More

    ಆಸ್ತಿಯಲ್ಲಿ ಪಾಲು ಬೇಡ ಎಂದು ಬರೆದುಕೊಟ್ಟಾಕೆ ಮತ್ತೆ ಭಾಗ ಕೇಳಬಹುದೇ?

    ಆಸ್ತಿಯಲ್ಲಿ ಪಾಲು ಬೇಡ ಎಂದು ಬರೆದುಕೊಟ್ಟಾಕೆ ಮತ್ತೆ ಭಾಗ ಕೇಳಬಹುದೇ?ಪ್ರಶ್ನೆ: ನಮ್ಮ ತಾಯಿ ಹೆಣ್ಣು ಮಕ್ಕಳಿಗೆ ಪಾಲು ಇಲ್ಲ ಎಂದು ಏನನ್ನೂ ಪಡೆಯದೆ ಅವರ ತಮ್ಮಂದಿರಿಗೆ ಸಹಿ ಮಾಡಿಕೊಟ್ಟಿದ್ದಾರೆ. ಈಗ ಸುಪ್ರೀಂ ಕೋರ್ಟಿನಿಂದ ತೀರ್ಪು ಬಂದಿರುವುದರಿಂದ ನಮ್ಮ ತಾಯಿ ಕೇಸು ಹಾಕಿ ಪಾಲು ಪಡೆಯಬಹುದೆ?

    ಉತ್ತರ: ನಿಮ್ಮ ತಾಯಿ ಅವರ ಸಹೋದರರಿಗೆ ಯಾವ ಪತ್ರದಲ್ಲಿ ಸಹಿ ಹಾಕಿದ್ದಾರೆ ಎನ್ನುವುದು ಮುಖ್ಯ. ಒಂದು ವೇಳೆ ನಿಮ್ಮ ತಾಯಿ ಸ್ವ ಇಚ್ಛೆಯಿಂದ ಅವರ ಸಹೋದದರಿಗೆ ಹಕ್ಕು ಬಿಡುಗಡೆ ಪತ್ರ ಮಾಡಿಕೊಟ್ಟಿದ್ದು ಅದು ನೋಂದಣಿ ಆಗಿದ್ದರೆ ನಿಮ್ಮ ತಾಯಿ ತನ್ನ ಹಕ್ಕನ್ನು ಮತ್ತೆ ಪ್ರಶ್ನೆ ಮಾಡುವಂತಿಲ್ಲ.

    ಆದರೆ ನಿಮ್ಮ ತಾಯಿ ಬಿಳಿಯ ಕಾಗದದ ಮೇಲೆ ಅಥವಾ ನೋಂದಣಿ ಆಗದೆ ಇರುವ ಬರಿಯ ಛಾಪಾ ಕಾದದ ಮೇಲೆ ನನಗೆ ಆಸ್ತಿಯಲ್ಲಿ ಹಕ್ಕು ಇಲ್ಲ ಎಂಬ ಬರಹಕ್ಕೆ ಸಹಿ ಮಾಡಿದ್ದರೆ, ಆಗ ಕಾನೂನು ಬೇರೆ ಆಗುತ್ತದೆ. ಎಲ್ಲ ದಾಖಲೆಗಳನ್ನೂ ತೆಗೆದುಕೊಂಡು ಹೋಗಿ ವಕೀಲರನ್ನು ಮುಖತ: ಭೇಟಿ ಮಾಡಿ ಮುಂದಿನ ಸಲಹೆ ಪಡೆಯಿರಿ.

    (ನ್ಯಾಯದೇವತೆ ಅಂಕಣದ ಹಿಂದಿನ ಪ್ರಶ್ನೋತ್ತರಗಳನ್ನು ನೋಡಲು vijayavani.net ಕ್ಲಿಕ್ಕಿಸಿ. ಅಲ್ಲಿ ಅಂಕಣ ಕಾಲಮ್‌ನಲ್ಲಿ ನ್ಯಾಯದೇವತೆ ಎಂದು ಇದ್ದು ಅದರ ಮೇಲೆ ಕ್ಲಿಕ್‌ ಮಾಡಿದರೆ ಎಲ್ಲವೂ ಲಭ್ಯ.)

    ಸೂಚನೆ: ಕಾನೂನಿಗೆ ಸಂಬಂಧಿಸಿದ ನಿಮ್ಮ ಪ್ರಶ್ನೆಗಳನ್ನು [email protected] ಅಥವಾ [email protected] ಗೆ ಕಳುಹಿಸಬಹುದು. (ಕೋರ್ಟ್‌ಗಳಲ್ಲಿ ಇತ್ಯರ್ಥಕ್ಕೆ  ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ದಯವಿಟ್ಟು ಕೇಳಬೇಡಿ)

    ಜಮೀನಿನ ದಾಖಲಾತಿಗಳು ಇಲ್ಲದಿದ್ದರೆ ಪಹಣಿ ನಮ್ಮ ಹೆಸರಿಗೆ ಬರಲು ಏನು ಮಾಡಬೇಕು?

    ದಾಂಪತ್ಯದ ಕುರಿತು ವಕೀಲೆ ಸುಶೀಲಾ ಚಿಂತಾಮಣಿ ಅವರ ಮಾತುಗಳನ್ನು ಇಲ್ಲಿ ನೀವು ಕೇಳಬಹುದು:

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts