ನ್ಯೂಸ್

VIDEO: ಆಗಸದಲ್ಲಿ ವಿಮಾನದ ಹೊರಗಡೆ ವರ್ಕ್​ಔಟ್​ ಮಾಡುತ್ತಲೇ ಕೆಳಕ್ಕೆ ಜಿಗಿತ! ಮೈ ನವಿರೇಳಿಸುವ ವಿಡಿಯೋ ವೈರಲ್

suchetana

ನ್ಯೂಯಾರ್ಕ್​: ವಿಮಾನದ ತುದಿಯಲ್ಲಿ ನೇತಾಡಿಕೊಂಡು ಸ್ಕೈಡೈವರ್‌ ಯುವತಿಯೊಬ್ಬಳು ವರ್ಕ್​ಔಟ್​ಮಾಡುತ್ತಿರುವ ವಿಡಿಯೋ ಭಾರಿ ವೈರಲ್​ ಆಗಿದೆ.

ಕೇಟಿ ವಸೇನಿನಾ ಎಂಬ ಸ್ಕೈಡೈವರ್​ ಈ ಸಾಹಸಕ್ಕೆ ಕೈ ಹಾಕಿದವರು. ಇದೇ ಒಂದನೇ ತಾರೀಖು ಅವರು ಇನ್ನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಈ ವರ್ಕ್​ಔಟ್​ ವಿಡಿಯೋ ಶೇರ್​ ಮಾಡಿದ್ದಾರೆ. ವಿಮಾನದ ಹೊರಭಾಗದಲ್ಲಿ ಯಾವುದೇ ಅಳುಕು ಇಲ್ಲದೆಯೇ ಎರಡೂ ಕಾಲುಗಳನ್ನು ಮೇಲೆತ್ತುವ ಮೂಲಕ ಕಿಬ್ಬೊಟ್ಟೆಗೆ ಸಂಬಂಧಿಸಿದ ವ್ಯಾಯಾಮ ಮಾಡಿರುವುದನ್ನು ವಿಡಿಯೋದಲ್ಲಿ ಗಮನಿಸಬಹುದಾಗಿದೆ.

ಇದಾದ ಬಳಿಕ ಅವರು, ಆಕಾಶದಿಂದ ಕೆಳಕ್ಕೆ ಜಿಗಿದಿದ್ದಾರೆ. ಈ ವಿಡಿಯೋ ಭಾರಿ ವೈರಲ್​ ಆಗಿದ್ದು, ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.

ಅಂದಹಾಗೆ ಕೇಟಿ ವಸೇನಿನಾ, ಈಕೆ ಯುಸಿಎಫ್ ಸ್ಕೂಲ್ ಆಫ್ ಕಿನಿಸಿಯಾಲಜಿಯಲ್ಲಿ ಪಿಎಚ್‌ಡಿ ವಿದ್ಯಾರ್ಥಿನಿ. ಇವರ ಇನ್​​ಸ್ಟಾಗ್ರಾಮ್​ನಲ್ಲಿ 1.3 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಇದ್ದಾರೆ.

ನೀವೂ ನೋಡಿ ಈ ರೋಮಾಂಚನಕಾರಿ ವಿಡಿಯೋ