ನ್ಯೂಸ್

VIDEO: 'ನಾವಿಬ್ಬರು, ನಮಗಿಬ್ಬರು' ಎಂದು ಪ್ರಧಾನಿಗೆ ಸ್ನೇಹಿತರ ದಿನದ ವಿಷ್​ ಮಾಡಿದ ರಾಹುಲ್​ ಗಾಂಧಿ!

ನವದೆಹಲಿ: ಇಂದು ಸ್ನೇಹಿತರ ದಿನ. ಈ ದಿನದಂದು ಕಾಂಗ್ರೆಸ್​ ಅಧ್ಯಕ್ಷ, ಸಂಸದ ರಾಹುಲ್​ ಗಾಂಧಿ ಪ್ರಧಾನಿ ನರೇಂದ್ರ ಮೋದಿಯವರಿಗೆ ವಿಷ್​ ಮಾಡಿದ್ದಾರೆ.

ಈ ಕುರಿತು ವಿಡಿಯೋ ಒಂದನ್ನುಬಿಡುಗಡೆ ಮಾಡಿರುವ ರಾಹುಲ್​ ಗಾಂಧಿ, ಅದನ್ನು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ಮೋದಿ ಸರ್ಕಾರದ ವಿರುದ್ಧ ವ್ಯಂಗ್ಯವಾಡಿದ್ದು, ನಾವಿಬ್ಬರು, ನಮಗಿಬ್ಬರು ಎಂಬ ಸ್ಲೋಗೋನ್​ ಹೇಳಿದ್ದಾರೆ. ನಾವಿಬ್ಬರು. ನಮಗಿಬ್ಬರು, ಈ ದೇಶ ನಡೆಯುತ್ತಿರುವುದು ನಾಲ್ವರಿಂದ ಮಾತ್ರ ಎಂದು ಅದರಲ್ಲಿ ಹೇಳಿದ್ದಾರೆ. ಜತೆಗೆ ವಿಡಿಯೋದಲ್ಲಿ ಇಂಗ್ಲಿಷ್​ ಹಾಡನ್ನು ಪ್ಲೇ ಮಾಡಲಾಗಿದೆ.

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ವಿವಿಧ ಕೈಗಾರಿಕೋದ್ಯಮದ ಜತೆ ಕೈ ಜೋಡಿಸಿರುವ ವೀಡಿಯೋ ಇದಾಗಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್​ ಆಗಿದೆ. ಈ ವೀಡಿಯೋದಲ್ಲಿ ಮೋದಿ ಹಲವಾರು ಗಣ್ಯ ವ್ಯಕ್ತಿಗಳ ಕೈಕುಲುಕುತ್ತಿರುವುದನ್ನು ಕಾಣಬಹುದು. ಇದಕ್ಕೆ ರಾಹುಲ್​ ಗಾಂಧಿ ಶೇಖ್​ಹ್ಯಾಂಡ್ ಮಾಡುತ್ತಿರುವುದನ್ನು ಕಾಣಬಹುದಾಗಿದೆ. ಹಮ್ ದೋ ಹಾಮಾರೆ ದೋ ಕಿ ಸರ್ಕಾರ್‌ಗೆ ಸ್ನೇಹಿತರ ದಿನಾಚರಣೆ ಶುಭಾಶಯಗಳು ಎಂದು ಕ್ಯಾಪ್ಷನ್‍ನಲ್ಲಿ ಬರೆಯುವ ಮೂಲಕ ಶುಭಾಶಯ ಕೋರಿದ್ದಾರೆ.

ಇದಕ್ಕೆ ಕಾಂಗ್ರೆಸ್ಸಿಗರು ಭಾರಿ ಶಹಭಾಸ್​ಗಿರಿ ನೀಡಿದ್ದರೆ, ಬಿಜೆಪಿ ಬೆಂಬಲಿಗರು ಗರಂ ಆಗಿದ್ದಾರೆ. ಬುದ್ಧಿ ಬೆಳೆಯದ ಚಿಕ್ಕಮಕ್ಕಳು ಶಾಲೆಗಳಲ್ಲಿ ಸಹಪಾಠಿಗಳ ಜತೆ ಜಗಳವಾಡುವಂತೆ ಕೆಲಸವಿಲ್ಲದವರು ಮಾತ್ರ ಇಂಥ ಹುಚ್ಚುಹುಚ್ಚು ವಿಡಿಯೋ ಮಾಡಲು ಸಾಧ್ಯ ಎಂದು ಹಲವರು ರಾಹುಲ್​ ಗಾಂಧಿಯವರನ್ನು ಟ್ರೋಲ್​ ಮಾಡಿದ್ದಾರೆ. ಜತೆಗೆ ಕಳೆದ ವರ್ಷ ತಮಿಳುನಾಡು ಸೇರಿದಂತೆ ಕೆಲವೆಡೆಗಳಲ್ಲಿ ರಾಹುಲ್​ ಗಾಂಧಿಯವರು ಮಾಡಿರುವ ಭಾಷಣಗಳ ತುಣುಕುಗಳನ್ನು ಹಾಕಿರುವ ಬಿಜೆಪಿ ಬೆಂಬಲಿಗರು, ಅರ್ಥವಿಲ್ಲದ ಇಂಥ ಮಾತುಗಳನ್ನಾಡುವವರು ಇನ್ನೇನು ವಿಡಿಯೋ ಮಾಡಲು ಸಾಧ್ಯ ಎಂದು ಅಣಕಿಸಿದ್ದಾರೆ. ಒಟ್ಟಿನಲ್ಲಿ ಈ ಸ್ನೇಹಿತರ ದಿನದ ವಿಷ್​ ಕಮೆಂಟಿಗರ ಬಾಯಲ್ಲಿ ಆಹಾರದ ವಸ್ತುವಾಗಿದೆ.

ವಿಡಿಯೋ ಇಲ್ಲಿದೆ ನೋಡಿ: