ಲಖನೌ: ರಾಜಸ್ಥಾನದ ಉದಯಪುರದಲ್ಲಿ ಟೈಲರ್ ಕನ್ಹಯ್ಯಲಾಲ್ ಅವರ ರುಂಡ ಕಡಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ದೇಶಾದ್ಯಂತ ಭಾರಿ ಸಂಚನ ಸೃಷ್ಟಿಸಿದೆ.
ಕೆಲ ಮುಸ್ಲಿಂ ಸಂಘಟನೆಗಳು ಸೇರಿದಂತೆ ಹಲವರು ಇದರ ವಿರುದ್ಧ ಪ್ರತಿಭಟನೆ ನಡೆಸುತ್ತಿರುವಾಗಲೇ ನಿನ್ನೆಯಷ್ಟೇ ರಾಷ್ಟ್ರೀಯ ಕಿಸಾನ್ ಸಂಘದ ಉಚ್ಚಾಟಿತ ಅಧ್ಯಕ್ಷ ರಾಕೇಶ್ ಟಿಕಾಯತ್ ಈ ಘಟನೆಯನ್ನು ಸಣ್ಣ ವಿಷಯ ಎಂದು ಕರೆದು ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಇದೀಗ ಟೈಲರ್ ಬರ್ಬರ ಹತ್ಯೆ ವಿಡಿಯೋ ಅನ್ನು ಶೇರ್ ಮಾಡಿಕೊಂಡಿರುವ ಉತ್ತರ ಪ್ರದೇಶದ ಯೂಸುಫ್ ಖಾನ್ ಎಂಬಾತ ತುಂಬಾ ಒಳ್ಳೆಯ ಕಾರ್ಯ ಮಾಡಿರುವಿರಿ ಸಹೋದರರೆ, ನಿಮಗೆ ಒಳ್ಳೆಯದಾಗಲಿ ಎಂದು ಕಮೆಂಟ್ ಹಾಕಿದ್ದಾನರೆ.
ಈ ಛಪ್ರೌಲಿ ನಿವಾಸಿ ಎಂದು ಗುರುತಿಸಲಾಗಿದ್ದು, ನೋಯ್ಡಾ ಪೊಲೀಸರು ಬಂಧಿಸಿದ್ದಾರೆ. ಟೈಲರ್ ರುಂಡವನ್ನು ಕಡಿದ ವಿಡಿಯೋ ಮಾಡಿ, ಈ ಕ್ರೂರಿಗಳು ಅದನ್ನು ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಅದರ ವಿಡಿಯೋ ಕೂಡ ಜಾಲತಾಣದಲ್ಲಿ ವೈರಲ್ ಆಗಿತ್ತು. ಆದರೆ ಅದನ್ನು ಈಗ ಜಾಲತಾಣದಿಂದ ತೆಗೆಯಲಾಗಿದೆ. ಆದರೆ ಅದು ಡಿಲೀಟ್ ಆಗುವ ಮುನ್ನ ಯೂಸುಫ್ ಖಾನ್ ಅದನ್ನು ಶೇರ್ ಮಾಡಿಕೊಂಡು ಈ ಕೃತ್ಯ ಎಸಗಿದ ಪಾಪಿಗಳನ್ನು ಹಾಡಿ ಹೊಗಳಿದ್ದಾನೆ.
ಇದನ್ನು ನೋಡಿದ್ದ ಗ್ರಾಮದ ನಿವಾಸಿಯೊಬ್ಬರು ದೂರು ನೀಡಿದ್ದರು. ಇದರ ಆಧಾರದ ಮೇಲೆ ಆರೋಪಿಯನ್ನು ಬಂಧಿಸಲಾಗಿದೆ. ವೀಡಿಯೋ ಕುರಿತು ಕಾಮೆಂಟ್ ಮಾಡಲು ಬಳಸಿದ್ದ ಮೊಬೈಲ್ ಫೋನ್ ಕೂಡ ಪೊಲೀಸರು ವಶಪಡಿಸಿಕೊಂಡಿದ್ದಾರೆ.