ನ್ಯೂಸ್

ಬೇಡ ಅಂದ್ರೂ ರಾಜ್​ ಕುಂದ್ರಾ ಕಿಸ್​ ಮಾಡಿ, ಹೇಗೇಗೋ ವರ್ತಿಸಿದ್ರು ಅಂದ ನಟಿಗೆ ಪೊಲೀಸರಿಂದ ಬುಲಾವ್​

ಮುಂಬೈ: ಬ್ಲೂ ಫಿಲ್ಮ್‌ ಕೇಸ್‌ನಲ್ಲಿ ಸಿಲುಕಿಕೊಂಡಿರೋ ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್‌ ಕುಂದ್ರಾ ವಿರುದ್ಧ ಲೈಂಗಿಕ ದೌರ್ಜನ್ಯದ ಕೇಸ್​ ಹಾಕಿರುವ ನಟಿ ಶೆರ್ಲಿನ್ ಛೋಪ್ರಾರನ್ನು ಪೊಲೀಸರು ವಿಚಾರಣೆಗೆ ಕರೆದಿದ್ದಾರೆ.

ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿರುವ ರಾಜ್ ಕುಂದ್ರಾ ಅವರಿಗೆ ಕೋರ್ಟ್‌ ಜಾಮೀನು ನಿರಾಕರಿಸಿರುವ ಬೆನ್ನಲ್ಲೇ ನಟಿ ಶೆರ್ಲಿನ್​ ಆರೋಪ ಮಾಡಿದ್ದರು. ಮುಂಬೈ ಅಪರಾಧ ವಿಭಾಗದ ಮುಂದೆ ಹಾಜರಾಗಿದ್ದ ಅವರು ಕುಂದ್ರಾ ತಮ್ಮ ಮೇಲೆ ಮಾಡಿರುವ ಲೈಂಗಿಕ ದೌರ್ಜನ್ಯದ ಕುರಿತು ಮಾಹಿತಿ ನೀಡಿದ್ದು, ಈ ದೂರಿನ ಆಧಾರದ ಮೇಲೆ ಕುಂದ್ರಾ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ಮುಂಬೈ ಕ್ರೈಂ ಬ್ರಾಂಚ್‌ನ ಪ್ರಾಪರ್ಟಿ ಸೆಲ್, ಬಾಲಿವುಡ್‌ ನಟಿ ಶೆರ್ಲಿನ್ ಚೋಪ್ರಾಗೆ ಸಮನ್ಸ್ ಜಾರಿಗೊಳಿಸಿದ್ದು, ಉದ್ಯಮಿ ರಾಜ್ ಕುಂದ್ರಾರನ್ನು ಬಂಧಿಸಿರುವ ಅಶ್ಲೀಲ ಚಿತ್ರ ನಿರ್ಮಾಣ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.

ಚಿತ್ರವೊಂದಕ್ಕೆ ಸಂಬಂಧಿಸಿದಂತೆ ರಾಜ್‌ ಕುಂದ್ರಾ ನನ್ನ ಜತೆ ಮಾತನಾಡಿದ್ದರು, ಹೀಗೆ ನಮ್ಮಿಬ್ಬರ ಪರಿಚಯವಾಗಿತ್ತು. ಅದಾದ ಮೇಲೆ ಕುಂದ್ರಾ ನನ್ನ ಮನೆಗೆ ಬರಲು ಶುರು ಮಾಡಿದರು. ನನ್ನನ್ನು ಚುಂಬಿಸಲು ಪ್ರಯತ್ನಿಸುತ್ತಿದ್ದರು. ನೀವು ವಿವಾಹಿತರು, ಹೀಗೆಲ್ಲಾ ಮಾಡಬಾರದು ಎಂದರೂ ಕೇಳದೇ ನನ್ನನ್ನು ಬಲವಂತ ಮಾಡುತ್ತಿದ್ದರು. ನನಗೆ ಇದೆಲ್ಲಾ ಇಷ್ಟವಾಗುವುದಿಲ್ಲ, ವಿವಾಹಿತನ ಜತೆ ಹೀಗೆಲ್ಲಾ ನಡೆದುಕೊಳ್ಳುವುದು ನನಗೆ ಇಷ್ಟವಿಲ್ಲ ಎಂದರೂ ಅವರು ಕೇಳದೇ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಪತ್ನಿ ಶಿಲ್ಪಾ ಜತೆ ನನ್ನ ಸಂಬಂಧ ಅಷ್ಟು ಚೆನ್ನಾಗಿಲ್ಲ, ಮನೆಯಲ್ಲಿ ನನಗೆ ತುಂಬಾ ಹಿಂಸೆಯಾಗುತ್ತಿದೆ ಎಂದುಕೊಂಡು ನನ್ನನ್ನು ಹತ್ತಿರ ಮಾಡಿಕೊಳ್ಳಲು ನೋಡುತ್ತಿದ್ದರು, ಇದರಿಂದಾಗಿ ನನ್ನ ಬಳಿ ಅಸಭ್ಯವಾಗಿ ನಡೆದುಕೊಂಡರು ಎಂದು ಕುಂದ್ರಾ ವಿರುದ್ಧ ನಟಿ ದೂರಿನಲ್ಲಿ ಹೇಳಿದ್ದಾರೆ.

ರಾಜ್ ಕುಂದ್ರಾ ಜತೆ ಸಂಪರ್ಕ ಹೊಂದಿದ್ದ ಕಾರಣಕ್ಕಾಗಿ ಶೆರ್ಲಿನ್​ ಅವರಿಗೂ ಬಂಧನದ ಭಯ ಕಾಡಿತ್ತು. ಈ ಹಿನ್ನೆಲೆಯಲ್ಲಿ ಅವರು ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದರು. ರಾಜ್​ ಕುಂದ್ರಾ ಅವರ ಬಗ್ಗೆ ಮೊದಲು ಮುಂಬೈ ಪೊಲೀಸರಿಗೆ ಮಾಹಿತಿ ನೀಡಿದ್ದು ತಾವೇ ಎಂದು ಶೆರ್ಲಿನ್​ ಚೋಪ್ರಾ ಹೇಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಹಲವು ಆಯಾಮಗಳಿಂದ ಪೊಲೀಸರು ತನಿಖೆ ಮುಂದುವರಿದಿದೆ.