ನ್ಯೂಸ್

ಬ್ಲೂ ಫಿಲ್ಮ್‌ ನೇರಪ್ರಸಾರಕ್ಕೆ ಪ್ಲ್ಯಾನ್‌- ಪೊಲೀಸರಿಗೆ 25 ಲಕ್ಷ ರೂ. ಲಂಚ? ಇ- ಮೇಲ್‌ನಿಂದ ರಹಸ್ಯ ಸ್ಫೋಟ!

ಮುಂಬೈ: ಅಶ್ಲೀಲ ಚಿತ್ರಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗಿರುವ ನಟಿ ಶಿಲ್ಪಾ ಶೆಟ್ಟಿ ಅವರ ಪತಿ ಉದ್ಯಮಿ ರಾಜ್‌ ಕುಂದ್ರಾ ಕುರಿತಂತೆ ಒಂದೊಂದೇ ಭಯಾನಕ ಮಾಹಿತಿಗಳನ್ನು ಹೊರಬರುತ್ತಿವೆ.

ಇದಾಗಲೇ ಹಲವಾರು ಸಂಸ್ಥೆ ಹೆಸರಿನಲ್ಲಿ ಬ್ಲೂ ಫಿಲ್ಮ್‌ ತಯಾರಿಸಿ ಹೊರದೇಶಗಳಲ್ಲಿ ಮಾರಾಟ ಮಾಡುತ್ತಿದ್ದ ರಾಜ್‌ ಕುಂದ್ರಾ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಅದರ ನೇರ ಪ್ರಸಾರಕ್ಕೆ ಅವಕಾಶ ಕಲ್ಪಿಸಲು ತಯಾರಿ ನಡೆಸಿರುವ ಮಾಹಿತಿ ಪೊಲೀಸರಿಗೆ ತಿಳಿದಿದೆ. ಅಷ್ಟರಲ್ಲಿಯೇ ಅವರು ಬಂಧನಕ್ಕೆ ಒಳಗಾಗಿದ್ದಾರೆ.

ಇನ್ನೂ ಒಂದು ಸ್ಫೋಟಕ ಮಾಹಿತಿ ಈಗ ಹೊರ ಬಂದಿದ್ದು, ಅದೇನೆಂದರೆ ತನ್ನ ಮೇಲೆ ಪೊಲೀಸರಿಗೆ ಅನುಮಾನ ಮೂಡುತ್ತಲೇ ಅವರು ತಮ್ಮನ್ನು ಬಂಧಿಸಬಾರದು ಎನ್ನುವ ಕಾರಣಕ್ಕೆ ಮುಂಬೈನ ಕ್ರೈಂ ಬ್ರ್ಯಾಂಚ್ ಪೊಲೀಸರಿಗೆ 25 ಲಕ್ಷ ರೂ. ಲಂಚ ನೀಡಿದ್ದರು ಎನ್ನುವ ಮಾಹಿತಿ ಸಿಕ್ಕಿದೆ.ಅಮೆರಿಕ ಮೂಲದ ಕಂಪೆನಿಯ ಒಡೆಯ, ಬ್ಲೂ ಫಿಲ್ಮ್‌ ಪ್ರಕರಣದ ಆರೋಪಿ ಅರವಿಂದ ಶ್ರೀವಾಸ್ತವ ಅಲಿಯಾಸ್ ರಾಶ್ ಠಾಕೂರ್ ಹಾಗೂ ಪೊಲೀಸ್ ನಡುವೆ ಹಣ ವರ್ಗಾವಣೆ ಆಗಿರುವ ಕುರಿತು ಮಾರ್ಚ್‌ನಲ್ಲಿಯೇ ಎನ್ನುವವರು ಭ್ರಷ್ಟಾಚಾರ ನಿಗ್ರಹ ದಳಕ್ಕೆ ಇಮೇಲ್ ಮೂಲಕ ದೂರು ಬಂದಿತ್ತು. ಈ ಮೇಲ್ ನಲ್ಲಿ ಲಂಚದ ಕುರಿತಾದ ವಾಟ್ಸ್‌ಆ್ಯಪ್‌ನ ಸ್ಕ್ರೀನ್ ಶಾಟ್‌ಗಳಿದ್ದವು ಎನ್ನಲಾಗಿದೆ. ಆದರೆ ಇದರ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ಮುಂಬೈ ಪೊಲೀಸ್ ಅಧಿಕೃತ ವಕ್ತಾರ ಡಿಸಿಪಿ ಚೈತನ್ಯ ಎಸ್ ತಿಳಿಸಿದ್ದಾರೆ.

ಶ್ರೀವಾಸ್ತವ ಅಮೆರಿಕ ಮೂಲದ ಕಂಪನಿಯ ಹೊಂದಿದ್ದು, ಕಳೆದ ಮಾರ್ಚ್‌ನಲ್ಲಿ ಈ ಪ್ರಕರಣ ಹೊರಬೀಳುತ್ತಲೇ ಪೊಲೀಸ್ ಇಲಾಖೆ ಈತನ ಹೆಸರಿನಲ್ಲಿ ಎರಡು ಬ್ಯಾಂಕ್ ಅಕೌಂಟ್‌ಗಳಲ್ಲಿ 4.50 ಕೋಟಿ ರೂ. ಹಣವನ್ನು ಜಪ್ತು ಮಾಡಿತ್ತು ಎನ್ನಲಾಗಿದೆ. ಈ ಲಂಚ ಪ್ರಕರಣದ ಕುರಿತೂ ಇನ್ನಷ್ಟೇ ತನಿಖೆ ಆಗಬೇಕಿದ್ದು, ಇನ್ನು ಎಷ್ಟು ಹುಳುಕುಗಳು ಹೊರಬರುತ್ತವೆ, ಇದಕ್ಕೆ ಯಾರ್ಯಾರು ಶಾಮೀಲಾಗಿದ್ದಾರೆ ಎನ್ನುವುದು ನೋಡಬೇಕಿದೆ.