ಸಾಂದರ್ಭಿಕ ಚಿತ್ರ 
ನ್ಯೂಸ್

ಎಣ್ಣೆಪ್ರಿಯರಿಗಿಲ್ಲಿ ಭರ್ಜರಿ ಗುಡ್‌ ನ್ಯೂಸ್‌- ಕುಳಿತಲ್ಲೇ ಬರಲಿದೆ ಇಷ್ಟದ ಬಾಟಲಿಗಳು!

ಛತ್ತೀಸಗಢ : ಲಾಕ್‌ಡೌನ್ ಹಿನ್ನೆಲೆಯಲ್ಲಿ ಮದ್ಯದಂಗಡಿಗಳು ಸಂಪೂರ್ಣ ಬಂದ್‌ ಆಗಿವೆ. ಇದಾಗಲೇ ಸಾಕಷ್ಟು ಎಣ್ಣೆಪ್ರಿಯರು ತಿಂಗಳಿಗಾಗುವಷ್ಟು ಮದ್ಯವನ್ನು ಸಂಗ್ರಹಿಸಿ ಇಟ್ಟುಕೊಂಡಿದ್ದಾರೆ.

ಸರ್ಕಾರಕ್ಕೆ ಭಾರಿ ಆದಾಯ ತಂದುಕೊಡುವ ಮದ್ಯದಂಗಡಿ ಮುಚ್ಚಿದರೆ ನಷ್ಟ ಅನುಭವಿಸಬೇಕಾಗುತ್ತದೆ ಎನ್ನುವ ಕಾರಣಕ್ಕೆ ಮನೆಯ ಬಾಗಿಲಿಗೇ ಮದ್ಯವನ್ನು ಪೂರೈಕೆ ಮಾಡಲು ಸರ್ಕಾರವೊಂದು ಮುಂದಾಗಿದೆ. ಅಂದ ಹಾಗೆ ಇಂಥದ್ದೊಂದು ಅವಕಾಶ ಕಲ್ಪಿಸಿರುವುದು ಛತ್ತೀಸಗಢ ಸರ್ಕಾರ.

ಛತ್ತೀಸಗಢ ರಾಜ್ಯದಲ್ಲಿ ಮದ್ಯ ಹೋಂ ಡೆಲಿವರಿ ಪ್ರಾರಂಭ ಮಾಡಲಾಗುವುದು ಎಂದು ಅಬಕಾರಿ ಸಚಿವ ಕವಾಸಿ ಲಖ್ಮಾ ತಿಳಿಸಿದ್ದಾರೆ. ಲಾಕ್‌ಡೌನ್‌ನಿಂದ ಸರ್ಕಾರಕ್ಕೆ ಉಂಟಾಗಿರುವ ನಷ್ಟವನ್ನು ತುಂಬುವ ಕಾರಣಕ್ಕೆ ಮನೆ ಬಾಗಿಲಿಗೆ ಮದ್ಯ ತಲುಪಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಮದ್ಯ ಮಾರಾಟ ಸ್ಥಗಿತಗೊಂಡರೆ ಬೊಕ್ಕಸಕ್ಕೆ ಭಾರಿ ನಷ್ಟ ಎಂದು ಅವರು ಹೇಳಿದ್ದಾರೆ.

ಕದ್ದುಮುಚ್ಚಿ ಅಂಗಡಿಗೆ ಹೋಗಿ ಮದ್ಯ ಖರೀದಿ ಮಾಡುತ್ತಿರುವವರಿಗೆ ಮಾತ್ರ ಸ್ವಲ್ಪ ಇರುಸುಮುರುಸಾಗಿದೆ. ಆದರೆ ಮದ್ಯ ಸಿಗುವ ಖುಷಿಯಲ್ಲಿ ಎಲ್ಲರೂ ಇದ್ದಾರೆ.

ಕರೊಆ ಸೋಂಕು ಪ್ರಕರಣಗಳು ಕಡಿಮೆ ಇರುವ ಪ್ರದೇಶಗಳಲ್ಲಿ ಮದ್ಯ ಹೋಂ ಡೆಲಿವರಿಗೆ ಸರ್ಕಾರ ಪ್ರತ್ಯೇಕ ಪೋರ್ಟಲ್ ತೆರೆದಿದೆ.