ನ್ಯೂಸ್

ಮಾಜಿ ಶಾಸಕನಿಗೆ ಕರೊನಾ ಸೋಂಕು: ಯು.ಟಿ.ಖಾದರ್‌ ಕ್ವಾರಂಟೈನ್‌

suchetana

ಬೆಂಗಳೂರು: ಮಾಜಿ ಶಾಸಕ ಐವನ್‌ ಡಿಸೋಜಾ ಅವರಿಗೆ ಕರೊನಾ ಸೋಂಕು ತಗುಲಿದೆ. ಈ ಹಿನ್ನೆಲೆಯಲ್ಲಿ ಅವರ ಸಂಪರ್ಕಕ್ಕೆ ಬಂದಿರುವ ಶಾಸಕ ಯು.ಟಿ. ಖಾದರ್‌ ಸ್ವಯಂ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಕಾದರ್‌, 'ಮಾಜಿ ಶಾಸಕ ಐವನ್ ಡಿಸೋಜ ಹಾಗೂ ಲಕ್ಷಾಂತರ ಮಂದಿ ಕೋವಿಡ್ ಸೋಂಕಿತರಾಗಿರಾಗಿದ್ದಾರೆ. ಇವರೆಲ್ಲರೂ ಶೀಘ್ರದಲ್ಲೇ ಗುಣಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಕೆಲ ದಿನಗಳಿಂದ ಐವನ್ ಡಿಸೋಜ ಅವರ ಜತೆ ಪ್ರಾಥಮಿಕ‌ ಸಂಪರ್ಕದಲ್ಲಿದ್ದ ಕಾರಣ ನಾನು ಕೆಲ‌ವು ದಿನಗಳ ಕಾಲ ಸ್ವಯಂ‌ ನಿರ್ಬಂಧ ಹಾಕಿಕೊಂಡಿದ್ದೇನೆ' ಎಂದು ಹೇಳಿದ್ದಾರೆ.

ಸದ್ಯ ತಾವು ಕ್ವಾರಂಟೈನ್‌ಗೆ ಒಳಗಾಗಿರುವ ಹಿನ್ನೆಲೆಯಲ್ಲಿ, ಯಾರನ್ನೂ ಭೇಟಿಯಾಗಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ. ಇಂದು ನಿಗದಿಯಾಗಿದ್ದ ಜನಸಾಮಾನ್ಯರ ಭೇಟಿ, ಕ್ಷೇತ್ರದ ಅಭಿವೃದ್ದಿ ಬಗ್ಗೆ ಜಿಲ್ಲಾಧಿಕಾರಿಗಳ ಜತೆಗಿನ ಸಭೆ, ಕ್ಷೇತ್ರದಲ್ಲಿ‌ ನಿಗದಿಯಾಗಿದ್ದ ವಿವಿಧ ಕಾರ್ಯಕ್ರಮಗಳು ಮುಂದೂಡಲ್ಪಟ್ಟಿದ್ದೆ. ಜನ ಸಾಮಾನ್ಯರ ಸೇವೆಗೆ ದೂರವಾಣಿ ಮೂಲಕ‌ ಲಭ್ಯವಿದ್ದು, ಅಗತ್ಯವಿದ್ದಲ್ಲಿ ನೇರವಾಗಿ ದೂರವಾಣಿ ಮೂಲಕ ನನ್ನನ್ನು ಎಂದಿನಂತೆ ಸಂಪರ್ಕಿಸಬಹುದಾಗಿದೆ ಎಂದು ಟ್ವೀಟರ್‌ನಲ್ಲಿ ಅವರು ತಿಳಿಸಿದ್ದಾರೆ.

ಐವನ್ ಡಿಸೋಜ ಜತೆಗೆ ಪ್ರಾಥಮಿಕ ಸಂಪರ್ಕಿತದಲ್ಲಿದ್ದವರು ಕೆಮ್ಮು ಜ್ವರ ಮುಂತಾದ ಲಕ್ಷಣ ಕಂಡು ಬಂದಲ್ಲಿ ತಕ್ಷಣ ಪರೀಕ್ಷೆಗೆ ಒಳಗಾಗುವಂತೆ ಮನವಿ ಮಾಡುವಂತೆಯೂ ಖಾದರ್‌ ಕೋರಿಕೊಂಡಿದ್ದಾರೆ.