ನ್ಯೂಸ್

VIDEO: ಕೂದಲಿನಿಂದ 12 ಸಾವಿರ ಕೆ.ಜಿ ತೂಕದ ಬಸ್‌ ಎಳೆದ ಯುವತಿ! ಈಕೆಯ ಕಿವಿ, ಹಲ್ಲು, ಕಣ್ಣು ಎಲ್ಲವೂ ದಾಖಲೆಯೇ

suchetana

ಚಂಡೀಗಢ (ಪಂಜಾಬ್‌): ಕೂದಲಿನ ಸಹಾಯದಿಂದ ಬರೋಬ್ಬರಿ 12,216 ಕೆ.ಜಿ ತೂಕದ ಬಸ್ಸನ್ನು ಎಳೆದು ಗಿನ್ನೆಸ್‌ ದಾಖಲೆ ಸೃಷ್ಟಿಸಿದ್ದಾರೆ ಪಂಜಾಬ್‌ನ ಯುವತಿ.

ಇವರ ಹೆಸರು ಆಶಾ ರಾಣಿ. ಇದಾಗಲೇ ಹಲವಾರು ದಾಖಲೆಗಳನ್ನು ಸೃಷ್ಟಿಸಿರುವ ಆಶಾರಾಣಿ ಹೆಸರು ಅಷ್ಟಾಗಿ ಪ್ರಚಾರಕ್ಕೆ ಬರಲೇ ಇಲ್ಲ. 2016ರಲ್ಲಿ ಕೂಡ ಇದೇ ರೀತಿಯ ದಾಖಲೆ ಸೃಷ್ಟಿಸಿದ್ದ ಆಶಾ ಅವರು ಈಗ ತಮ್ಮದೇ ದಾಖಲೆಯನ್ನು ಮುಗಿದಿದ್ದಾರೆ.

ಅಂದಹಾಗೆ ಪಂಜಾಬ್‌ನ ಆಶಾರಾಣಿ ಅವರು 2014ರಲ್ಲಿ ಕಣ್ಣಿನ ರೆಪ್ಪೆಯಿಂದ 15.15 ಕೆಜಿ ತೂಕವನ್ನು ಎತ್ತಿದ್ದರು. ಇದರದಲ್ಲಿ ಗಿನ್ನೆಸ್‌ ರೆಕಾರ್ಡ್‌ ಮಾಡಿದ್ದರು. 2019ರಲ್ಲಿ ಕಿವಿಗಳನ್ನು ಬಳಸಿ 1,700 ಕೆಜಿ ತೂಕದ ವ್ಯಾನ್ ಎಳೆದಿದ್ದರು. ಹಲ್ಲಿಗಳ ಸಹಾಯದಿಂದ ವಾಹವನ್ನು ಕೇವಲ 22.16 ಸೆಕೆಂಡ್‌ಗಳಲ್ಲಿ 25 ಮೀಟರ್ ಎಳೆದಿದ್ದರು. ಹೀಗೆ ತಮ್ಮ ದೇಹದ ಬಹುತೇಕ ಅಂಗಗಳ ಮೂಲಕ ದಾಖಲೆ ಮಾಡಿದ್ದಾರೆ ಆಶಾ. ಇದೇ ಕಾರಣಕ್ಕೆ ಇವರು ಐರನ್ ಕ್ವೀನ್ ಎನ್ನುವ ಖ್ಯಾತಿ ಪಡೆದಿದ್ದಾರೆ.

ಇವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಶ್ಲಾಘನೆಗಳ ಸುರಿಮಳೆಯೇ ಬರುತ್ತಿದೆ. 12,216 ಕೆಜಿ ತೂಕದ ಡಬಲ್ ಡೆಕ್ಕರ್ ಬಸ್ ಅನ್ನು ತಮ್ಮ ಕೂದಲಿನಲ್ಲಿ ಎಳೆಯುತ್ತಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದು.

ವೈರಲ್‌ ಆಗಿರುವ ಈ ವಿಡಿಯೋದಲ್ಲಿ ಆಶಾ ರಾಣಿ ಅವರ ಜಡೆಗೆ ಹಗ್ಗ ಬಿಗಿದಿರುವುದನ್ನು ನೋಡಬಹುದು. ಅವರು ಅದರ ಸಹಾಯದಿಂದ ಕೆಂಪು ಮತ್ತು ಬೂದು ಬಣ್ಣದ ಡಬಲ್ ಡೆಕ್ಕರ್ ಬಸ್‍ನ್ನು ಎಳೆಯುತ್ತಿದ್ದಾರೆ. ಹಿಮ್ಮುಖವಾಗಿ ನಿಂತು ಹಿಂದೆ ಹೆಜ್ಜೆ ಹಾಕುತ್ತಿದ್ದಂತೆ, ಬಸ್ ನಿಧಾನವಾಗಿ ಮುಂದಕ್ಕೆ ಚಲಿಸುತ್ತದೆ, ನಂತರ ಅವರ ಪ್ರದರ್ಶನ ಗಿನ್ನೆಸ್‌ ರೆಕಾರ್ಡ್‍ನಲ್ಲಿ ದಾಖಲಾಗಿರುವುದನ್ನು ಕಾಣಬಹುದಾಗಿದೆ.