ನ್ಯೂಸ್

ಸ್ನೇಹಿತೆಯರು ಇಲ್ಲದಾಗ ನೇಣು ಬಿಗಿದುಕೊಂಡು ಟೆಕ್ಕಿ ಆತ್ಮಹತ್ಯೆ: ಕಾರಣ ನಿಗೂಢ!

suchetana

ಹೈದರಾಬಾದ್‌: ರೂಮಿನಲ್ಲಿದ್ದ ಸ್ನೇಹಿತೆಯರು ಕೆಲಸಕ್ಕೆಂದು ಹೋದ ಸಂದರ್ಭದಲ್ಲಿ ಸಾಫ್ಟ್​ವೇರ್​ ಇಂಜಿನಿಯರ್​ ಒಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿರುವ ಘಟನೆ ಹೈದರಾಬಾದ್​ನಲ್ಲಿ ನಡೆದಿದೆ.

ಜಮ್ಮು ಕಾಶ್ಮೀರದ ಕೃತಿ ಸಂಭಾಲ್ (27) ಆತ್ಮಹತ್ಯೆ ಮಾಡಿಕೊಂಡಿರುವವರು. ಇವರು ಗಚ್ಚಿಬೌಲಿಯಲ್ಲಿ ಅಮೇಜಾನ್​ ಕಂಪೆನಿಯಲ್ಲಿ ಸಾಫ್ಟ್​ವೇರ್​ ಇಂಜಿನಿಯರ್​ ಆಗಿ ಕೆಲಸ ಮಾಡುತ್ತಿದ್ದರು.

ಇಬ್ಬರು ಸ್ನೇಹಿತೆಯರ ಜತೆ ಇವರು ಅಪಾರ್ಟ್​ಮೆಂಟ್​ ಒಂದರಲ್ಲಿ ನೆಲೆಸಿದ್ದರು. ಅವರಿಬ್ಬರೂ ಕೆಲಸಕ್ಕೆಂದು ಹೊರಕ್ಕೆ ಹೋಗಿದ್ದ ಸಂದರ್ಭದಲ್ಲಿ ಕೃತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೂ ಮುನ್ನ ತಮ್ಮ ಸ್ನೇಹಿತ ಸ್ನೇಹಿತ ಸಚಿನ್‌ ಕುಮಾರ್‌ಗೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸಂದೇಶ ಕಳುಹಿಸಿದ್ದಾರೆ.

ಸಂದೇಶ ನೋಡಿ ಗಾಬರಿಯಿಂದ ಅಪಾರ್ಟ್​ಮೆಂಟ್​ಗೆ ಬಂದಾಗ ಅದು ಲಾಕ್​ ಆಗಿತ್ತು. ನಂತರ ಆಕೆಯ ಸ್ನೇಹಿತೆಗೆ ಕರೆ ಮಾಡಿ ಲಾಕ್​ ತೆಗೆದು ನೋಡಿದಾಗ ಕೃತಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂತು. ಕೂಡಲೇ ಆಸ್ಪತ್ರೆಗೆ ಸೇರಿಸಲಾಯಿತಾದರೂ ಅದಾಗಲೇ ಅವರು ಮೃತಪಟ್ಟಿದ್ದರು.

ಸದ್ಯ ಯಾವುದೇ ಡೆತ್​ನೋಟ್​ ಸಿಗಲಿಲ್ಲ. ಆದ್ದರಿಂದ ಆತ್ಮಹತ್ಯೆಗೆ ನಿಖರ ಕಾರಣವೇನು ಎಂದು ತಿಳಿದುಬಂದಿಲ್ಲ ಎಂದು ಪೊಲೀಸರು ಹೇಳಿದ್ದಾರೆ.