ನ್ಯೂಸ್

ತಾತನ ಆಸ್ತಿ ಸ್ವಯಾರ್ಜಿತವಾಗಿದ್ದರೆ ನನ್ನಮ್ಮನಿಗೆ ಪಾಲು ಸಿಗತ್ತಾ?

suchetana
ಪ್ರಶ್ನೆ: ನಮ್ಮ ತಾತನಿಗೆ ಇಬ್ಬರು ಮಕ್ಕಳು. ಒಬ್ಬ ಮಗ ಮತ್ತು ಒಬ್ಬ ಮಗಳು (ಅಂದರೆ ನಮ್ಮ ತಾಯಿ). ನಮ್ಮ ತಾತ ತೀರಿಕೊಂಡು 23 ವರ್ಷಗಳಾಗಿವೆ. ಎಲ್ಲ ಆಸ್ತಿಗಳೂ ನಮ್ಮ ತಾತನ ಸ್ವಯಾರ್ಜಿತ ಆಸ್ತಿಗಳು. ನಮ್ಮ ತಾತ ನಮ್ಮ ತಾಯಿಗೆ ಕೊಡಬೇಕೆಂದುಕೊಂಡಿದ್ದ ಆಸ್ತಿಯನ್ನು ನಮ್ಮ ಮಾವ ಈಗ ಬೇರೆಯವರಿಗೆ ನಮ್ಮ ತಾಯಿಗೆ ತಿಳಿಸದೇ , ಮಾರಾಟ ಮಾಡಿದ್ದಾರೆ. ನಮ್ಮ ತಾಯಿಗೆ ಮದುವೆ ಆಗಿ ನಲವತ್ತು ವರ್ಷಗಳಾಗಿವೆ. ಆದ್ದರಿಂದ ಭಾಗ ಇಲ್ಲ ಎಂದು ನಮ್ಮ ಮಾವ ಹೇಳುತ್ತಿದ್ದಾರೆ. ನಾವು ಏನು ಮಾಡಬಹುದು? ದಯವಿಟ್ಟು ತಿಳಿಸಿ. 

ಉತ್ತರ: ಮೃತ ಹಿಂದೂ ಪುರುಷನ ಆಸ್ತಿಯಲ್ಲಿ ಆತನ ಪತ್ನಿಗೆ ಮತ್ತು ಮಕ್ಕಳಿಗೆ ಸಮಭಾಗ ಇರುತ್ತದೆ. ನಿಮ್ಮ ತಾತನ ಆಸ್ತಿ (ನಿಮ್ಮ ಅಜ್ಜಿ ಇಲ್ಲದಿದ್ದರೆ) ಅವರ ಇಬ್ಬರು ಮಕ್ಕಳಿಗೂ ಸಮಪಾಲಾಗ ಬೇಕು. ಹೆಣ್ಣು ಮಕ್ಕಳಿಗೆ ಯಾವಾಗ ಮದುವೆ ಆಗಿದ್ದರೂ ಅವರ ಆಸ್ತಿಯ ಹಕ್ಕು ಅದರಿಂದ ಕುಂಠಿತವಾಗುವುದಿಲ್ಲ. ನಿಮ್ಮ ತಾಯಿಯ ಮೂಲಕ ವಿಭಾಗದ ದಾವೆ ಹಾಕಿಸಿ. ಕೊಂಡುಕೊಂಡಿರುವವರನ್ನೂ ದಾವೆಯಲ್ಲಿ ಪಾರ್ಟಿ ಮಾಡಿ.

ಸೂಚನೆ: ಕಾನೂನಿಗೆ ಸಂಬಂಧಿಸಿದ ನಿಮ್ಮ ಪ್ರಶ್ನೆಗಳನ್ನು susheelasarathi@yahoo.co.in ಅಥವಾ lalitha.vijayavani@gmail.com ಗೆ ಕಳುಹಿಸಬಹುದು. (ಕೋರ್ಟ್‌ಗಳಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ದಯವಿಟ್ಟು ಕೇಳಬೇಡಿ)

ಕಾನೂನಿಗೆ ಸಂಬಂಧಿಸಿದ ಇತರ ಪ್ರಶ್ನೋತ್ತರಗಳಿಗಾಗಿ https://www.vijayavani.net/ ಗೆ ಭೇಟಿ ಕೊಟ್ಟು ಅಂಕಣ ವಿಭಾಗದಲ್ಲಿ ನ್ಯಾಯದೇವತೆ ಸೆಕ್ಷನ್​ ಮೇಲೆ ಕ್ಲಿಕ್​ ಮಾಡಿ.