ನ್ಯೂಸ್

ಪರಿಶಿಷ್ಟ ಜಾತಿಯವರು ಕ್ರಯದ ಜಮೀನನ್ನು ವಾಪಸ್ ಪಡೆಯಬಹುದೇ?

suchetana
ಪ್ರಶ್ನೆ: 1972 ರಲ್ಲಿ ನಮ್ಮ ತಾತನವರಿಗೆ ಎರಡು ಎಕರೆ ಜಮೀನು ದರ್ಖಾಸ್ತನಲ್ಲಿ ಮಂಜೂರು ಆಗಿತ್ತು. ನಾವು ಪರಿಶಿಷ್ಟ ಜಾತಿಗೆ ಸೇರಿದವರು. 1975ರಲ್ಲಿ ನಮ್ಮ ತಾತ ತೀರಿಕೊಂಡರು. ನಮ್ಮ ತಾತನಿಗೆ ನಾಲ್ಕು ಮಕ್ಕಳು ಇದ್ದರು. ನಮ್ಮ ತಂದೆ ಕಡೆಯವರು. ನಮ್ಮ ತಂದೆಯ ಸಹಿ ಇಲ್ಲದೆ ನಮ್ಮ ದೊಡ್ಡಪ್ಪ ಆಸ್ತಿಯನ್ನು ಮಾರಾಟ ಮಾಡಿದ್ದಾರೆ. ನಮ್ಮ ತಂದೆ 2000ದಲ್ಲಿ ತೀರಿಕೊಂಡಿದ್ದಾರೆ. ಈಗ ನಮ್ಮ ತಾತನ ಜಮೀನನ್ನು ನಾವು ವಾಪಸ್ ಪಡೆಯಬಹುದೇ?

ಉತ್ತರ: ನಿಮ್ಮ ಆಸ್ತಿಯ ವಿಷಯ ಪಿ.ಟಿ.ಸಿ.ಎಲ್ ಕಾಯ್ದೆಯ ಕೆಳಗೆ ಬರುತ್ತದೆಯೇ ಎನ್ನುವುದನ್ನೂ ಗಮನಿಸಬೇಕು. ಪಿ.ಟಿ.ಸಿಎಲ್ ಕಾಯ್ದೆಯ ಕೆಳಗೆ ಬರುವ ಕೆಲವು ಪ್ರಕರಣಗಳನ್ನು ಸಿವಿಲ್ ನ್ಯಾಯಾಲಯದಲ್ಲಿ ಹಾಕಲಾಗುವುದಿಲ್ಲ.

ನಿಮ್ಮ ತಂದೆ ತಾವು ಬದುಕಿರುವಾಗ ಅವರ ಅಣ್ಣ ಮಾಡಿರುವ ಕ್ರಯವನ್ನು ಪ್ರಶ್ನೆ ಮಾಡದೇ ಇರುವುದರಿಂದ ಲಿಮಿಟೇಷನ್ ಕಾಯ್ದೆಯ ಪರಿಧಿಯಲ್ಲಿ ತೊಂದರೆಗೆ ಒಳಗಾಗುತ್ತದೆಯೇ ಎನ್ನುವುದನ್ನೂ ಗಮನಿಸಬೇಕು. ನಿಮ್ಮ ತಾತನಿಗೆ ಮಂಜೂರು ಆಗಿರುವ ದಾಖಲೆಯ ಪ್ರತಿಯನ್ನು , ಕ್ರಯ ಪತ್ರದ ನಕಲನ್ನು ತೆಗೆದುಕೊಂಡು ಹೋಗಿ ವಕೀಲರನ್ನು ನೇರವಾಗಿ ಭೇಟಿ ಮಾಡಿ ಸಲಹೆ ಪಡೆಯಿರಿ.

ಸೂಚನೆ: ಕಾನೂನಿಗೆ ಸಂಬಂಧಿಸಿದ ನಿಮ್ಮ ಪ್ರಶ್ನೆಗಳನ್ನು susheelasarathi@yahoo.co.in ಅಥವಾ lalitha.vijayavani@gmail.com ಗೆ ಕಳುಹಿಸಬಹುದು. (ಕೋರ್ಟ್‌ಗಳಲ್ಲಿ ಇತ್ಯರ್ಥಕ್ಕೆ  ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ದಯವಿಟ್ಟು ಕೇಳಬೇಡಿ)

ಕಾನೂನಿಗೆ ಸಂಬಂಧಿಸಿದ ಇತರ ಪ್ರಶ್ನೋತ್ತರಗಳಿಗಾಗಿ vijayavani.net ಗೆ ಭೇಟಿ ಕೊಟ್ಟು ಅಂಕಣ ವಿಭಾಗದಲ್ಲಿ ನ್ಯಾಯದೇವತೆ ಸೆಕ್ಷನ್​ ಮೇಲೆ ಕ್ಲಿಕ್​ ಮಾಡಿ.