ನ್ಯೂಸ್

ಕಾಲ್ನಡಿಗೆಯಲ್ಲಿ ತೆರಳುತ್ತಿದ್ದವರ ಮೇಲೆ ಹರಿದ ಟ್ರಕ್​​: ಐವರ ದುರ್ಮರಣ- ಹಲವರಿಗೆ ಗಾಯ

ಪಾಲಿ (ರಾಜಸ್ಥಾನ): ರಾಮ್‌ದೇವ್ರಾದ ದೇವಸ್ಥಾನಕ್ಕೆ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದ ಭಿಲ್ವಾರಾ ಜಿಲ್ಲೆಯ ಭಕ್ತರ ಮೇಲೆ ಟ್ರಕ್​ ಹರಿದು ಐವರು ದುರ್ಮರಣ ಹೊಂದಿದ್ದಾರೆ. ನಿನ್ನೆ (ಭಾನುವಾರ) ತಡರಾತ್ರಿ ಈ ಘಟನೆ ನಡೆದಿದೆ. ಘಟನೆಯಲ್ಲಿ ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ

ರೋಹತ್ ಪೊಲೀಸ್ ಠಾಣೆ ವ್ಯಾಪ್ತಿಯ ಮುಕುನಪುರ ಗ್ರಾಮದ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಭಿಲ್ವಾರಾ ಜಿಲ್ಲೆಯ ರಾಯಪುರ ಪೊಲೀಸ್ ಠಾಣೆ ವ್ಯಾಪ್ತಿಯ ಖೇಮ್ನಾ ಗ್ರಾಮದ ನಿವಾಸಿ ಪಪ್ಪು ಪುತ್ರ ಹೀರಾಲಾಲ್ ಭಿಲ್ ತನ್ನ ಸಹಚರರೊಂದಿಗೆ ದೇಗುಲಕ್ಕೆ ಹೋಗುತ್ತಿದ್ದರು. ಮುಕನಪುರ ಗ್ರಾಮದ ಹೊರವಲಯದ ರಸ್ತೆಯಲ್ಲಿ ಇವರೆಲ್ಲರು ಕಾಲ್ನಡಿಗೆಯಲ್ಲಿ ಹೋಗುತ್ತಿದ್ದಾಗ, ಹಿಂದಿನಿಂದ ಬಂದ ಟ್ರಕ್​ ಅವರಿಗೆ ಡಿಕ್ಕಿ ಹೊಡೆದಿದೆ. ಈ ಸಂದರ್ಭದಲ್ಲಿ ಐವರು ಮೃತಪಟ್ಟಿದ್ದಾರೆ.

ಮೃತಪಟ್ಟವರನ್ನು ಪಪ್ಪು ಅವರ ಪುತ್ರ ಹೀರಾಲಾಲ್, ಗಿರ್ಧಾರಿ ಅವರ ಪುತ್ರ ರೋಷನ್​ಲಾಲ್, ಪವನ್ ಅವರ ಪುತ್ರ ಲಾಡು ಜಿ, ಪರಾಸ್ ಪುತ್ರ ಕೈಲಾಸ್ ಮತ್ತು ಸುಶೀಲಾ ಪುತ್ರಿ ರತನ್ ಜೋಧ್‌ಪುರ ಎಂದು ತಿಳಿದುಬಂದಿದೆ. ಈ ಪೈಕಿ ನಾಲ್ವರು ಸ್ಥಳದಲ್ಲಿಯೇ ಮೃತಪಟ್ಟರೆ, ಉಳಿದಿಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟಿರುವುದಾಗಿ ಪೊಲೀಸ್​ ಅಧಿಕಾರಿಗಳು ಹೇಳಿದ್ದಾರೆ.

ಈ ಅಪಘಾತದ ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದರು. ಬಳಿಕ ಮೃತ ದೇಹವನ್ನು ವಶಕ್ಕೆ ಪಡೆದು ಆಸ್ಪತ್ರೆಯ ಶವಾಗಾರದಲ್ಲಿ ಇರಿಸಿದ್ದಾರೆ. ಘಟನೆ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. (ಏಜೆನ್ಸೀಸ್​)