ನ್ಯೂಸ್

VIDEO: ಕಾಲು ಕಳಕೊಂಡರೂ ಮಂಡಿಯೂರಿ ಪ್ರೇಮ ನಿವೇದನೆ- ಪ್ರೀತಿಯ ಪರಿಗೆ ಕರಗಿದ ನೆಟ್ಟಿಗರು

suchetana

ಪ್ರೀತಿ ನಿವೇದನೆಗಾಗಿ ಯುವಕರಾಗಲೀ, ಯುವತಿಯರಾಗಲೀ ಏನೆಲ್ಲಾ ಸರ್ಕಸ್​ ಮಾಡುತ್ತಾರೆ. ಅದರಲ್ಲಿಯೂ ಯುವತಿಯನ್ನು ಇಂಪ್ರೆಸ್​ ಮಾಡಲು ಯುವಕರು ಎಷ್ಟು ಕಷ್ಟವಾದರೂ ಏನಾದರೂ ಹೊಸತನವನ್ನು ಹುಡುಕುತ್ತಾರೆ.

ಆದರೆ ಇವೆಲ್ಲವುಗಳಿಗಿಂತಲೂ ಭಿನ್ನವಾಗಿರುವ ಒಂದು ಘಟನೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್​ ಆಗಿದೆ. ಅದೇನೆಂದರೆ ಕಾಲು ಇಲ್ಲದ ಪ್ರೇಮಿಯೊಬ್ಬ ಮಂಡಿಯ ಮೇಲೆ ಕುಳಿತು ತನ್ನ ಪ್ರೇಯಸಿಗೆ ಪ್ರೇಮ ನಿವೇದನೆ ಕೇಳಿದ್ದಾರೆ. ಇವರ ಹೆಸರು ಜೋಶ್​ ಸ್ಮಿತ್​.

ಇವರು ತಮ್ಮ ಪ್ರೇಯಸಿಯನ್ನು ಭೇಟಿ ಮಾಡಲು ಹೊರಟಿದ್ದಾಗ ಅಪಘಾತವಾಗಿತ್ತು. ಇದರಿಂದಾಗಿ ತಮ್ಮ ಕಾಲುಗಳನ್ನು ಕಳೆದುಕೊಂಡರು. ಆದರೂ ಪ್ರೇಮ ನಿವೇದನೆಯನ್ನು ಮಂಡಿಯೂರಿಯೇ ಮಾಡಬೇಕು ಎಂದು ಅಂದುಕೊಂಡಿದ್ದ ಅವರು, ಕಷ್ಟಪಟ್ಟು ಮಂಡಿಯ ಮೇಲೆ ಕುಳಿತು ತನ್ನ ಪ್ರೇಯಸಿಗೆ ಪ್ರೇಮ ನಿವೇದನೆ ಮಾಡಿದ್ದಾರೆ.

ಇದನ್ನು ನೋಡಿದ ಪ್ರೇಯಸಿ ಕಣ್ಣೀರಾಗಿದ್ದಾಳೆ. ಮಂಡಿಯೂರಿ ಪ್ರೀತಿಯನ್ನು ವ್ಯಕ್ತಪಡಿಸಿದ್ದನ್ನು ನೋಡಿದ ಪ್ರೇಯಸಿಗೆ ಖುಷಿಯನ್ನು ತಡೆಯಲು ಆಗಿಲ್ಲ. ಹತ್ತಿರ ಹೋಗಿ ಅಪ್ಪುಗೆ ನೀಡುವ ಮೂಲಕ ಪ್ರೀತಿಯನ್ನು ಸ್ವೀಕರಿಸಿದ್ದಾಳೆ. ಇದನ್ನು ಅಲ್ಲಿದ್ದವರು ವಿಡಿಯೋ ಮಾಡಿದ್ದು, ಸಾಕಷ್ಟು ವೈರಲ್​ ಆಗಿದೆ. ಈ ಪ್ರೇಮಕ್ಕೆ ಹ್ಯಾಟ್ಸ್​ಆಫ್​ ಹೇಳಿದ್ದಾರೆ.

ನೀವೂ ನೋಡಿ ಈ ಭಾವನಾತ್ಮಕ ವಿಡಿಯೋ: ಕೃಪೆ ಜಿಎಂಎ