ಉತ್ತರ: ಮೂವತ್ತು ವರ್ಷಗಳ ಹಿಂದೆ ಆಗಿರುವ ವಿಭಾಗವನ್ನು ಈಗ ಕದಲಿಸುವಂತಿಲ್ಲ. ಅದರಲ್ಲಿ ನಿಮ್ಮ ಚಿಕ್ಕಪ್ಪನ ಸಹಿ ನಿಜವಾಗಿಯೇ ಇದ್ದರೆ ನೀವು ಹೆದರ ಬೇಕಾಗಿಲ್ಲ. ಪಾಲು ಪಟ್ಟಿಯಂತೆ ಅವರವರ ಹೆಸರಿಗೆ ಖಾತೆ ಪಹಣಿ ಬಂದಿದ್ದು, ಪಾಲು ಪಟ್ಟಿ ʼಆಕ್ಟೆಡ್ ಅಪಾನ್ʼ ಆಗಿದ್ದರೆ / ಜಾರಿಗೆ ಬಂದಿದ್ದರೆ, ನೀವು ಚಿಂತೆ ಮಾಡಬೇಡಿ.
ನಿಮ್ಮ ಚಿಕ್ಕಪ್ಪ ತಮ್ಮ ಜೀವಿತ ಕಾಲದಲ್ಲಿ ಪ್ರಶ್ನೆ ಮಾಡದ್ದನ್ನು ಈಗ ಅವರ ಮಗ ಮಾಡುವಂತಿಲ್ಲ. ಮೇಲಾಗಿ ನಿಮ್ಮ ತಂದೆಯ ಮತ್ತು ನಿಮ್ಮ ಸ್ವಯಾರ್ಜಿತ ಆಸ್ತಿಗಳಲ್ಲಿ ಅವರಿಗೆ ಯಾವ ಹಕ್ಕೂ ಇರುವುದಿಲ್ಲ. ಆದರೆ, ಯಾವ ಯಾವ ಆಸ್ತಿಗಳು ನಿಮ್ಮ ಸ್ವಯಾರ್ಜಿತ ಆಸ್ತಿಗಳು ಎನ್ನುವುದನ್ನು ಸಾಬೀತು ಮಾಡುವ ಹೊಣೆಗಾರಿಕೆ ನಿಮ್ಮ ಮೇಲೆ ಇರುತ್ತದೆ.