ಮಂಡ್ಯ: ಕಾಂಗ್ರೆಸ್-ಬಿಜೆಪಿ ಜತೆ ಸಮ್ಮಿಶ್ರ ಸರ್ಕಾರ ಮಾಡಲ್ಲ. ಈ ಸುದ್ದಿ ಸತ್ಯಕ್ಕೆ ದೂರವಾದದ್ದು. ನಮ್ಮ ಪಕ್ಷ ಅಧಿಕಾರಕ್ಕೆ ಬಂದೇ ಬರುತ್ತೆ ಎಂಬ ಸಂಪೂರ್ಣ ವಿಶ್ವಾಸ ಇದೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ ಮಗ ನಿಖಿಲ್ ಕುಮಾರಸ್ವಾಮಿ ಹೇಳಿದರು.
ಮಂಡ್ಯದಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ನೇತೃತ್ವದಲ್ಲಿ ರಾಜ್ಯಾದ್ಯಂತ ಪಂಚರತ್ನ ಕಾರ್ಯಕ್ರಮ ನಡೆಸಲಾಗುತ್ತಿದೆ. ಮೊದಲನೆಯದಾಗಿ 100 ಕ್ಷೇತ್ರ ಆಯ್ಕೆ ಮಾಡಲಾಗಿದೆ. ರಥೋತ್ಸವದ ಮೂಲಕ ಎಂಟು ಎಲ್ಇಡಿ ವಾಹನಗಳು ರೆಡಿ ಇವೆ ಎಂದು ಹೇಳಿದರು.
ವಾಹನಗಳಲ್ಲಿ ಪ್ರತಿ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ಕಾರ್ಯಕ್ರಮ ನಡೆಸಲು ಸಕಲ ಸಿದ್ಧತೆ ನಡೆಸಲಾಗಿದೆ. 123 ವಿಷಯ ಇಟ್ಟುಕೊಂಡು ಪಂಚರತ್ನ ಕಾರ್ಯಕ್ರಮ ಮಾಡುತ್ತಿದ್ದೇವೆ. ಮಳೆಯಿಂದ ಕಾರ್ಯಕ್ರಮ ತಡವಾಗಿದೆ. ನಮ್ಮ ಪಕ್ಷದ ಬಗ್ಗೆ ಶಕ್ತಿ ಇದೆ. ಪಕ್ಷದ ಕಾರ್ಯಕರ್ತರು ನಮ್ಮನ್ನು ಪ್ರೀತಿಸುತ್ತಿದ್ದಾರೆ ಎಂದು ನಿಖಿಲ್ ಹೇಳಿದರು.
ಈಗಾಗಲೇ ಪಕ್ಷದಲ್ಲಿ ಸರ್ವೆಯಾಗ್ತಿದೆ. ಸೂಕ್ತ ಅಭ್ಯರ್ಥಿಯನ್ನು ಕುಮಾರಸ್ವಾಮಿ ಅವರು ಆಯ್ಕೆ ಮಾಡುತ್ತಾರೆ. ಜೆಡಿಎಸ್ ಭದ್ರಕೋಟಿ ಅಂದ್ರೆ ಅದು ಕೆ.ಆರ್.ಪೇಟೆ. ಆದರೆ ಸದ್ಯ ಕೆ.ಆರ್.ಪೇಟೆ ಕ್ಷೇತ್ರ ಕಳೆದುಕೊಂಡಿದ್ದೇವೆ. ಆದಷ್ಟು ಬೇಗ ಆ ಗೊಂದಲಕ್ಕೆ ತೆರೆ ಎಳೆಯುತ್ತೇವೆ. ಜೆಡಿಎಸ್ ಪಕ್ಷ ಸರ್ಕಾರ ಇದ್ದ ಸಂದರ್ಭದಲ್ಲಿ ಕುಮಾರಸ್ವಾಮಿ, ದೇವೇಗೌಡ್ರು ಮಂಡ್ಯ ಜಿಲ್ಲೆಗೆ ಅಪಾರ ಕೊಡುಗೆ ಕೊಟ್ಟಿದ್ದಾರೆ. ಜನರಿಗೆ ಅವುಗಳ ಮನವರಿಕೆ ಮಾಡುವ ಕೆಲಸ ಮಾಡುತ್ತೇವೆ ಎಂದರು.
ಜನ ನಮ್ಮ ಕೈ ಬಿಡಲ್ಲ ಅನ್ನೋ ವಿಶ್ವಾಸ ಇದೆ. ಪುಟ್ಟರಾಜು ಅವರಿಗೆ 5 ಲಕ್ಷ ಜನ ಮತ ಕೊಟ್ಟಿದ್ದರು.ನಾನು ಕೂಡ ಠೇವಣಿ ಕಳೆದುಕೊಂಡಿಲ್ಲ. ಜನರು ನನ್ನ ಕೈ ಹಿಡಿದಿದ್ದಾರೆ. ನನ್ನ ಮೇಲೆ ಪ್ರೀತಿ ಇಟ್ಟಿದ್ದಾರೆ, ಅವರ ಕಷ್ಟದಲ್ಲಿ ನಾವು ಭಾಗಿಯಾಗೋದು ನಮ್ಮ ಸಂಸ್ಕೃತಿ ಎಂದು ನಿಖಿಲ್ ನುಡಿದರು (ದಿಗ್ವಿಜಯ ನ್ಯೂಸ್)