ಪೆನ್ಸಿಲ್ವೇನಿಯಾ (ಅಮೆರಿಕ): ಈ ಚಿತ್ರದಲ್ಲಿ ಕಾಣಿಸುತ್ತಿರುವಾಕೆಯ ಹೆಸರು ಮಾರ್ಗರೇಟ್ ಕೊಲ್ಲರ್. ಅಮೆರಿಕ ಪೆನ್ಸಿಲ್ವೇನಿಯಾದ ಈಕೆಗೆ ಈಗ 99 ವರ್ಷ ವಯಸ್ಸು. ಇವಳ ಕೈಯಲ್ಲಿ ಇರುವುದು ಈಕೆಯ ಮರಿ ಮೊಮ್ಮಗ. ಅಂದರೆ ಈ ವೃದ್ಧೆಯ ಮಗನ ಮಗಳ ಮಗ. 100ನೇ ವಯಸ್ಸಿಗೆ ಕಾಲಿಡುತ್ತಿರುವ ವೃದ್ಧೆಯ ಕೈಯಲ್ಲಿ ಬೆಚ್ಚಗೆ ಮಲಗಿರುವುದು ಈಕೆಯ 100ನೇ ಮರಿಮೊಮ್ಮಗ!
ಅಂದಹಾಗೆ ಮಾರ್ಗರೇಟ್ ಕೊಲ್ಲರ್ ಜೀವನ ಚರಿತ್ರೆಯೇ ಕುತೂಹಲವಾದದ್ದು. ಕ್ರೈಸ್ತ ನನ್ ಆಗಿದ್ದ ಮಾರ್ಗರೇಟ್ ಯುವತಿಯಾಗಿದ್ದಾಗ ಮದುವೆಯೇ ಬೇಡ ಎಂದಿದ್ದಳು. 1922ರಲ್ಲಿ ಹುಟ್ಟಿದ್ದ ಈಕೆ ಮದುವೆ, ಮಕ್ಕಳು ಎಲ್ಲದರಿಂದಲೂ ದೂರ ಹೋಗಬೇಕು ಎಂದು ಬಯಸಿದ್ದಳು. ಆದರೆ ಈಕೆಗೆ ಕಂಕಣಭಾಗ್ಯ ತಾನಾಗಿಯೇ ಒಲಿದು ಬಂದಿತ್ತು. ವಿಲಿಯಂ ಎಂಬುವರನ್ನು ಭೇಟಿಯಾದ ಮಾರ್ಗರೇಟ್ ಜೀವನದಲ್ಲಿ ತಿರುವು ಉಂಟಾಯಿತು. ವಿಲಿಯಂ ಜತೆ ಪ್ರೇಮ ಹುಟ್ಟಿತು. ಪರಸ್ಪರದ ಪ್ರೇಮದ ಸೆಲೆಯಲ್ಲಿ ಬಿದ್ದು, ಕೊನೆಗೆ ಮದುವೆಯಾದರು.
ಮದುವೆಯಾದ ಮೇಲೆ ಈ ದಂಪತಿಗೆ ಹುಟ್ಟಿದ್ದು, 11 ಮಕ್ಕಳು! ಈ ಮಕ್ಕಳಿಗೆ ಒಟ್ಟೂ ಹುಟ್ಟಿದ್ದು 56 ಮಕ್ಕಳು. ಅಂದರೆ ಮಾರ್ಗರೇಟ್ ಕೊಲ್ಲರ್ಗೆ 56 ಮೊಮ್ಮಕ್ಕಳು. ಈ 56 ಮೊಮ್ಮಕ್ಕಳಿಗೆ ಮಕ್ಕಳಾಗಿದ್ದು, ಅವರಲ್ಲಿ ಈ ಪುಟಾಣಿ 100ನೆಯದ್ದು. ಮಗುವಿಗೆ ಮುತ್ತಜ್ಜಿಯ ಕೊಲ್ಲರ್ ಎನ್ನುವ ಹೆಸರನ್ನೂ ಸೇರಿಸಿ ಕೊಲ್ಲರ್ ವಿಲಿಯಮ್ ಬಾಲ್ಸ್ಟರ್ ಎಂದು ನಾಮಕರಣ ಮಾಡಲಾಗಿದೆ.
ಈಗ ಈ ಮುತ್ತಜ್ಜಿಯ 100ನೇ ವರ್ಷವನ್ನು ವಿಜೃಂಭಣೆಯಿಂದ ಆಚರಿಸಲು ಕುಟುಂಬಸ್ಥರು ರೆಡಿಯಾಗಿದ್ದಾರೆ (ಏಜೆನ್ಸೀಸ್)
ಇಲ್ಲಿದೆ ನೋಡಿ ವಿಡಿಯೋ: ಕೃಪೆ- NBC10 Philadelphia