ನ್ಯೂಸ್

ವಿಚ್ಛೇದನದ ವೇಳೆ ಜೀವನಾಂಶ ಕೇಳದಿದ್ದಾಕೆ ಕೆಲ ವರ್ಷಗಳ ನಂತರ ಕೇಳಬಹುದೆ?

ಪ್ರಶ್ನೆ: ನನಗೆ ಮತ್ತು ನನ್ನ ಪತ್ನಿಗೆ ವಿಚ್ಛೇದನ ಆಗಿ ಮೂರು ವರ್ಷ ಆಗಿದೆ. ನಾನು ಮರುಮದುವೆ ಆಗಿ

ನನಗೆ ಮೂರು ವರ್ಷದ ಮಗನೂ ಇದ್ದಾನೆ. ಈಗ ನನ್ನ ಮೊದಲ ಹೆಂಡತಿ ಅವಳಿಗೆ ಜೀವನಾಂಶ

ಕೊಡು ಎಂದು ಕೇಳುತ್ತಿದ್ದಾಳೆ. ಕೊಡದಿದ್ದರೆ ಕೋರ್ಟಿಗೆ ಹೋಗುತ್ತೇನೆ ಎನ್ನುತ್ತಿದ್ದಾಳೆ. ವಿಚ್ಛೇದನದ

ಆದೇಶವನ್ನು ಅವಳು ಚಾಲೆಂಜ್ ಸಹ ಮಾಡಿಲ್ಲ. ನಾನೇಕೆ ಅವಳಿಗೆ ಜೀವನಾಂಶ ಕೊಡಬೇಕು?

ಉತ್ತರ: ವಿಚ್ಛೇದಿತ ಪತ್ನಿಗೆ ತನ್ನನ್ನು ತಾನು ಪೋಷಿಸಿಕೊಳ್ಳುವ ಚೈತನ್ಯ ಶಕ್ತಿ ಇಲ್ಲದೇ ಹೋದರೆ, ಆಕೆ ಮರು

ಮದುವೆ ಆಗಿರದೇ ಇದ್ದರೆ, ಆಕೆಯ ವಿಚ್ಛೇದಿತ ಪತಿ ಆಕೆಗೆ ಜೀವನಾಂಶ ಕೊಡಲೇಬೇಕಾಗುತ್ತದೆ.

ವಿಚ್ಛೇದನ ಜೀವನಾಂಶದ ಹಕ್ಕನ್ನು ಕುಂಠಿತಗೊಳಿಸುವುದಿಲ್ಲ. ನಿಮ್ಮ ಪೂರ್ವ ಪತ್ನಿಗೆ ಕೆಲಸ ಸಿಗುವವರೆಗೆ

ಅಥವಾ ಆಕೆ ಮರು ಮದುವೆ ಆಗುವವರೆಗೆ ನೀವು ಆಕೆಗೆ ಜೀವನಾಂಶ ಕೊಡಲೇ ಬೇಕಾಗುತ್ತದೆ.

ವಿಚ್ಛೇದನದ ಆದೇಶವನ್ನು ನಿಮ್ಮ ಪೂರ್ವ ಪತ್ನಿ ಚಾಲೆಂಜ್ ಮಾಡಿರದೇ ಹೋದರೂ ಆಕೆಗೆ

ಜೀವನಾಂಶದ ಹಕ್ಕು ಇರುತ್ತದೆ.

ಸೂಚನೆ: ಕಾನೂನಿಗೆ ಸಂಬಂಧಿಸಿದ ನಿಮ್ಮ ಪ್ರಶ್ನೆಗಳನ್ನು lalitha.vijayavani@gmail.com ಗೆ ಕಳುಹಿಸಬಹುದು. (ಕೋರ್ಟ್‌ಗಳಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ದಯವಿಟ್ಟು ಕೇಳಬೇಡಿ)

ಕಾನೂನಿಗೆ ಸಂಬಂಧಿಸಿದ ಇತರ ಪ್ರಶ್ನೋತ್ತರಗಳಿಗಾಗಿ https://www.vijayavani.net/ ಗೆ ಭೇಟಿ ಕೊಟ್ಟು ಅಂಕಣ ವಿಭಾಗದಲ್ಲಿ ನ್ಯಾಯದೇವತೆ ಸೆಕ್ಷನ್​ ಮೇಲೆ ಕ್ಲಿಕ್​ ಮಾಡಿ.