ನ್ಯೂಸ್

ಲೈಂಗಿಕ ಸಂಪರ್ಕದಿಂದಲೂ ಹರಡುತ್ತವೆ ಮಹಾಮಾರಿ ಮಂಕಿ ಪಾಕ್ಸ್‌: ಆತಂಕಕಾರಿ ವರದಿ ಬಿಚ್ಚಿಟ್ಟ ತಜ್ಞರು

suchetana

ನ್ಯೂಯಾರ್ಕ್‌: ಅಮೆರಿಕದಲ್ಲಿ ಪತ್ತೆಯಾಗಿರುವ ಭಯಾನಕ ಮಂಕಿ ಪಾಕ್ಸ್ ​​ವೈರಲ್​ ಬಗ್ಗೆ ವಿಜ್ಞಾನಿಗಳು ಅಧ್ಯಯನದಲ್ಲಿ ತೊಡಗಿರುವ ಬೆನ್ನಲ್ಲೇ ಶಾಕಿಂಗ್‌ ನ್ಯೂಸ್‌ ಒಂದು ಬಂದಿದೆ. ಕರೊನಾ ತಳಿಗಳಿಗಿಂತಲೂ ದುಪ್ಪಟ್ಟು ಭೀಕರತೆ ಸೃಷ್ಟಿಸುವ ವೈರಸ್ ಇದು ಎಂದು ಇದಾಗಲೇ ತಜ್ಞರು ವರದಿ ನೀಡಿದ್ದು, ಲೈಂಗಿಕ ಸಂಪರ್ಕದಿಂದಲೂ ಈ ಸೋಂಕು ಹರಡಬಹುದು ಎಂದು ವರದಿ ನೀಡಿದ್ದಾರೆ.

ಇದುವರೆಗೂ ಮಂಕಿಪಾಕ್ಸ್ ಆರೋಗ್ಯವಂತ ವ್ಯಕ್ತಿಯ ದೇಹವನ್ನು ಉಸಿರಾಟದ ಪ್ರದೇಶ, ಗಾಯಗಳು, ಮೂಗು, ಬಾಯಿ ಅಥವಾ ಕಣ್ಣುಗಳ ಮೂಲಕ ಪ್ರವೇಶಿಸಬಹುದು ಎಂದು ತಜ್ಞರು ಭಾವಿಸಿದ್ದರು. ಆದರೆ ಮಂಕಿ ಪಾಕ್ಸ್ ಹೊಂದಿರುವ ಯಾರೊಂದಿಗಾದರೂ ಲೈಂಗಿಕ ಕ್ರಿಯೆ ನಡೆಸಿದರೆ ಅದರಿಂದಲೂ ಈ ಸೋಂಕು ತಗಲುವ ಸಾಧ್ಯತೆ ಹೆಚ್ಚಿಗೆ ಎಂದು ಎಚ್ಚರಿಕೆ ನೀಡಲಾಗಿದೆ.

ಕೆನಡಾದಿಂದ ಅಮೆರಿಕದ ಬೋಸ್ಟನ್​​ ನಗರಕ್ಕೆ ಬಂದಿದ್ದ ವ್ಯಕ್ತಿಯಲ್ಲಿ ಈ ಸೋಂಕು ಕಾಣಿಸಿಕೊಂಡಿದೆ. ಕರೊನಾ ಪರೀಕ್ಷೆ ಮಾಡಿಸಲು ತಪಾಸಣೆಗೊಳಪಡಿಸಲಾಗಿತ್ತು. ಆಗ ಈ ಸತ್ಯಾಂಶ ಹೊರಬಂದಿದ್ದು, ಈ ವೈರಸ್‌ ಬಗ್ಗೆ ಇನ್ನಷ್ಟು ಸಂಶೋಧನೆ ನಡೆಸಲಾಗುತ್ತಿದೆ.

ಸದ್ಯ ಈ ವ್ಯಕ್ತಿಯನ್ನು ಪ್ರತ್ಯೇಕವಾಗಿ ಚಿಕಿತ್ಸೆ ನೀಡಲಾಗುತ್ತಿದ್ದು, ಇದು ಕರೊನಾ ಅಂತೆಯೇ ಹರಡುತ್ತದೆಯೇ ಎಂಬ ಬಗ್ಗೆ ಇನ್ನೂ ಮಾಹಿತಿ ಇಲ್ಲ. ಈ ಬಗ್ಗೆ ಪರೀಕ್ಷೆಗೊಳಪಡಿಸಲಾಗಿದೆ ಎಂದು ಇಲ್ಲಿನ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ. 2003ರಲ್ಲಿ ಎರಡು ಪ್ರಕರಣಗಳು ಪತ್ತೆಯಾಗಿದ್ದವು. ಆನಂತರ ಇದೇ ಮೊದಲ ಬಾರಿಗೆ ಈ ವೈರಸ್​ ಪತ್ತೆಯಾಗಿದೆ. ಪೋರ್ಚುಗಲ್​ನ ಐವರು ಸೇರಿ ಒಟ್ಟು 9 ಮಂದಿಯಲ್ಲಿ ಮಾತ್ರ ಈ ವೈರಸ್​ ಕಾಣಿಸಿಕೊಂಡಿದೆ ಎಂದು ಹೇಳಿದ್ದಾರೆ

ಏನಿದು ಮಂಕಿಪಾಕ್ಸ್?

ಮಂಕಿಪಾಕ್ಸ್ ವೈರಸ್ ಆರ್ಥೋಪಾಕ್ಸ್ ವೈರಸ್ ಕುಟುಂಬಕ್ಕೆ ಸೇರಿದೆ, ಚಿಕನ್​ಪಾಕ್ಸ್​ ರೀತಿಯಲ್ಲೇ ಈ ವೈರಸ್‌ ಕೂಡ ಇದ್ದು, ಕೈ ಕಾಲುಗಳ ಮೇಲೆ ಸಣ್ಣ ಗುಳ್ಳೆಗಳು ಬರಲಿದ್ದು, ಹೆಚ್ಚು ಸೆಳೆ ಹಾಗೂ ನೋವು ಹೊಂದಿರುತ್ತದೆ ಎಂದು ತಿಳಿಸಿದ್ದಾರೆ.

ಇದರಲ್ಲಿ ಸಿಡುಬು ರೋಗಕ್ಕೆ ಕಾರಣವಾಗುವ ವೆರಿಯೊಲಾ ವೈರಸ್ ಮತ್ತು ಸಿಡುಬು ಲಸಿಕೆಯಲ್ಲಿ ಬಳಸಲಾದ ವ್ಯಾಕ್ಸಿನಿಯಾ ವೈರಸ್ ಸೇರಿವೆ. ಮಂಕಿಪಾಕ್ಸ್ ವೈರಸ್‌ ಜ್ವರ, ಶೀತ, ತಲೆನೋವು, ಸ್ನಾಯು ನೋವು, ಆಯಾಸ, ಊದಿಕೊಂಡ ದುಗ್ಧರಸ ಗ್ರಂಥಿಗಳಂತಹ ಫ್ಲೂ ತರಹದ ಲಕ್ಷಣಗಳನ್ನು ಒಳಗೊಂಡಿರುತ್ತದೆ. ರೋಗದ ಆರಂಭಿಕ ಲಕ್ಷಣಗಳು ಜ್ವರ, ತಲೆನೋವು, ಬೆನ್ನು ಮತ್ತು ಕುತ್ತಿಗೆ ನೋವು ಮುಂತಾದವು ಎನ್ನಲಾಗಿದೆ.