More

    ಮಮತಾ ಬ್ಯಾನರ್ಜಿಗೆ ಏಕಕಾಲದಲ್ಲಿ ಶಾಕ್​ ಕೊಟ್ಟ ಐಟಿ, ಇಡಿ ಅಧಿಕಾರಿಗಳು: ಆಪ್ತನಿಗೆ ಬಂತು ಗ್ರಹಚಾರ!

    ಕೋಲ್ಕತಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಆದಾಯ ತೆರಿಗೆ (ಐಟಿ) ಮತ್ತು ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಶಾಕ್​ ನೀಡಿದ್ದಾರೆ. ಮಮತಾ ಅವರ ಆಪ್ತರಾಗಿರುವ ಉದ್ಯಮಿಯೊಬ್ಬರಿಗೆ ಸೇರಲಾಗಿರುವ ಖಾಸಗಿ ಸುದ್ದಿ ವಾಹಿನಿಯ ಸಿಇಒ ಕೌಸ್ತವ್​ ರಾಯ್​ ಅವರ ಕಚೇರಿ ಮತ್ತು ಮನೆಯ ಮೇಲೆ ಅಧಿಕಾರಿಗಳು ದಾಳಿ ಮಾಡಿದ್ದಾರೆ.

    ಆದಾಯ ತೆರಿಗೆ (ಐಟಿ) ಮತ್ತು ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ದಾಳಿ ಮಾಡಿದ್ದಾರೆ. ಜಾರಿ ನಿರ್ದೇಶನಾಲಯ ಮತ್ತು ಆದಾಯ ತೆರಿಗೆಯ ಎರಡು ತಂಡಗಳು ದಾಳಿ ನಡೆಸಿವೆ. ಕೋಲ್ಕತಾ ಮೂಲದ ಉದ್ಯಮಿ ಮತ್ತು ಜನಪ್ರಿಯ ಬಂಗಾಳಿ ಸುದ್ದಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದಾರೆ ಕೌಸ್ತವ್ ರಾಯ್. ಇವರು ಮಮತಾ ಬ್ಯಾನರ್ಜಿ ಅವರ ನಿಕಟ ಸಂಬಂಧಕ್ಕೆ ಹೆಸರುವಾಸಿಯಾಗಿದೆ. ದಾಳಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಕೌಸ್ತವ್​ ರಾಯ್​ ಕೂಡ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.

    ಕಳೆದ ಮೇ ತಿಂಗಳಲ್ಲಿ ರಾಜ್ಯ ಸರ್ಕಾರ ಕಲ್ಯಾಣ ಮತ್ತು ಅಭಿವೃದ್ಧಿ ಯೋಜನೆಗಳ ಯೋಜನೆ ಮತ್ತು ಮೇಲ್ವಿಚಾರಣೆಗಾಗಿ ಸಮಿತಿಯನ್ನು ರಚಿಸಿ ವಿವಾದಾತ್ಮಕ ಹಿನ್ನೆಲೆ ಹೊಂದಿರುವ ಕೌಸ್ತವ್ ರಾಯ್ ಅವರನ್ನು ಸಮಿತಿಯ ಅಧ್ಯಕ್ಷರನ್ನಾಗಿ ಮಾಡಿದ ನಂತರ ರಾಯ್ ವಿವಾದದ ಸುಳಿಯಲ್ಲಿ ಸಿಲುಕಿದ್ದರು. ಕಂಪ್ಯೂಟರ್, ಸಾಫ್ಟ್‌ವೇರ್ ಮತ್ತು ಮಾಧ್ಯಮ ಸೇರಿ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಇವರನ್ನು ಅಧ್ಯಕ್ಷರನ್ನಾಗಿ ಮಾಡಲಾಗಿತ್ತು. ಇದು ಬಹಳ ಚರ್ಚೆಗೆ ಗ್ರಾಸವಾದ ಬಳಿಕ ಆಗಿನ ರಾಜ್ಯಪಾಲ ಜಗದೀಶ್ ಧನಕರ್​ ಅವರು ರಾಯ್​ರನ್ನು ವಜಾ ಮಾಡಿದ್ದರು.

    ಆರ್‌ಪಿ ಇನ್ಫೋಸಿಸ್ಟಮ್ಸ್‌ನ ನಿರ್ದೇಶಕರಾಗಿರುವ ರಾಯ್​ರನ್ನು 2018ರ ಮಾರ್ಚ್​ನಲ್ಲಿ ಸಿಬಿಐ ಬಂಧಿಸಿತ್ತು. ಆರ್‌ಪಿ ಇನ್ಫೋಸಿಸ್ಟಮ್ಸ್‌ನ ನಿರ್ದೇಶಕರಾಗಿ, ಪಂಜಾಬ್ ನ್ಯಾಷನಲ್ ಬ್ಯಾಂಕ್ ಮತ್ತು ಕೆನರಾ ಬ್ಯಾಂಕ್ ಸೇರಿದಂತೆ ಬ್ಯಾಂಕ್‌ಗಳ ಒಕ್ಕೂಟವನ್ನು ಒಳಗೊಂಡಿರುವ ರೂ 515 ಕೋಟಿ ಬ್ಯಾಂಕ್ ವಂಚನೆ ಹಗರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಇವರು ಒಳಗಾಗಿದ್ದರು.

    ಇನ್ನೊಂದೆಡೆ 2021ರ ಸೆಪ್ಟೆಂಬರ್‌ನಲ್ಲಿ ಭದ್ರತಾ ಕ್ಲಿಯರೆನ್ಸ್ ವಿಚಾರವಾಗಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದಿಂದ ರಾಯ್ ಒಡೆತನದ ಬಂಗಾಳಿ ಚಾನೆಲ್​​ನ ಪರವಾನಗಿ ರದ್ದುಗೊಳಿಸುವ ಎಚ್ಚರಿಕೆಯನ್ನು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ನೀಡಿತ್ತು ಎಂದು ವರದಿಯಾಗಿದೆ. (ಏಜೆನ್ಸೀಸ್​)

    VIDEO: ಗಾಡಿ ಸ್ಟಾರ್ಟ್​ ಮಾಡುವಾಗ ಇರಲಿ ಎಚ್ಚರ! ಮೈಸೂರು, ತುಮಕೂರಿನಲ್ಲಿ ಬೈಕ್​ ಒಳಗೆ ಕುಳಿತ ಬೃಹತ್​ ನಾಗರ…

    ಸಾವಿನ ಭೀಕರ ರೂಪ: ಮನೆಯೊಳಕ್ಕೆ ಟ್ರಕ್​ ನುಗ್ಗಿ ನಿವೃತ್ತ ಸಬ್​ಇನ್ಸ್​ಪೆಕ್ಟರ್​, ಪತ್ನಿ ಸೇರಿ ನಾಲ್ವರ ಸಾವು!

    ಶಿವಮೊಗ್ಗದಲ್ಲಿ ಕೋಮು ಗಲಭೆ ಸೃಷ್ಟಿ: ಆರೋಪಿಗಳದ್ದು ಕರಾಳ ಇತಿಹಾಸ- ಈ ಹಿಂದೆಯೂ ಮಾಡಿದ್ದರು ಘೋರ ಕೃತ್ಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts