ನ್ಯೂಸ್

ನಿದ್ದೆಗೆ ಜಾರಿದ ಟ್ರಕ್‌ ಚಾಲಕ- ನಾಲ್ವರ ದುರ್ಮರಣ: ರಸ್ತೆಯಲ್ಲಿ ಬಿದ್ದ ಮೀನು ಹೆಕ್ಕಲು ನೂಕುನುಗ್ಗಲು!

ತಡೆಪಲ್ಲಿಗುಡೆಂ (ಆಂಧ್ರಪ್ರದೇಶ): ಟ್ರಕ್‌ ಚಾಲಕ ನಿದ್ದೆಗೆ ಜಾರಿದ್ದ ಹಿನ್ನೆಲೆಯಲ್ಲಿ ಮೀನು ತುಂಬಿದ ಟ್ರಕ್‌ ಪಲ್ಟಿ ಹೊಡೆದು ನಾಲ್ವರು ಮೃತಪಟ್ಟಿರುವ ಘಟನೆ ಆಂಧ್ರಪ್ರದೇಶದ ತಡೆಪಲ್ಲಿಗುಡೆಂ ಎಂಬಲ್ಲಿ ನಡದಿದೆ.

ಒಂದೆಡೆ ಹೆಣಗಳು ರಸ್ತೆಯಲ್ಲಿ ಬಿದ್ದಿದ್ದರೆ, ಇನ್ನೊಂದೆಡೆ ಮೀನುಗಳೆಲ್ಲಾ ರಸ್ತೆಗಳಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಅದನ್ನು ಹೆಕ್ಕಿಕೊಳ್ಳಲು ಜನರು ತಂಡೋಪತಂಡವಾಗಿ ಸ್ಥಳಕ್ಕೆ ಆಗಮನಿಸಿದ್ದು, ಪೊಲೀಸರು ಜನರನ್ನು ಚದುರಿಸುತ್ತಿದ್ದಾರೆ.

ಇಂದು ಮುಂಜಾನೆ ಪಶ್ಚಿಮ ಗೋದಾವರಿ ಜಿಲ್ಲೆಯ ತಡೆಪಲ್ಲಿಗುಡೆಂನಲ್ಲಿ ಈ ಘಟನೆ ನಡೆದಿದೆ. ಘಟನೆಯಲ್ಲಿ ಹತ್ತು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಥಳೀಯರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಅಪಘಾತದ ಸಮಯದಲ್ಲಿ ಚಾಲಕ ನಿದ್ದೆ ಮಾಡಿದ್ದರಿಂದ ದುರಂತ ಸಂಭವಿಸಿದೆ ಎಂದು ಪೊಲೀಸರು ಹೇಳಿದ್ದಾರೆ.