ನ್ಯೂಸ್

VIDEO: ಟಿ.ವಿ ನೇರಪ್ರಸಾರದ ಮೂಲಕ ಕರೊನಾ ಲಸಿಕೆ ಪಡೆದ ಅಮೆರಿಕ ಉಪಾಧ್ಯಕ್ಷೆ

suchetana

ವಾಷಿಂಗ್ಟನ್: ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಕೋವಿಡ್​ ಲಸಿಕೆ ಹಾಕಿಸಿಕೊಂಡಿದ್ದಾರೆ.

ಇದರ ನೇರಪ್ರಸಾರವನ್ನು ಟಿ.ವಿಯಲ್ಲಿ ಮಾಡಲಾಗಿತ್ತು. ಇದಕ್ಕೆ ಕಾರಣ, ಆಫ್ರಿಕನ್–ಅಮೆರಿಕನ್ ಮೂಲದ ಪ್ರಜೆಗಳಿಗೆ ಈ ಲಸಿಕೆ ಮೇಲೆ ವಿಶ್ವಾಸ ಬರಲಿ ಎನ್ನುವ ಕಾರಣಕ್ಕೆ. ಅಮೆರಿಕದ ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿರುವ ಭಾರತ ಮೂಲದ ಅಮೆರಿಕ ನಿವಾಸಿ ಕಮಲಾ ಹ್ಯಾರಿಸ್ ಜನವರಿ 20 ರಂದು ಅಧಿಕಾರ ಸ್ವೀಕರಿಸಲಿದ್ದು, ಅಮೆರಿಕದ ಮೊದಲ ಇಂಡೋ-ಅಮೆರಿಕನ್ ಉಪಾಧ್ಯಕ್ಷೆ ಹಾಗೂ ಮೊದಲ ಮಹಿಳಾ ಉಪಾಧ್ಯಕ್ಷೆ ಎಂಬ ಹೆಗ್ಗಳಿಕೆ ಗಳಿಸಿದ್ದಾರೆ.

ನಾನು ಲಸಿಕೆ ತೆಗೆದುಕೊಳ್ಳುವ ಮೂಲಕ ನಿಮ್ಮಲ್ಲಿ ಲಸಿಕೆ ಕುರಿತಾಗಿ ಇರುವ ಕೆಲವೊಂದು ಸಂದೇಹಗಳನ್ನು ನಿವಾರಿಸಲು ಬಯಸುತ್ತೇನೆ. ಸಮುದಾಯದಲ್ಲಿಯೇ ನೀವು ಲಸಿಕೆ ತೆಗೆದುಕೊಳ್ಳಬಹುದು. ಅಲ್ಲಿ ನಿಮಗೆ ತಿಳಿದಿರುವ ಜನರಿಂದಲೇ ನೀವು ಲಸಿಕೆಯನ್ನು ಪಡೆಯಬಹುದು ಎಂದು ಆಫ್ರಿಕನ್-ಅಮೆರಿಕನ್ ಪ್ರಜೆಗಳಿಗೆ ಕಮಲಾ ಹೇಳಿದ್ದಾರೆ.

ದೇಶಾದ್ಯಂತ ಆಫ್ರಿಕನ್-ಅಮೆರಿಕನ್ ಸಮುದಾಯವು ಕರೊನಾ ಸೋಂಕಿನಿಂದ ಹೆಚ್ಚಿನ ಪ್ರಮಾಣದಲ್ಲಿ ಮೃತಪಟ್ಟಿದ್ದು, ಈ ಸಮುದಾಯದವರಲ್ಲಿಯೇ ಸೊಂಕಿನ ಪ್ರಮಾಣವೂ ಹೆಚ್ಚಾಗಿದೆ. ಅದರಲ್ಲಿಯೂ ವಾಷಿಂಗ್ಟನ್ ಡಿಸಿಯ ಆಫ್ರಿಕನ್-ಅಮೆರಿಕನ್ ಜನಸಂಖ್ಯೆ ಹೆಚ್ಚಾಗಿದೆ. ಆದ್ದರಿಂದ ಮಾಸ್ಕ್ ತೊಟ್ಟಿದ್ದ ಕಮಲಾ ತಮ್ಮ ಮೊದಲ ಡೋಸ್ ಲಸಿಕೆ ಸ್ವೀಕರಿಸಿ ಅಲ್ಲಿಯವರೆಗೆ ಲಸಿಕೆ ಕುರಿತು ಭರವಸೆ ಮೂಡಿಸಿದರು.

ಈ ವಿಡಿಯೋ ಲಿಂಕ್​ ಮೂಲಕ ಕಮಲಾ ಹ್ಯಾರೀಸ್​ ಲಸಿಕೆ ಹಾಕಿಸಿಕೊಂಡಿದ್ದನ್ನು ವೀಕ್ಷಿಸಬಹುದು: