ನ್ಯೂಸ್

ಪತಿಯ ಆಸ್ತಿ ಪತ್ನಿಗೆ ವರ್ಗಾವಣೆಯಾದರೆ ಅದು ಸ್ವಯಾರ್ಜಿತವಾಗುತ್ತದೆಯೆ? ಕಾನೂನು ಏನು ಹೇಳಿದೆ ನೋಡಿ...

ನಮ್ಮ ಅಜ್ಜಿಯ ಸ್ವಯಾರ್ಜಿತ ಆಸ್ತಿ ಪವತಿ ಖಾತೆ ಮೂಲಕ ನಮ್ಮ ಅಜ್ಜನಿಗೆ ವರ್ಗಾವಣೆ ಆಗಿದೆ. ನಮ್ಮ ಅಜ್ಜ ಈ ಆಸ್ತಿಯನ್ನು ಸ್ವಯಾರ್ಜಿತ ಎಂದು ಪರಿಗಣಿಸಿ ಬೇರೆಯವರಿಗೆ ಕೊಡಬಹುದಾ?

ಉತ್ತರ: ಇಲ್ಲ ಹಾಗೆ ಕೊಡಲು ಆಗುವುದಿಲ್ಲ. ನಿಮ್ಮ ಅಜ್ಜಿಯ ಸ್ವಯಾರ್ಜಿತ ಆಸ್ತಿಯು ಅವರು ತೀರಿಕೊಂಡಾಗ, ಅವರ ಪತಿಗೆ ( ಅಂದರೆ ನಿಮ್ಮ ಅಜ್ಜನಿಗೆ) ಮತ್ತು ನಿಮ್ಮ ಅಜ್ಜಿಯ ಎಲ್ಲ ಮಕ್ಕಳಿಗೂ ಸಮಪಾಲಾಗಿ ಸೇರುತ್ತದೆ. ಖಾತೆ ಬದಲಾವಣೆ ಆಗಿದೆ ಎಂದ ಮಾತ್ರಕ್ಕೆ ನಿಮ್ಮ ಅಜ್ಜ ಒಬ್ಬರೇ ನಿಮ್ಮ ಅಜ್ಜಿಯ ಆಸ್ತಿಗೆ ಏಕೈಕ ಮಾಲೀಕರು ಆಗುವುದಿಲ್ಲ.

ಬೇಕಿದ್ದರೆ ಅವರ ಭಾಗವನ್ನು ಮಾತ್ರ ಅವರು ಯಾರಿಗೆ ಬೇಕಾದರೂ ಕೊಡಬಹುದು ಅಥವಾ ಹೇಗೆ ಬೇಕಾದರೂ ಪರಭಾರೆ ಮಾಡಬಹುದು. ಹೆಂಡತಿ ಸತ್ತಾಗ ಆಕೆಯ ಗಂಡ ಒಬ್ಬನೇ ಆಸ್ತಿಯ ಪಾಲುದಾರನಾಗುವುದಿಲ್ಲ.

ನಿಮ್ಮ ಪ್ರಶ್ನೆಗಳನ್ನು lalithavijayavani@gmail.com ಗೆ ಕಳುಹಿಸಿ