ಬೆಂಗಳೂರು: ಭವಿಷ್ಯ ನುಡಿಯುವ ಕಾಲಜ್ಞಾನಿಗಳು ನಮ್ಮಲ್ಲಿ ಹಲವರಿದ್ದಾರೆ. ಇಂಥ ಕಾಲಜ್ಞಾನಿಗಳು ನುಡಿಯುವ ಎಷ್ಟೋ ಭವಿಷ್ಯಗಳೂ ಸತ್ಯವಾಗುತ್ತಲೇ ಇದ್ದು, ಕೆಲವೊಮ್ಮೆ ಅವು ಅಚ್ಚರಿ ಮೂಡಿಸುತ್ತವೆ. ಅಂಥದ್ದೇ ಒಂದು ಭವಿಷ್ಯ ಇದೀಗ ಸಾಕಷ್ಟು ಸುದ್ದಿ ಮಾಡುತ್ತಿದೆ.
ಅದೇನೆಂದರೆ, ಟಾಟಾ ಗ್ರೂಪ್ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಅವರ ಸಾವಿನ ಕುರಿತು ಸ್ವಾಮೀಜಿಯೊಬ್ಬರು ನುಡಿದಿರುವ ಭವಿಷ್ಯ! ಎರಡು ದಿನಗಳ ಹಿಂದೆ ಭೀಕರ ಕಾರು ಅಪಘಾತದಲ್ಲಿ ಮೃತಪಟ್ಟ ಟಾಟಾ ಗ್ರೂಪ್ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಅವರು ಸಾಯುವ ಕುರಿತು ಕಳೆದ ಆಗಸ್ಟ್ 27ರಂದು ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಭವಿಷ್ಯ ನುಡಿದಿದ್ದರು.
ಈ ಕುರಿತು, ಫೇಸ್ಬುಕ್ನಲ್ಲಿ ಅವರು ಬರೆದುಕೊಂಡಿದ್ದರು. ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದೇನೆಂದರೆ:
ನಮ್ಮ ದೇಶದ ಉದ್ಯಮಿಯಾಗಿರುವ ಟಾಟಾ ವಂಶಸ್ಥರ ಹಿರಿಯರಿಗೆ ಕಂಟಕ ಎದುರಾಗುತ್ತದೆ, ಅಧ್ಯಕ್ಷರು ಅಥವಾ ಮಾಜಿ ಅಧ್ಯಕ್ಷರ ದುರ್ಮರಣವಾಗುತ್ತದೆ... ನಂತರದ ದಿನಗಳಲ್ಲಿ ಕಂಪೆನಿಯ ವ್ಯವಹಾರಕ್ಕೂ ತೊಡಕಾಗುತ್ತದೆ... ಎಂದು ಅವರು ಬರೆದುಕೊಂಡಿದ್ದಾರೆ.
ಅದರ ಜತೆಗೆ ಆಮ್ ಆದ್ಮಿ ಪ್ಷದಲ್ಲಿ ಅನೇಕ ಹೊಸ ಬದಲಾವಣೆಗಳನ್ನು ಕಾಣುತ್ತೇವೆ ಎಂದೂ ಹೇಳಿದ್ದಾರೆ. (ಏಜೆನ್ಸೀಸ್)