಟಿಸ್ (ಕೆಟಗರಿ ಐಐ)- 24

* ಕೆಮಿಕಲ್ - 15

* ಮೆಕ್ಯಾನಿಕಲ್/ ಆಟೋಮೊಬೈಲ್ ಇಂಜಿನಿಯರಿಂಗ್ - 4

* ಎಲೆಕ್ಟ್ರಿಕಲ್ ಆ್ಯಂಡ್ ಎಲೆಕ್ಟ್ರಾನಿಕ್ಸ್/ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ - 2

* ಇನ್‍ಸ್ಟ್ರುಮೆಂಟೇಷನ್ (ಐಸಿಇ, ಇಐಇ) ಇಂಜಿನಿಯರಿಂಗ್ - 2

* ಸಿವಿಲ್ ಇಂಜಿನಿಯರಿಂಗ್ - 1

ವಿದ್ಯಾರ್ಹತೆ: ಗ್ರಾಜುಯೇಟ್ ಅಪ್ರೆಂಟಿಸ್‍ಗೆ ಇಂಜಿನಿಯರಿಂಗ್/ ಟೆಕ್ನಾಲಜಿ ಪದವಿ, ಡಿಪೆÇ್ಲಮಾ ಅಪ್ರೆಂಟಿಸ್‍ಗೆ ಟೆಕ್ನಾಲಜಿ/ ಇಂಜಿನಿಯರಿಂಗ್‍ನಲ್ಲಿ ಡಿಪ್ಲೋಮಾ 2018, 2019, 2020ರ ಫೆಬ್ರವರಿಯಲ್ಲಿ ಉತ್ತೀರ್ಣರಾದವರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು.

ಸ್ಟೈಪೆಂಡ್: ಗ್ರಾಜುಯೇಟ್ ಅಪ್ರೆಂಟಿಸ್‍ಗೆ ಮಾಸಿಕ 20,000 ರೂ., ಟೆಕ್ನಿಷಿಯನ್ ಅಪ್ರೆಂಟಿಸ್‍ಗೆ ಮಾಸಿಕ 17,000 ರೂ. ವೇತನ ನಿಗದಿಯಾಗಿದೆ.

ಆಯ್ಕೆ ಪ್ರಕ್ರಿಯೆ: ಶೈಕ್ಷಣಿಕ ಅಂಕ ಆಧರಿಸಿ ಬೋರ್ಡ್ ಆï ಅಪ್ರೆಂಟಿಷಿಪ್ ಟ್ರೈನಿಂಗ್ ಅಭ್ಯರ್ಥಿಗಳ ಶಾರ್ಟ್ ಲಿಸ್ಟ್ ಸಿದ್ಧಪಡಿಸುತ್ತದೆ. ಶಾರ್ಟ್‍ಲಿಸ್ಟ್ ಮಾಡಲಾದ ಅಭ್ಯರ್ಥಿಗಳ ಹೆಸರನ್ನು ದಿನಾಂಕ 4.3.2021ರಂದು : http://www.boat-srp.com ವೆಬ್‍ಸೈಟ್‍ನಲ್ಲಿ ಪ್ರಕಟಿಸಲಾಗುವುದು. ನಂತರ ಚೆನ್ನೈನಲ್ಲಿ ನಡೆಯುವ ದಾಖಲಾತಿ ಪರೀಶೀಲನೆಗೆ ಮೇಲ್ ಮುಖಾಂತರ ಅಭ್ಯರ್ಥಿಗಳನ್ನು ಆಹ್ವಾನಿಸಲಾಗುವುದು.

ಸೂಚನೆ: ಆಸಕ್ತ ಅಭ್ಯರ್ಥಿಗಳು ಎನ್‍ಎಟಿಎಸ್ ವೆಬ್‍ಸೈಟ್ http://o www.mhrdnats.gov.in ನಲ್ಲಿ ದಿನಾಂಕ 24.2.2021ರ ಒಳಗಾಗಿ ಹೆಸರು ನೋಂದಾಯಿಸಿಕೊಂಡಿರಬೇಕು.

ಅರ್ಜಿ ಸಲ್ಲಿಸಲು ಕೊನೇ ದಿನ: 1.3.2021 ಅಧಿಸೂಚನೆಗೆ: https://bit.ly/2Zi8iIy ಮಾಹಿತಿಗೆ: http://madrasfert.co.in ಹೆಚ್ಚಿನ ಉದ್ಯೋಗ ಸುದ್ದಿಗೆ ಕ್ಲಿಕ್ಕಿಸಿ: https://www.vijayavani.net/category/%e0%b2%89%e0%b2%a6%e0%b3%8d%e0%b2%af%e0%b3%8b%e0%b2%97-%e0%b2%ae%e0%b2%bf%e0%b2%a4%e0%b3%8d%e0%b2%b0/ ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್ಸ್​ ಮಾಡಿ