ನ್ಯೂಸ್

ಡಿಎನ್ಎ ವರದಿಯ ಆಧಾರದ ಮೇಲೆ ವಿಚ್ಛೇದನ ಪಡೆಯಬಹುದೆ?

suchetana
ಪ್ರಶ್ನೆ: ನಮ್ಮ ಮದುವೆಯಾಗಿ ಮೂರು ವರ್ಷ ಆಯಿತು. ನನ್ನ ಹೆಂಡತಿ ಮದುವೆಗೆ ಮುಂಚೆ ಬೇರೆ ಹುಡುಗನನ್ನು ಪ್ರೀತಿಸುತ್ತಿದ್ದಳು. ಇದನ್ನು ಮುಚ್ಚಿಟ್ಟು ನನ್ನ ಜೊತೆ ಮದುವೆ ಆಗಿದ್ದಳು. ನನ್ನ ಜೊತೆ ಸರಿಯಾಗಿ ಸಂಸಾರ ಮಾಡಲಿಲ್ಲ. ಆಗಾಗ ತವರಿಗೆ ಹೋಗಿ ವರ್ಷಗಟ್ಟಲೇ ಅಲ್ಲೇ ಇದ್ದ ಮೇಲೆ ಒಂದು ಮಗು ಆಯಿತು. ಈ ಮಗು ನಿನ್ನದಲ್ಲ ಎಂದೂ ಹೇಳಿದ್ದಾಳೆ. ನಾನು ಡಿ.ಎನ್.ಎ ಮಾಡಿಸಿದಾಗ ಆ ಮಗು ನನ್ನದಲ್ಲ ಎಂದು ಗೊತ್ತಾಯಿತು.ಈಗ ಅವಳು ವಿಚ್ಛೇದನಕ್ಕೆ ಒಪ್ಪುತ್ತಿಲ್ಲ. ನಾನು ಡಿ.ಎನ್.ಎ.ಪರೀಕ್ಷೆಯ ವರದಿಯ ಆಧಾರದ ಮೇಲೆ ವಿಚ್ಛೇದನಕ್ಕೆ ಪ್ರಕರಣ ದಾಖಲಿಸಬಹುದೇ? ಎಷ್ಟು ದಿನದಲ್ಲಿ ವಿಚ್ಛೇದನ ಸಿಗುತ್ತದೆ?

ಉತ್ತರ: ವಿವಾಹಿತ ಪತ್ನಿ ಬೇರೆಯವರ ಜೊತೆ ದೈಹಿಕ ಸಂಬಂಧ ಹೊಂದುವುದು ಕ್ರೂರತೆ ಆಗುತ್ತದೆ. ಕ್ರೂರತೆಯನ್ನು ಸಾಬೀತು ಪಡಿಸಲು ಡಿ.ಎನ್.ಎ ವರದಿ ಪೂರಕವಾಗಿ ಸಹಾಯವಾಗುತ್ತದೆ. ನಿಮ್ಮ ಪರವಾಗಿ ಡಿ.ಎನ್.ಎ ವರದಿ ಇರುವುದರಿಂದ ನೀವು ವಿಚ್ಛೇದನಕ್ಕೆ ಪ್ರಕರಣವನ್ನು ದಾಖಲಿಸ ಬಹುದು. ಈ ಅನೈತಿಕ ಸಂಬಂಧದ ಜೊತೆಗೆ ನಿಮ್ಮ ಮೇಲೆ ಆಗಿರುವ ಇತರ ಕ್ರೂರತೆಯ ಅಂಶಗಳನ್ನೂ ವಿವರಿಸಿ.

ಯಾವುದೇ ಪ್ರಕರಣ ಇಷ್ಟೇ ಸಮಯದಲ್ಲಿ ಇತ್ಯರ್ಥ ಆಗುತ್ತದೆ ಎಂದು ಹೇಳಲಾಗುವುದಿಲ್ಲ. ಆದರೆ ನೀವು ವಿಚ್ಛೇದನಕ್ಕೆ ಪ್ರಕರಣ ದಾಖಲಿಸಿದ ಮೇಲೆ, ನಿಮ್ಮ ಪತ್ನಿಗೆ ನೋಟೀಸು ಜಾರಿ ಆದ ಮೇಲೆ ಪ್ರಕರಣವನ್ನು ಮಧ್ಯಸ್ಥಿಕೆಗೆ ಕಳಿಸಲು ಕೇಳಿಕೊಳ್ಳಿ. ಅಲ್ಲಿ ನಿಮ್ಮ ಪತ್ನಿ ಒಪ್ಪಿಕೊಂಡರೆ ಪರಸ್ಪರ ಒಪ್ಪಿಗೆಯಿಂದ ಹೊಸ ಪ್ರಕರಣ ದಾಖಲಿಸಿ ಆರುತಿಂಗಳ ನಂತರ ಏಳು ತಿಂಗಳ ಒಳಗೇ ವಿಚ್ಛೇದನದ ಆದೇಶವನ್ನು ಪಡೆಯಬಹುದು.

(ನ್ಯಾಯದೇವತೆ ಅಂಕಣದ ಹಿಂದಿನ ಪ್ರಶ್ನೋತ್ತರಗಳನ್ನು ನೋಡಲು vijayavani.net ಕ್ಲಿಕ್ಕಿಸಿ. ಅಲ್ಲಿ ಅಂಕಣ ಕಾಲಮ್‌ನಲ್ಲಿ ನ್ಯಾಯದೇವತೆ ಎಂದು ಇದ್ದು ಅದರ ಮೇಲೆ ಕ್ಲಿಕ್‌ ಮಾಡಿದರೆ ಎಲ್ಲವೂ ಲಭ್ಯ.)

ಸೂಚನೆ: ಕಾನೂನಿಗೆ ಸಂಬಂಧಿಸಿದ ನಿಮ್ಮ ಪ್ರಶ್ನೆಗಳನ್ನು susheelasarathi@yahoo.co.in ಅಥವಾ lalitha.vijayavani@gmail.com ಗೆ ಕಳುಹಿಸಬಹುದು. (ಕೋರ್ಟ್‌ಗಳಲ್ಲಿ ಇತ್ಯರ್ಥಕ್ಕೆ  ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ದಯವಿಟ್ಟು ಕೇಳಬೇಡಿ)

ದಾಂಪತ್ಯದ ಕುರಿತು ವಕೀಲೆ ಸುಶೀಲಾ ಚಿಂತಾಮಣಿ ಅವರ ಮಾತುಗಳನ್ನು ಇಲ್ಲಿ ನೀವು ಕೇಳಬಹುದು: