ನ್ಯೂಸ್

ಆನ್‌ಲೈನ್‌ನಲ್ಲಿ ಬಟ್ಟೆ ಕೊಂಡವನಿಗೆ ಬಂತು ಜೀವಂತ ಹುಳುಗಳ ಬಾಕ್ಸ್‌!

suchetana

ನ್ಯೂಯಾರ್ಕ್‌: ಬಟ್ಟೆ ಕೊಂಡವರಿಗೆ ಕಲ್ಲು ಬಂತು, ಮೊಬೈಲ್‌ ಆರ್ಡರ್‌ ಮಾಡಿದವರಿಗೆ ಇನ್ನೇನೋ ಬಂತು ಎಂದೆಲ್ಲಾ ಓದುತ್ತಿರುತ್ತೀರಿ ಅಲ್ಲವೆ? ಆದರೆ ಇಲ್ಲೊಂದು ವಿಭಿನ್ನ ಎನ್ನುವ ಘಟನೆ ನಡೆದಿದೆ.

ಅದೇನೆಂದರೆ ಬಟ್ಟೆಗಳನ್ನು ಆನ್‌ಲೈನ್‌ನಲ್ಲಿ ಆರ್ಡರ್‌ ಮಾಡಿದವನಿಗೆ ಬಟ್ಟೆಗಳ ಜತೆ ಹುಳುಗಳೂ ಬಂದಿವೆ. ಅದೂ ಜೀವಂತ ಹುಳುಗಳು!

ಇಂಥದ್ದೊಂದು ಎಡವಟ್ಟು ಆಗಿರುವುದು ಅಮೆರಿಕದ ನ್ಯೂಯಾರ್ಕ್‌ನಲ್ಲಿ. ಅದೂ ಅಂತಿಂಥ ಬಟ್ಟೆಯ ಆರ್ಡರ್‌ಗಲ್ಲ. ಬದಲಿಗೆ ಪ್ರಸಿದ್ಧ ಬ್ರಾಂಡೆಡ್‌ ಬಟ್ಟೆ ಎನಿಸಿರುವ ನೈಕ್‌ ಕಂಪನಿಯ ಬಟ್ಟೆಗಳನ್ನು ಆರ್ಡರ್‌ ಮಾಡಿದವನಿಗೆ ಈ ರೀತಿ ಆಗಿದೆ.

ಪಾರ್ಸಲ್​ ಬಾಕ್ಸ್​ನಲ್ಲಿದ್ದ ಬಟ್ಟೆಗಳ ಜತೆ ಹುಳುಗಳೂ ಕಂಡು ಬಂದಿವೆ. ಹುಳುಗಳು ತೆವಳುತ್ತಿರುವ ಚಿತ್ರಗಳನ್ನು ಮತ್ತು ಹುಳುಗಳ ವೀಡಿಯೊ ಮಾಡಿ, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ಈ ಗ್ರಾಹಕ.

ಇದನ್ನೂ ಓದಿ: ಪುಲ್ವಾಮಾ ದಾಳಿ: ಪಾಕ್‌ನ ಉಗ್ರ ಮುಖ ಬಯಲು- 5 ಸಾವಿರ ಪುಟಗಳಲ್ಲಿದೆ ಮಾಹಿತಿ

ನಾನು ನೈಕ್‌ನಿಂದ ಕೆಲವು ಬಟ್ಟೆಗಳನ್ನು ಖರೀದಿಸಿದ್ದೆ. ತಮಾಷೆಯೆಂದರೆ ಬಟ್ಟೆಗಳ ಜೊತೆಗೆ ಡಜನ್​ಗಟ್ಟಲೆ ಜೀವಂತ ಹುಳುಗಳೂ ಪತ್ತೆಯಾಗಿವೆ ಎಂದು ತಮ್ಮ ಫೇಸ್‌ಬುಕ್ ಪೋಸ್ಟ್‌ನಲ್ಲಿ ಬರೆದಿದ್ದಾರೆ. ಘಟನೆಯ ನಂತರ ಅವರು ನೈಕ್ ಕಂಪನಿಗೆ ನೈಜತೆಯನ್ನು ವಿವರಿಸಿದ್ದಾರೆ. ತಮ್ಮ ತಪ್ಪಿನ ಅರಿವಾದ ಕೂಡಲೇ ನೈಕ್ ಕಂಪನಿ ಸಂಪೂರ್ಣ ಹಣವನ್ನು ಮರುಪಾವತಿ ಮಾಡಿದಲ್ಲದೆ, ಬದಲಿ ವಸ್ತುಗಳನ್ನು ನೀಡಿದೆ.

/https://www.vijayavani.net/s-fridge-online-calss-teacher/