ಉತ್ತರ: ನೀವು ಹೆದರಬೇಕಾಗಿಲ್ಲ. ನಿಮ್ಮ ತಾಯಿಗೆ ಆಕೆಯ ತವರಿನಿಂದ ಬಂದ ಆಸ್ತಿಯಲ್ಲಿ, ನಿಮ್ಮ ತಾಯಿ ಬದುಕಿರುವವರೆಗೆ ನಿಮ್ಮ ತಂದೆಗಾಗಲೀ, ಯಾವುದೇ ಮಕ್ಕಳಿಗಾಗಲೀ ಹಕ್ಕು ಇರುವುದಿಲ್ಲ. ನಿಮ್ಮ ತಾಯಿ ಬದುಕಿರುವಾಗ ಆಸ್ತಿಯನ್ನು ಏನಾದರೂ ಮಾಡಬಹುದು. ಯಾರಿಗೆ ಬೇಕಾದರೂ ದಾನ, ಭೋಗ್ಯ ಕ್ರಯ, ವಿಲ್ ಮಾಡಬಹುದು.
ಆದರೆ, ನಿಮ್ಮ ತಾಯಿ ಆಸ್ತಿಯನ್ನು ಹಾಗೇ ಉಳಿಸಿ ಸತ್ತರೆ, ಆ ಆಸ್ತಿಯಲ್ಲಿ ನಿಮ್ಮ ತಾಯಿಯ ಐದೂ ಮಕ್ಕಳಿಗೆ ಸಮಪಾಲು ಇರುತ್ತದೆ. ಅಂತಹ ಸಂದರ್ಭದಲ್ಲಿ ನಿಮ್ಮ ಅಕ್ಕನಿಗೂ ಒಂದು ಪಾಲು ಸಿಗುತ್ತದೆ. ತಾಯಿ ಬದುಕಿರುವಾಗ ನಿಮ್ಮ ಅಕ್ಕ ಕೇಸು ಹಾಕಿದರೆ ನೀವು ಹೆದರಬೇಕಾಗಿಲ್ಲ.ಇನ್ನು ಆಕೆಗೆ ಅವಳ ಗಂಡನಿಂದ ಆಗುತ್ತಿರುವ ಚಿತ್ರಹಿಂಸೆಯಿಂದ ತಪ್ಪಿಸಿಕೊಳ್ಳಲು, ನಿಮ್ಮ ಅಕ್ಕ ಧೈರ್ಯ ಮಾಡಿ ಕೌಟುಂಬಿಕ ಹಿಂಸೆಯಿಂದ ಮಹಿಳೆಯರನ್ನು ರಕ್ಷಣೆ ಮಾಡುವ ಕಾನೂನಿನ ಕೆಳಗೆ ಪ್ರಕರಣ ದಾಖಲಿಸಿ ರಕ್ಷಣೆಯ ಆದೇಶ ಪಡೆಯಬಹುದು.
ಕಾನೂನಿಗೆ ಸಂಬಂಧಿಸಿದ ಇತರ ಪ್ರಶ್ನೋತ್ತರಗಳಿಗಾಗಿ ಈ ಲಿಂಕ್ ಕ್ಲಿಕ್ಕಿಸಿ https://www.vijayavani.net/category/%e0%b2%a8%e0%b3%8d%e0%b2%af%e0%b2%be%e0%b2%af%e0%b2%a6%e0%b3%87%e0%b2%b5%e0%b2%a4%e0%b3%86/