ನ್ಯೂಸ್

ಮೈಕ್ರೋಸಾಫ್ಟ್ ಕಂಪೆನಿಗೆ ಭಾರತೀಯನ ಸಾರಥ್ಯ: ಚೇರ್ಮನ್‌ ಸ್ಥಾನಕ್ಕೆ ನಾಡೆಲ್ಲಾ ಸತ್ಯ

ನ್ಯೂಯಾರ್ಕ್‌: ಸಾಫ್ಟ್‌ವೇರ್ ದೈತ್ಯ ಮೈಕ್ರೋಸಾಫ್ಟ್ ಕಂಪೆನಿಗೆ ನಾಡೆಲ್ಲಾ ಸತ್ಯ ಅವರನ್ನು ಚೇರ್ಮನ್‌ ಆಗಿ ನೇಮಕ ಮಾಡಲಾಗಿದೆ. ಇವರು ಇದೇ ಕಂಪೆನಿಯ ಸಿಇಒ ಆಗಿ ಕೆಲಸ ನಿರ್ವಹಿಸುತ್ತಿದ್ದರು

.

ಕಂಪೆನಿಯಲ್ಲಿ ಇದುವರೆಗೆ ಚೇರ್ಮನ್‌ ಆಗಿದ್ದ ಜಾನ್ ಥಾಮ್ಸನ್‌ ಅವರನ್ನು ಪ್ರಮುಖ ಸ್ವತಂತ್ರ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ. 2014ರಲ್ಲಿ ಮೈಕ್ರೋಸಾಫ್ಟ್​ ಕಂಪನಿಯ ಸಹ ಸ್ಥಾಪಕರಾಗಿದ್ದ ಬಿಲ್​ ಗೆಟ್ಸ್​ ಅವರಿಂದ ಚೇರ್ಮನ್ ಸ್ಥಾನವನ್ನು ಥಾಮ್ಸನ್‌ ಪಡೆದುಕೊಂಡಿದ್ದರು. ಇನ್ನು ಮುಂದೆ ಇವರು ಸ್ವತಂತ್ರ ನಿರ್ದೇಶಕರಾಗಿ ಸೇವೆ ಸಲ್ಲಿಸಲಿದ್ದಾರೆ.

ಸತ್ಯ  ಅವರು 2014ರಲ್ಲಿ ಮೈಕ್ರೋಸಾಫ್ಟ್​ ಕಂಪನಿಯ ಮುಖ್ಯ ನಿರ್ವಹಣಾಧಿಕಾರಿಯಾಗಿ (ಸಿಇಒ) ನೇಮಕಗೊಂಡಿದ್ದರು. ಸ್ಟೀವ್ ಬಲ್ವರ್‌ ಅವರಿಂದ ಸಿಇಒ ಆಗಿ ಅಧಿಕಾರ ಸ್ವೀಕರಿಸಿದ್ದರು. ವಿಶ್ವ ಆರೋಗ್ಯ ಸಂಸ್ಥೆಯ ಜತೆ ಸಭೆ ಸಿಇಒ ಹುದ್ದೆಯ ಜತೆಗೆ ಲಿಂಕ್ಡ್ ಇನ್, ಜೆನಿಮ್ಯಾಕ್ ವ್ಯವಹಾರಗಳ ಹೆಚ್ಚುವರಿ ಜವಾಬ್ದಾರಿಯನ್ನೂ ಇವರು ನಿಭಾಯಿಸುತ್ತಿದ್ದರು.