ನ್ಯೂಸ್

ಬಿ.ಕಾಂ ಪದವೀಧರರಿಗೆ ಭಾರತೀಯ ಹತ್ತಿ ನಿಗಮದಲ್ಲಿ ಹೇರಳ ಅವಕಾಶ

suchetana

ಜವಳಿ ಸಚಿವಾಲಯದ ಅಧೀನದಲ್ಲಿ ಕಾರ್ಯ ನಿರ್ವಹಿಸುವ ದಿ ಕಾಟನ್ ಕಾರ್ಪೋರೇಷನ್​ ಆಫ್​ ಇಂಡಿಯಾ (ಸಿಸಿಐ) ಸಾರ್ವಜನಿಕ ಉದ್ಯಮವಾಗಿದೆ. ದೇಶಾದ್ಯಂತ 19 ಶಾಖೆಗಳನ್ನು ಹೊಂದಿರುವ ಸಿಸಿಐ ಹತ್ತಿ ಉದ್ಯಮದ ಪ್ರಗತಿಗೆ ಶ್ರಮಿಸುತ್ತಿದೆ. ಮುಖ್ಯವಾಗಿ ಹತ್ತಿ ಬೆಳೆಗಾರರು ಸೂಕ್ತ ಬೆಲೆಗೆ ಹತ್ತಿ ಮಾರಾಟ ಮಾಡಲು ಅನುವಾಗುವಂತೆ ಮಾರುಕಟ್ಟೆ ಕ್ರಮಗಳನ್ನು ಕೈಗೊಳ್ಳುತ್ತದೆ. ನೇರ ನೇಮಕಾತಿ ಮೂಲಕ ಖಾಲಿ ಇರುವ 95 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುತ್ತಿದೆ.

ಆಸಕ್ತ ಅಭ್ಯರ್ಥಿಗಳು ಆನ್‍ಲೈನ್‍ನಲ್ಲೇ ಅರ್ಜಿ ಸಲ್ಲಿಸಬೇಕಿದ್ದು, ಮ್ಯಾನೇಜ್‍ಮೆಂಟ್ ಟ್ರೇನಿ ಹುದ್ದೆಗೆ ಮಾಸಿಕ 30,000 ರೂ. ಹಾಗೂ ಉಳಿದ ಹುದ್ದೆಗಳಿಗೆ ಮಾಸಿಕ 22,000 ರೂ. ವೇತನ ನಿಗದಿಯಾಗಿದೆ. ಆಯ್ಕೆಯಾದ ಅಭ್ಯರ್ಥಿಗಳು 1 ವರ್ಷ ಪ್ರೊಬೆಷನರಿ  ಅವಧಿಯಲ್ಲಿರಬೇಕು. ಅಭ್ಯರ್ಥಿಗಳು ಕನಿಷ್ಠ 3 ವರ್ಷ ಸೇವೆ ಸಲ್ಲಿಸುವುದಾಗಿ ಬಾಂಡ್ ಬರೆದು ಕೊಡಬೇಕು. ಒಬ್ಬ ಅಭ್ಯರ್ಥಿ ಒಂದು ಹುದ್ದೆಗೆ ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಹುದ್ದೆ, ಸಂಖ್ಯೆ ವಿವರ

* ಮ್ಯಾನೇಜ್‍ಮೆಂಟ್ ಟ್ರೇನಿ (ಮಾರ್ಕೇಟಿಂಗ್) - 5

* ಮ್ಯಾನೇಜ್‍ಮೆಂಟ್ ಟ್ರೇನಿ (ಅಕೌಂಟ್ಸ್) - 6

* ಜೂನಿಯರ್ ಕಮರ್ಷಿಯಲ್ ಎಕ್ಸಿಕ್ಯುಟೀವ್ - 50

* ಜೂನಿಯರ್ ಅಸಿಸ್ಟೆಂಟ್ (ಜನರಲ್) - 20

* ಜೂನಿಯರ್ ಅಸಿಸ್ಟೆಂಟ್ (ಅಕೌಂಟ್ಸ್) - 14

ವಿದ್ಯಾರ್ಹತೆ: ಬಿಕಾಂ, ಅಗ್ರಿಕಲ್ಚರ್ ಬಿಎಸ್‍ಸಿ, ಅಗ್ರಿ ಬಿಜಿನೆಸ್ ಮ್ಯಾನೇಜ್‍ಮೆಂಟ್/ ಕೃಷಿ ಸಂಬಂಧಿತ ವಿಷಯದಲ್ಲಿ ಎಂಬಿಎ, ಸಿಎ/ ಸಿಎಂಎ/ಎಂಎಂಎಸ್/ ಎಂಕಾಂ ಅಥವಾ ತತ್ಸಮಾನ ಶಿಕ್ಷಣ. ಪದವಿಗಳಲ್ಲಿ ಕನಿಷ್ಠ ಶೇ.50 ಅಂಕ ಪಡೆದಿರಬೇಕು. ಎಸ್‍ಸಿ, ಎಸ್‍ಟಿ, ಅಂಗವಿಕಲ ಅಭ್ಯರ್ಥಿಗಳಾದಲ್ಲಿ ಕನಿಷ್ಠ ಶೇ.45 ಅಂಕ ಪಡೆದಿರಬೇಕು.

ವಯೋಮಿತಿ: 1.11.2020ಕ್ಕೆ ಕನಿಷ್ಠ 18 ವರ್ಷ, ಗರಿಷ್ಠ 30 ವರ್ಷ. ಸರ್ಕಾರದ ನಿಯಮದನ್ವಯ ಮೀಸಲಾತಿ ಅಭ್ಯರ್ಥಿಗಳಿಗೆ 3 ರಿಂದ 10 ವರ್ಷ ವಯೋ ಸಡಿಲಿಕೆ ಇದೆ.

ಅರ್ಜಿ ಶುಲ್ಕ: ಸಾಮಾನ್ಯವರ್ಗ, ಆರ್ಥಿಕವಾಗಿ ದುರ್ಬಲವಾಗಿರುವ ಅಭ್ಯರ್ಥಿಗಳು, ಇತರ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 1500 ರೂ. ಎಸ್‍ಸಿ, ಎಸ್‍ಟಿ, ಮಾಜಿ ಸೈನಿಕ, ಅಂಗವಿಕಲ ಅಭ್ಯರ್ಥಿಗಳಿಗೆ 500 ರೂ. ಶುಲ್ಕ ನಿಗದಿಪಡಿಸಲಾಗಿದೆ.

ಆಯ್ಕೆ ಪ್ರಕ್ರಿಯೆ: ಆಯ್ದ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆಗೆ ಅಹ್ವಾನಿಸಲಾಗುವುದು. ಬೆಂಗಳೂರು ಸೇರಿ ಇತರ 11 ಸ್ಥಳಗಳಲ್ಲಿ ಪರೀಕ್ಷಾ ಕೇಂದ್ರ ಇರಲಿದೆ.

ಅರ್ಜಿ ಸಲ್ಲಿಸಲು ಕೊನೇ ದಿನ: 7.1.2021

ಅಧಿಸೂಚನೆಗೆ:https://bit.ly/3p38xC7

ಮಾಹಿತಿಗೆ:http://www.cotcorp.org.in

ಇನ್ನೂ ಹೆಚ್ಚಿನ ಉದ್ಯೋಗಗಳ ಮಾಹಿತಿಗೆ https://www.vijayavani.net/ ವಿಭಾಗದ ಅಂಕಣ ಕಾಲಂನಲ್ಲಿ ಉದ್ಯೋಗಮಿತ್ರ ಕ್ಲಿಕ್ಕಿಸಿ