More

    ಎಣ್ಣೆಬೀಜ ಬೆಳೆಗಾರರ ಸಂಘಕ್ಕೆ ಬೇಕಾಗಿದ್ದಾರೆ ಎಕ್ಸಿಕ್ಯೂಟಿವ್ಸ್​- ನೀವೂ ಅರ್ಹರಾ ನೋಡಿ…

    ಪ್ರಾದೇಶಿಕ ಎಣ್ಣೆಬೀಜ ಬೆಳೆಗಾರರ ಸಹಕಾರ ಸಂಘಗಳ ಒಕ್ಕೂಟ ನಿಯಮಿತದ (ಕೆಒಎಫ್​) ಚಿತ್ರದುರ್ಗದ ಪ್ರಾದೇಶಿಕ ಕಚೇರಿಯಲ್ಲಿ ವಿವಿಧ ಹುದ್ದೆಗಳಿಗೆ ಪದವಿ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿ ಅಧಿಸೂಚನೆ ಹೊರಡಿಸಲಾಗಿದೆ. ಒಟ್ಟು ಹುದ್ದೆಗಳು:6

    ಕೆಒಎಫ್​ನಲ್ಲಿ ಖಾಲಿ ಇರುವ 6 ಹುದ್ದೆಗಳಲ್ಲಿ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 5 ಸ್ಥಾನ, ಎಸ್ಸಿಗೆ 1 ಸ್ಥಾನ ಮೀಸಲಿರಿಸಲಾಗಿದೆ. ಗಣಕಯಂತ್ರದಿಂದ ಬೆರಳಚ್ಚು ಮಾಡಿದ ಅರ್ಜಿಗಳಿಗೆ ಮಾತ್ರ ಮಾನ್ಯತೆ.

    ಹುದ್ದೆ ವಿವರ
    * ಸೀಡ್ಸ್ ಆಫೀಸರ್ – 1
    * ಕೆಮಿಸ್ಟ್ -ಐ – 1
    * ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ (ಕಮರ್ಶಿಯಲ್) – 1
    * ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ (ಫೀಲ್ಡ್) – 1
    * ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ (ಅಕೌಂಟ್ಸ್) – 2

    ಶೈಕ್ಷಣಿಕ ಅರ್ಹತೆ: ಕೃಷಿ, ಕೆಮಿಸ್ಟ್ರಿ ಪದವಿ, ಬಿಬಿಎಂ/ ಬಿಬಿಎ, ಬಿಕಾಂ ಪದವಿ ಜತೆ ಟ್ಯಾಲಿ, ಕಂಪ್ಯೂಟರ್ ಜ್ಞಾನ, ಅಕೌಂಟಿಂಗ್ ಪ್ಯಾಕೇಜ್‍ನಲ್ಲಿ ಜ್ಞಾನ ಅವಶ್ಯ. ಕನ್ನಡ ಭಾಷೆಯಲ್ಲಿ ಓದಲು, ಬರೆಯಲು, ಮಾತನಾಡಲು ತಿಳಿದಿರಬೇಕು.

    ವಯೋಮಿತಿ: ಅರ್ಜಿ ಸಲ್ಲಿಕೆಯ ಕೊನೇ ದಿನಕ್ಕೆ ಅನ್ವಯವಾಗುವಂತೆ ಕನಿಷ್ಠ 18 ವರ್ಷ, ಸಾಮಾನ್ಯ ವರ್ಗಕ್ಕೆ ಗರಿಷ್ಠ 35, ಎಸ್ಸಿಗೆ ಗರಿಷ್ಠ 40 ವರ್ಷ.

    ಸೂಚನೆ: ಅಭ್ಯರ್ಥಿಗಳು ನಿರಪೇಕ್ಷಣಾ ಪತ್ರ ಸಲ್ಲಿಸಬೇಕು. ಅರ್ಜಿಯೊಂದಿಗೆ ತನಗೆ ಸಂಬಂಧಿಕರಲ್ಲದ ಇಬ್ಬರು ಗೌರವಾನ್ವಿತ ವ್ಯಕ್ತಿಗಳಿಂದ ಪಡೆದ ನಡತೆ ಪ್ರಮಾಣ ಪತ್ರಗಳನ್ನು ನೀಡಬೇಕು.

    ಆಯ್ಕೆ ವಿಧಾನ: ಅಭ್ಯರ್ಥಿಗಳ ವಿದ್ಯಾರ್ಹತೆ ಆಧರಿಸಿ ಶಾರ್ಟ್ ಲಿಸ್ಟ್ ಮಾಡಲಾದ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆಗೆ ಆಹ್ವಾನಿಸಲಾಗುವುದು. ಲಿಖಿತ ಪರೀಕ್ಷೆಯಲ್ಲಿ ಕನ್ನಡ, ಇಂಗ್ಲಿಷ್, ಸಾಮಾನ್ಯ ಜ್ಞಾನ, ಸಹಕಾರ ವಿಷಯಗಳು, ಭಾರತದ ಸಂವಿಧಾನ ಹಾಗೂ ಸಮಾಜಯುಕ್ತವಾದ ಚಟುವಟಿಕೆ ಮತ್ತು ವಸ್ತುನಿಷ್ಠ ವಿಷಯ ಹಾಗೂ ಒಕ್ಕೂಟಕ್ಕೆ ಸಂಬಂಧಿಸಿದ ವಿಷಯಗಳ ಪ್ರಶ್ನೆಗಳನ್ನು ಕೇಳಲಾಗುವುದು. ಲಿಖಿತ ಪರೀಕ್ಷೆಯಲ್ಲಿ ಪಡೆದ ಅಂಕ ಆಧರಿಸಿ 1:5ರ ಅನುಪಾತದಲ್ಲಿ ಮೌಖಿತ ಸಂದರ್ಶನಕ್ಕೆ ಆಹ್ವಾನಿಸಲಾಗುವುದು. ಒಂದಕ್ಕಿಂತ ಹೆಚ್ಚಿನ ವೃಂದದ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಒಂದೇ ದಿನ ಒಂದೇ ವೇಳೆಯಲ್ಲಿ ಲಿಖಿತ ಪರೀಕ್ಷೆ ಏರ್ಪಡಿಸಿದರೆ ಅಂತಹ ಅಭ್ಯರ್ಥಿಗಳು ಲಿಖಿತ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳನ್ನು ಎಲ್ಲ ವೃಂದದ ಹುದ್ದೆಗಳಿಗೂ ಪರಿಗಣಿಸಲಾಗುವುದು.

    ಅರ್ಜಿ ಶುಲ್ಕ: ಎಸ್ಸಿ, ಎಸ್ಟಿ, ಪ್ರವರ್ಗ-1 ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ 500 ರೂ., ಇತರ ಅಭ್ಯರ್ಥಿಗಳಿಗೆ 1,000 ರೂ. ಅರ್ಜಿಶುಲ್ಕ ಪಾವತಿಸಬೇಕು.

    ಅರ್ಜಿ ಸಲ್ಲಿಸಲು ಕೊನೆಯ ದಿನ: 8.3.2021
    ಅರ್ಜಿ ಸಲ್ಲಿಸುವ ವಿಳಾಸ: ವ್ಯವಸ್ಥಾಪಕ ನಿರ್ದೇಶಕ, ಪ್ರಾದೇಶಿಕ ಎಣ್ಣೆಬೀಜ ಬೆಳೆಗಾರರ ಸಹಕಾರ ಸಂಘಗಳ ಒಕ್ಕೂಟ ನಿಯಮಿತ, ಪ್ಲಾಟ್ ಸಂಖ್ಯೆ 74/ಎ, ಕೆಳಗೋಟೆ ಇಂಡಸ್ಟ್ರಿಯಲ್ ಏರಿಯಾ, ಚಿತ್ರದುರ್ಗ – 577501
    ಅಧಿಸೂಚನೆಗೆ: https://bit.ly/3cRfvrf
    ಮಾಹಿತಿಗೆ:https://anganwadirecruit.kar.nic.in

    ಐಟಿಐ ಉತ್ತೀರ್ಣರಾಗಿರುವಿರಾ? ಹಾಗಿದ್ದರೆ ಶಿಪ್​ಯಾರ್ಡ್​ನಲ್ಲಿ ನಿಮಗಿದೆ ಉದ್ಯೋಗಾವಕಾಶ

    ಡಿಜಿಟಲ್ ಶಿಕ್ಷಣ ಸಂಸ್ಥೆಯಲ್ಲಿ 433 ಹುದ್ದೆಗಳು ಖಾಲಿ- ಎಸ್​ಎಸ್​ಎಲ್​ಸಿಯಾದವರಿಗೂ ಅವಕಾಶ

    ವಿವಿಧ ಇಂಜಿನಿಯರಿಂಗ್​ ಪದವೀಧರರಿಗೆ ಇಲ್ಲಿದೆ ಉದ್ಯೋಗಾವಕಾಶ- 38 ಹುದ್ದೆಗಳು ಖಾಲಿ

    ಪಂಚಾಯತ್ ರಾಜ್ ಇಲಾಖೆಯಲ್ಲಿ ಕೆಲಸ ಮಾಡಲು ಇಲ್ಲಿದೆ ಸುವರ್ಣಾವಕಾಶ

    ವಿವಿಧ ವಿದ್ಯಾರ್ಹತೆ ಹೊಂದಿರುವವರಿಗೆ ಏಮ್ಸ್​ನಲ್ಲಿದೆ 120 ಅರೆ ವೈದ್ಯಕೀಯ ಹುದ್ದೆಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts