ನ್ಯೂಸ್

ಸುಶಾಂತ್‌ಗೆ ಡ್ರಗ್ಸ್ ಕೊಟ್ಟವನೇ ಆರ್ಯಂಗೂ ನೀಡಿದ್ನಾ? ನಿರ್ಮಾಪಕನ ಮನೆ ಮೇಲೆ ರೇಡ್‌!

ಮುಂಬೈ: ಕ್ರೂಸ್ ಶಿಪ್‌ನಲ್ಲಿ ರೇವ್‌ ಪಾರ್ಟಿ ನಡೆಸುವ ಮೂಲಕ ಡ್ರಗ್ಸ್‌ನ ಮಹಾಜಾಲವನ್ನು ಎನ್‌ಸಿಬಿ ಅಧಿಕಾರಿಗಳು ಭೇದಿಸಿದ್ದರು. ನಟ ಶಾರುಖ್‌ ಖಾನ್‌ ಪುತ್ರ ಆರ್ಯನ್‌ ಖಾನ್‌ ಸೇರಿದಂತೆ ಚಿತ್ರರಂಗದ ಹಲವು ದಿಗ್ಗಜರು ಈ ಕೇಸ್‌ನಲ್ಲಿ ಸಿಲುಕಿಕೊಳ್ಳುತ್ತಿದ್ದಂತೆಯೇ ಇಡೀ ಬಾಲಿವುಡ್‌ಗೆ ನಡುಕ ಶುರುವಾಗಿದೆ.

ಇದೀಗ ಸಿನಿಮಾ ನಿರ್ಮಾಪಕ ಇಮ್ತಿಯಾಜ್ ಖತ್ರಿ ನಿವಾಸ ಹಾಗೂ ಕಚೇರಿ ಮೇಲೆ ಎನ್‌ಸಿಬಿ ದಾಳಿ ನಡೆಸಿದೆ. ಮುಂಬೈನ ಬಾಂದ್ರಾದಲ್ಲಿರುವ ನಿವಾಸ ಹಾಗೂ ಕಚೇರಿಯ ಮೇಲೆ ದಾಳಿ ನಡೆದಿದೆ. ಇದಾಗಲೇ ಹಲವರ ಮನೆಯ ಮೇಲೆ ದಾಳಿ ನಡೆಸಿರುವ ಎನ್‌ಸಿಬಿ ಇದೀಗ ಖತ್ರಿ ಅವರ ಮೇಲೆ ಕಣ್ಣು ನೆಟ್ಟಿದೆ.

ಇದಕ್ಕೆ ಕಾರಣವೂ ಇದೆ. ಇಮ್ತಿಯಾಜ್​ ಖತ್ರಿ ಮುಂಬೈನ ಉದ್ಯಮಿಯೊಬ್ಬರ ಮಗ. ಇವರಿಗೆ ಬಾಲಿವುಡ್​ನ ಹಲವು ಮಂದಿ ಜತೆ ಸಂಪರ್ಕ ಇರುವುದು ಮಾತ್ರವಲ್ಲದೇ ಕಳೆದ ವರ್ಷ ಆತ್ಮಹತ್ಯೆ ಮಾಡಿಕೊಂಡಿದ್ದ ನಟ ಸುಶಾಂತ್​ ಸಿಂಗ್​ ರಜಪೂತ್​ ಅವರಿಗೆ ಡ್ರಗ್ಸ್​ ಪೂರೈಕೆ ಮಾಡುತ್ತಿದ್ದದ್ದು ಇವರೇ ಎಂಬ ಆರೋಪ ಇದೆ. ಇವರ ವಿರುದ್ಧ ಸುಶಾಂತ್ ಮ್ಯಾನೇಜರ್​ ಶ್ರುತಿ ಮೋದಿ ಆರೋಪ ಮಾಡಿದ್ದರು. ಆದ್ದರಿಂದ ಇದೀಗ ಅವರ ಮನೆ, ಕಚೇರಿಯ ಮೇಲೆ ದಾಳಿ ನಡೆದಿದೆ.

ಶಾರುಖ್​ ಪುತ್ರನಿಗೆ ಅವರೇ ಡ್ರಗ್ಸ್​ ಪೂರೈಕೆ ಮಾಡಿರಬಹುದು ಎಂಬ ಶಂಕೆ ಅಧಿಕಾರಿಗಳಿಗೆ ಮೂಡಿದ್ದು, ತನಿಖೆ ಬಳಿಕೆ ನಿಜಾಂಶ ತಿಳಿಯಲಿದೆ.