ನ್ಯೂಸ್

ವಿವಿಧ ಪದವೀಧರರಿಗೆ ಭಾರತ್​ ಡೈನಾಮಿಕ‌ನಿಂದ ಅರ್ಜಿ ಆಹ್ವಾನ: 1.40 ಲಕ್ಷ ರೂ.ವರೆಗೆ ಸಂಬಳ

suchetana

ಭಾರತ್​ ಡೈನಾಮಿಕ್​ ಲಿಮಿಟೆಡ್​ (ಬಿಡಿಎಲ್​) 1970ರಲ್ಲಿ ರಕ್ಷಣಾ ಸಚಿವಾಲಯದ ಅಧೀನದಲ್ಲಿ ಸಂಯೋಜಿತಗೊಂಡ ಸಾರ್ವಜನಿಕ ವಲಯದ ಉದ್ಯಮವಾಗಿದ್ದು, ಮಿನಿರತ್ನ ಸಂಸ್ಥೆಯೂ ಹೌದು. ಪ್ರಸ್ತುತ ಸಂಸ್ಥೆಯಲ್ಲಿ ಹೊಸ ಯೋಜನೆಗಳನ್ನು ಪ್ರಾರಂಭಿಸುತ್ತಿದ್ದು ಈ ಯೋಜನೆಗಳಲ್ಲಿ ಕಾರ್ಯ ನಿರ್ವಹಿಸಲು ಅರ್ಹ ಅಭ್ಯರ್ಥಿಗಳ ಹುಡುಕಾಟ ನಡೆಸಿದೆ.

ಒಟ್ಟು ಹುದ್ದೆಗಳು: 46

ಬಿಡಿಎಲ್​ನ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳನ್ನು ಹೈದರಾಬಾದ್​ನ ಗಾಚ್ಚಿಬೌಲಿ ಟಕ, ಕಂಚನ್​ಬಾಗ್​, ಭಾನುರ್​, ವಿಶಾಖಪಟ್ಟಣ, ಇಬ್ರಾಹಿಂಪಟ್ಟಣ, ಮಹಾರಾಷ್ಟ್ರದ ಅಮರಾವತಿ ಟಕ, ದೆಹಲಿಯ ಕಚೇರಿ ಅಥವಾ ದೇಶದ ಯಾವುದೇ ಟಕಕ್ಕಾದರೂ ನೇಮಕ ಮಾಡಬಹುದಾಗಿದೆ. ಮೀಸಲಾತಿ ಅಭ್ಯರ್ಥಿಗಳನ್ನು ಹೊರತುಪಡಿಸಿ ಉಳಿದ ಅಭ್ಯರ್ಥಿಗಳು 500 ರೂ. ಅಜಿರ್ಶುಲ್ಕ ಪಾವತಿಸಬೇಕು.

ಹುದ್ದೆ ವಿವರ
* ಜನರಲ್​ ಮ್ಯಾನೇಜರ್​ (ಎಚ್​ಆರ್​) - 1
* ಡೆಪ್ಯುಟಿ ಜನರಲ್​ ಮ್ಯಾನೇಜರ್​ (ಹೊಸ ಯೋಜನೆ) - 3
* ಮೆಡಿಕಲ್​ ಅಧಿಕಾರಿ - 2
* ಅಸಿಸ್ಟೆಂಟ್​ ಮ್ಯಾನೇಜರ್​ (ಸೇಫ್ಟಿ) - 3
* ಮ್ಯಾನೇಜ್​ಮೆಂಟ್​ ಟ್ರೇನಿ (ಎಂಟಿ) (ಎಲೆಕ್ಟ್ರಾನಿಕ್ಸ್​ - 12, ಮೆಕ್ಯಾನಿಕಲ್​- 9, ಎಲೆಕ್ಟ್ರಿಕಲ್​-3, ಸಿವಿಲ್​-3, ಕಂಪ್ಯೂಟರ್​ ಸೈನ್ಸ್​ - 2, ಆಪ್ಟಿಕ್ಸ್​- 1, ಬಿಸಿನೆಸ್​ ಡೆವಲಪ್​ಮೆಂಟ್​ - 1, ಫೈನಾನ್ಸ್​-3, ಎಚ್​ಆರ್​- 3) - 37

ವಿದ್ಯಾರ್ಹತೆ: ಹುದ್ದೆಗಳಿಗೆ ಅನುಗುಣವಾಗಿ ಇಂಜಿನಿಯರಿಂಗ್​ನಲ್ಲಿ ಪದವಿ, ಎಚ್​ಆರ್​/ ಪಿಎಂ ಆ್ಯಂಡ್​ ಐಆರ್​/ ಪರ್ಸನಲ್​ ಮ್ಯಾನೇಜ್​ಮೆಂಟ್​/ ಸೋಷಿಯಲ್​ ಸೈನ್ಸ್​/ ಸೋಷಿಯಲ್​ ವೆಲ್​ಫೇರ್​/ ಸೋಷಿಯಲ್​ ವರ್ಕ್​ನಲ್ಲಿ ಎಂಬಿಎ/ 2 ವರ್ಷದ ಸ್ನಾತಕೋತ್ತರ ಡಿಪ್ಲೊಮಾ, ಎಂಬಿಬಿಎಸ್​/ ಎಂಎಸ್​/ ಎಂಡಿ ಮಾಡಿದ್ದು, ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರಬೇಕು.

ವಯೋಮಿತಿ: ಜನರಲ್​ ಮ್ಯಾನೇಜರ್​ ಹುದ್ದೆಗೆ ಗರಿಷ್ಠ 54 ವರ್ಷ, ಡೆ. ಜನರಲ್​ ಮ್ಯಾನೇಜರ್​ಗೆ ಗರಿಷ್ಠ 50 ವರ್ಷ, ಮೆಡಿಕಲ್​ ಆಫೀಸರ್​, ಅಸಿಸ್ಟೆಂಟ್​ ಮ್ಯಾನೇಜರ್​ಗೆ ಗರಿಷ್ಠ 35 ವರ್ಷ, ಎಂಟಿ ೈನಾನ್ಸ್​ಗೆ ಗರಿಷ್ಠ 28 ವರ್ಷ, ಉಳಿದ ಎಂಟಿ ಹುದ್ದೆಗಳಿಗೆ ಗರಿಷ್ಠ 27 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಮೀಸಲಾತಿ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮದನ್ವಯ ವಯೋ ಸಡಿಲಿಕೆ ಇದೆ.

ವೇತನ: ಜನರಲ್​ ಮ್ಯಾನೇಜರ್​ಗೆ ಮಾಸಿಕ 1,00,000-2,60,000 ರೂ., ಡೆಪ್ಯುಟಿ ಜನರಲ್​ ಮ್ಯಾನೇಜರ್​ಗೆ ಮಾಸಿಕ 80,000-2,20,000 ರೂ., ಹಾಗೂ ಉಳಿದ ಹುದ್ದೆಗಳಿಗೆ ಮಾಸಿಕ 40,000- 1,40,000 ರೂ. ವೇತನ ನಿಗದಿಪಡಿಸಲಾಗಿದೆ.

ಮೀಸಲಾತಿ: ಸಾಮಾನ್ಯವರ್ಗದ ಅಭ್ಯರ್ಥಿಗೆ 23 ಸ್ಥಾನ, ಇತರ ಹಿಂದುಳಿದ ವರ್ಗದ ಅಭ್ಯರ್ಥಿಗೆ 13, ಎಸ್ಸಿಗೆ 3, ಎಸ್ಟಿಗೆ 3, ಆಥಿರ್ಕವಾಗಿ ದುರ್ಬಲವಾಗಿರುವ ಅಭ್ಯರ್ಥಿಗೆ 4 ಸ್ಥಾನ ಮೀಸಲಿರಿಸಲಾಗಿದೆ. ಇದರಲ್ಲಿ ಶೇ.4 ಸ್ಥಾನಗಳನ್ನು ಅಂಗವಿಕ ಅಭ್ಯರ್ಥಿಗಳಿಗೆ ಕಾಯ್ದಿರಿಸಲಾಗಿದೆ.

ಆಯ್ಕೆ ಪ್ರಕ್ರಿಯೆ: ಟ್ರೇನಿ ಹುದ್ದೆಗೆ ಲಿಖಿತ ಪರೀಕ್ಷೆ ಹಾಗೂ ಸಂದರ್ಶನ ಇರುತ್ತದೆ. ಉಳಿದ ಹುದ್ದೆಗಳಿಗೆ ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಸಲು ಕೊನೇ ದಿನ: 19.7.2021
ಅಧಿಸೂಚನೆಗೆ: https://bit.ly/3htc4HE
ಮಾಹಿತಿಗೆ:http://bdl-india.in