ನ್ಯೂಸ್

ಕೆಲಸಕ್ಕೆ ಸೇರಿದರೂ ವಿಧವೆಗೆ ಗಂಡನ ಆಸ್ತಿಯಲ್ಲಿ ಹಕ್ಕು ಸಿಗುತ್ತಾ?

suchetana
ಪ್ರಶ್ನೆ: ನನ್ನ ತಂಗಿಯ ಅತ್ತೆ ಮಾವ ಇಬ್ಬರೂ ಅನಾರೋಗ್ಯದಿಂದ ಮೃತಪಟ್ಟಿರುತ್ತಾರೆ. ನನ್ನ ತಂಗಿಯ ಮನೆಯಲ್ಲಿ ಅವಳ ಮೈದುನನ ಸಂಸಾರ ಇದೆ. ನನ್ನ ತಂಗಿಯ ಗಂಡ ಎರಡು ವರ್ಷಗಳ ಹಿಂದೆ ಅಪಘಾತದಲ್ಲಿ ಮರಣಹೊಂದಿದ್ದಾರೆ. ನಂತರ ನನ್ನ ತಂಗಿ ಕೆಲಸಕ್ಕೆ ಆಯ್ಕೆಯಾಗಿದ್ದಾಳೆ. ಅವಳಿಗೆ ಮಕ್ಕಳು ಇಲ್ಲಾ. ಈಗ ಅವಳು ನಮ್ಮ ಭಾವನ ಆಸ್ತಿಯಲ್ಲಿ ಭಾಗ ಪಡೆಯಬಹುದೇ?

ಉತ್ತರ: ನಿಮ್ಮ ತಂಗಿಗೆ ಅವಳ ಮೃತ ಗಂಡನ ಆಸ್ತಿಯ ಹಕ್ಕು ಸಂಪೂರ್ಣವಾಗಿ ಬರುತ್ತದೆ. ಅವಳು ಕೆಲಸದಲ್ಲಿ ಸೇರಿರುವುದಕ್ಕೂ, ಆಸ್ತಿಯ ಹಕ್ಕಿಗೂ ಯಾವ ಸಂಬಂಧವೂ ಇಲ್ಲ.

ನಿಮ್ಮ ಭಾವ ಬದುಕಿದ್ದರೆ ಅವರಿಗೆ ಆಸ್ತಿಯಲ್ಲಿ ಯಾವ ಹಕ್ಕು ಇತ್ತೋ ಆ ಹಕ್ಕು ನಿಮ್ಮ ತಂಗಿಗೆ ಸಂಪೂರ್ಣವಾಗಿ ಬರುತ್ತದೆ. ನಿಮ್ಮ ತಂಗಿ ಧೈರ್ಯವಾಗಿ ಮೈದುನನ ಮೇಲೆ ವಿಭಾಗದ ಕೇಸು ಹಾಕಬಹುದು.

ಸೂಚನೆ: ಕಾನೂನಿಗೆ ಸಂಬಂಧಿಸಿದ ನಿಮ್ಮ ಪ್ರಶ್ನೆಗಳನ್ನು susheelasarathi@yahoo.co.in ಅಥವಾ lalitha.vijayavani@gmail.com ಗೆ ಕಳುಹಿಸಬಹುದು. (ಕೋರ್ಟ್‌ಗಳಲ್ಲಿ ಇತ್ಯರ್ಥಕ್ಕೆ  ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ದಯವಿಟ್ಟು ಕೇಳಬೇಡಿ)

ದಾಂಪತ್ಯದಲ್ಲಿ ಸಮರಸ ಮೂಡುವುದು ಹೇಗೆ ಎಂಬ ಕುರಿತಾಗಿ ಎಸ್​.ಸುಶೀಲಾ ಚಿಂತಾಮಣಿಯವರು ತಿಳಿಸಿರುವ ವಿಡಿಯೋಗಾಗಿ ಇಲ್ಲಿ ಕ್ಲಿಕ್ಕಿಸಿ.