ಜೆಕ್ (ಜೆಕೊಸ್ಲೋವಾಕಿಯಾ): ಕರೊನಾದಿಂದ ಗುಣಮುಖರಾದವರಿಗೆ ಸಿಗುವ ಆರೋಗ್ಯ ಕಾರ್ಡ್ ಪಡೆಯುವುದಕ್ಕಾಗಿ ಬೇಕಂತಲೇ ಕರೊನಾ ಬರಿಸಿಕೊಂಡಿದ್ದ ಖ್ಯಾತ ಜಾನಪದ ಗಾಯಕಿ ಹನ ಹೊರ್ಕಾ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.
ಜೆಕೊಸ್ಲೋವಾಕಿಯಾದ ಖ್ಯಾತ ಗಾಯಕಿಯಾಗಿರುವ ಹನ ಹೊರ್ಕಾ, ಈ ಹಿಂದೆ ತಾವು ಉದ್ದೇಶಪೂರ್ವಕವಾಗಿ ಕರೊನಾ ಬರಿಸಿಕೊಂಡಿರುವ ಬಗ್ಗೆ ಇನ್‌ಸ್ಟಾಗ್ರಾಮ್ ಮೂಲಕ ಮಾಹಿತಿ ನೀಡಿದ್ದರು. ನಾನು ಕೋವಿಡ್ ಲಸಿಕೆ ಹಾಕಿಸಿಕೊಳ್ಳಲಿಲ್ಲ. ನನಗೆ ಸೋಂಕು ತಗುಲಿದ್ದು ಚೇತರಿಸಿಕೊಳ್ಳುತ್ತಿದ್ದೇನೆ ಅವರು ಹೇಳಿದ್ದರು. ಇದನ್ನು ಶೇರ್ ಮಾಡಿಕೊಂಡ ನಾಲ್ಕೇ ದಿನಕ್ಕೆ ಅವರು ಮೃತಪಟ್ಟಿದ್ದಾರೆ.
ತನ್ನ ಅಮ್ಮನ ಹುಚ್ಚುತನದ ಕುರಿತು ಮಾತನಾಡಿರುವ ಅವರ ಮಗ ರೆಕ್ಸ್, ‘ಮೊದಲಿಗೆ ನನಗೆ ಹಾಗೂ ನನ್ನ ತಂದೆಗೆ ಕರೊನಾ ಸೋಂಕು ತಗುಲಿತ್ತು. ನಾವು ಚೇತರಿಕೆಗೊಂಡಿದ್ದೆವು. ಆದರೆ ನಮ್ಮ ತಾಯಿಗೆ ನೆಗೆಟಿವ್ ಬಂದಿತ್ತು. ಆದರೆ ನಮ್ಮ ದೇಶದಲ್ಲಿ ವ್ಯಾಕಿನ್ ಪಡೆದಿಲ್ಲವೆಂದರೆ ಸಾರ್ವಜನಿಕ ಸ್ಥಳಗಳಿಗೆ ಹೋದಲು ಅವಕಾಶವಿಲ್ಲ. ಆದರೆ ಲಸಿಕೆ ಹಾಕಿಸಿಕೊಳ್ಳದವರು ಆರೋಗ್ಯ ಕಾರ್ಡ್ ಪಡೆಯಲು ಅವಕಾಶವಿದೆ. ಇತ್ತೀಚೆಗೆ ಸೋಂಕಿನಿಂದ ಚೇತರಿಸಿಕೊಂಡಿರಬೇಕು. ಸೋಂಕು ಬಂದು ಗುಣಮುಖರಾಗಿದ್ದರೆ ಅವರಲ್ಲಿ ಪ್ರತಿಕಾಯ ಶಕ್ತಿ ಇರುತ್ತದೆ ಎನ್ನುವ ಕಾರಣಕ್ಕೆ ಚೇತರಿಸಿಕೊಂಡವರಿಗೂ ಆರೋಗ್ಯ ಕಾರ್ಡ್ ವಿತರಣೆ ಮಾಡಲಾಗುತ್ತದೆ. ಇದೇ ನಮ್ಮ ಅಮ್ಮನಿಗೆ ಮುಳುವಾಯಿತು ಎಂದಿದ್ದಾನೆ.
ಲಸಿಕೆ ಪಡೆದವರು ಮತ್ತು ಕೋವಿಡ್ ಸೋಂಕಿನಿಂದ ಚೇತರಿಸಿಕೊಂಡವರು ತಮ್ಮ ವಿವರಗಳನ್ನು ನೀಡಿ ಸಾರ್ವಜನಿಕ ಸ್ಥಳಗಳು, ಬಾರ್, ಪಬ್, ಕೆಫೆ, ಸಿನಿಮಾ ಮಂದಿರ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ತೆರಳಲು ಅವಕಾಶವಿದೆ. ಕಾರ್ಯಕ್ರಮಗಳಿಗೆ ತೆರಳಲು ಪಾಸ್ ಸಿಗುತ್ತದೆ ಎನ್ನುವುದೂ ನಮ್ಮ ತಾಯಿ ಇಂಥದ್ದೊಂದು ಕೃತ್ಯಕ್ಕೆ ಮುಂದಾದರು ಎಂದು ರೆಕ್ಸ್ ಹೇಳಿದ್ದಾನೆ.
ಸೋಂಕು ತಗುಲಿದ ತಕ್ಷಣ ಅವರು ಪ್ರತ್ಯೇಕವಾಸದಲ್ಲಿದ್ದರು. ವೈದ್ಯರ ಸಲಹೆಯಂತೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಆದರೆ ಚಿಕಿತ್ಸೆಗೆ ಅವರು ಸ್ಪಂದಿಸಲಿಲ್ಲ ಎಂದಿದ್ದಾನೆ.