ನ್ಯೂಸ್

ಈರುಳ್ಳಿ ಉಪ್ಪಿನಕಾಯಿ ಹೇಗೆ ಮಾಡೋದು ಗೊತ್ತಾ? ಸಲ್ಮಾನ್​ ಖಾನ್​ ಇಲ್ಲಿ ತೋರಿಸಿಕೊಟ್ಟಿದ್ದಾರೆ ನೋಡಿ...

suchetana

ಮುಂಬೈ: ಅಡುಗೆ ಮಾಡುವುದು ಕೂಡ ಒಂದು ಅತ್ಯದ್ಭುತ ಕಲೆ. ಇದೇ ಕಾರಣಕ್ಕೆ ಉನ್ನತ ಹುದ್ದೆಯಲ್ಲಿ ಇರುವವರೂ, ಗಣ್ಯ ವ್ಯಕ್ತಿಗಳು, ನಟ-ನಟಿಯರು ಎಷ್ಟೇ ಬಿಜಿ ಷೆಡ್ಯೂಲ್​ ಇದ್ದರೂ ಅಡುಗೆ ಪ್ರಿಯರಾಗಿದ್ದರೆ ಸ್ವಲ್ಪ ಸಮಯವನ್ನಾದರೂ ಇದಕ್ಕಾಗಿ ವಿನಿಯೋಗ ಮಾಡುತ್ತಾರೆ.

ಇನ್ನು, ನಟ-ನಟಿಯರ ವಿಷಯಕ್ಕೆ ಮಾತ್ರ ಬರುವುದಾದರೆ ತಮ್ಮ ಅಭಿಮಾನಿಗಳನ್ನು ಓಲೈಸಿಕೊಳ್ಳಲು, ತಮ್ಮ ಟಿಆರ್​ಪಿ ಹೆಚ್ಚಿಸಿಕೊಳ್ಳಲು ಹೊಸ ಹೊಸ ವಿಧಾನಗಳನ್ನು ಕಂಡುಕೊಳ್ಳುವಲ್ಲಿ ಇವರದ್ದು ಎತ್ತಿದ ಕೈ. ತಮ್ಮ ಜನಪ್ರಿಯತೆ ತುಸು ಕಮ್ಮಿಯಾಗುತ್ತಿದೆ ಎಂದುಕೊಂಡರಂತೂ ಸಾಮಾಜಿಕ ಜಾಲತಾಣದಲ್ಲಿ ಹೊಸ ಹೊಸ ಅವತಾರಗಳಲ್ಲಿ ಅವರು ಕಾಣಿಸಿಕೊಳ್ಳುತ್ತಾರೆ.

ಇದೀಗ ಬಾಲಿವುಡ್​ ನಟ ಸಲ್ಮಾನ್​ ಖಾನ್​ ಸರದಿ. ಅವರು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಅಭಿಮಾನಿಗಳಿಗಾಗಿ ಈರುಳ್ಳಿ ಉಪ್ಪಿನಕಾಯಿಯನ್ನು ಮಾಡಿ ತೋರಿಸಿದ್ದಾರೆ. ಇವರ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ.

ಕಪ್ಪು ಟೀಶರ್ಟ್ ಹಾಗೂ ಕೆಂಪು ಪ್ಯಾಂಟ್ ಧರಿಸಿರುವ ಸಲ್ಮಾನ್, ಫ್ರೆಂಚ್‌ ಗಡ್ಡ ಬಿಟ್ಟುಕೊಂಡು ಬಾಣಸಿಗನಾಗಿ ಕಾಣಿಸಿಕೊಂಡಿದ್ದಾರೆ.

ಹಸಿ ಈರುಳ್ಳಿಯ ಉಪ್ಪಿನಕಾಯಿಯನ್ನು ಹೇಗೆ ಮಾಡಿದ್ದಾರೆ ಎಂದು ನೀವೇ ನೋಡಿ, ಇಷ್ಟವಾದ್ರೆ ಟ್ರೈ ಮಾಡಿ...