More

    VIDEO: ಮೈದಾನದೊಳಗೆ ನುಗ್ಗಿ ಪಂದ್ಯ ನಿಲ್ಲಿಸಿದ್ದ ನಾಯಿಯನ್ನೇ ದತ್ತು ಪಡೆದ ಫುಟ್ಬಾಲ್​ ಆಟಗಾರ

    ಬೊಲಿವಿಯಾ (ದಕ್ಷಿಣ ಅಮೆರಿಕ): ದಕ್ಷಿಣ ಅಮೆರಿಕದ ಬೊಲಿವಿಯಾದಲ್ಲಿ ಫುಟ್​ಬಾಲ್​ ಪಂದ್ಯ ನಡೆಯುತ್ತಿದೆ. ನಿನ್ನೆ ಈ ಪಂದ್ಯ ಬಲು ಜೋಷ್​ನಿಂದ ಸಾಕಿತ್ತು. ‘ದಿ ಸ್ಟ್ರಾಂಗೆಸ್ಟ್’ ಹಾಗೂ ‘ನೇಷನಲ್ ಪೊಟೋಸಿ’ ಕ್ಲಬ್‌ ತಂಡಗಳ ನಡುವಿನ ಪಂದ್ಯ ಇದಾಗಿತ್ತು.

    ಭಾರಿ ಉತ್ಸಾಹದಲ್ಲಿ ಆಟಗಾರರು ಆಡುತ್ತಿದ್ದ ವೇಳೆಯೇ ಮುದ್ದಾದ ನಾಯಿಯೊಂದ ಮೈದಾನದೊಳಕ್ಕೆ ನುಗ್ಗಿಬಿಟ್ಟಿತು. ಅದು ಎಲ್ಲಿಂದ ತಪ್ಪಿಸಿಕೊಂಡು ಬಂದಿತ್ತೋ ಗೊತ್ತಿಲ್ಲ. ಮೈದಾನದೊಳಕ್ಕೆ ನುಗ್ಗಿ ಎಲ್ಲೆಂದರಲ್ಲಿ ಓಡಾಡಲು ಶುರು ಮಾಡಿತು.

    ಈ ನಾಯಿಯ ಕಾರಣದಿಂದ ಪಂದ್ಯವನ್ನು ಅರ್ಧಕ್ಕೇ ನಿಲ್ಲಿಸಬೇಕಾಗಿ ಬಂತು. ಕ್ರೀಡಾ ಅಭಿಮಾನಿಗಳು ನಾಯಿಯನ್ನು ಶಪಿಸತೊಡಗಿದರು. ಕೆಲವರು ಮುದ್ದುಮುದ್ದಾದ ನಾಯಿಯನ್ನು ನೋಡಿ ಸೋ ಸ್ವೀಟ್​ ಎಂದರು.

    ಅಚ್ಚರಿ ಎಂದರೆ ತನ್ನ ಬಾಯಿಯಲ್ಲಿ ಫುಟ್​ಬಾಲ್​ ಬೂಟ್‌ ಒಂದನ್ನು ಕಚ್ಚಿಕೊಂಡು ಬಂದಿತ್ತು ನಾಯಿ. ಹರಸಾಹಸಪಟ್ಟರೂ, ಜಪ್ಪಯ್ಯ ಎಂದರೂ ನಾಯಿ ಅಲ್ಲಿಂದ ಹೋಗಲಿಲ್ಲ. ಕೊನೆಗೆ ಆಟಗಾರರೊಬ್ಬರು ಆ ನಾಯಿಯನ್ನು ಎತ್ತಿಕೊಂಡು ಮೈದಾನದಿಂದ ಹೊರಗೆ ಕರೆದೊಯ್ಯಬೇಕಾಯಿತು.

    ಈ ನಾಯಿಯನ್ನು ನೋಡಿ ದಿ ಸ್ಟ್ರಾಂಗರ್‌ ತಂಡದ ಆಟಗಾರ ರೌಲ್ ಕ್ಯಾಸ್ಟ್ರೋ ಅವರಿಗೆ ತುಂಬಾ ಇಷ್ಟವಾಗಿಬಿಟ್ಟಿದೆ. ಫುಟ್​ಬಾಲ್​ ಬೂಟ್​ ಹಿಡಿದುಕೊಂಡು ಬಂದ ಈ ನಾಯಿ ಖಂಡಿತವಾಗಿಯೂ ಫುಟ್​ಬಾಲ್​ ಪ್ರಿಯನೇ ಇರಬೇಕು ಎಂದು ಅವರು ತಮಾಷೆ ಮಾಡಿದ್ದಾರೆ. ಮಾತ್ರವಲ್ಲದೇ ಎಷ್ಟು ಬೆದರಿಸಿದರೂ ನಾಯಿ ಫುಟ್​ಬಾಲ್​ ಮೈದಾನ ಬಿಟ್ಟುಹೋಗದ್ದು ಕೂಡ ರೌಲ್​ ಅವರನ್ನು ಆಕರ್ಷಿಸಿದೆ. ಇದೇ ಕಾರಣಕ್ಕೆ ಅವರು ಆ ನಾಯಿಯನ್ನು ದತ್ತು ಪಡೆದಿದ್ದಾರೆ.

    ಈ ಕುರಿತು ಪಂದ್ಯದ ಬಳಿಕ ಘೋಷಿಸಿದ ಅವರು ನಿಯಮಾನುಸಾರ ಅದನ್ನು ದತ್ತು ಪಡೆದರು ಕೂಡ. ಪಂದ್ಯ ಮುಗಿಯುವವರೆಗೂ ಆ ನಾಯಿಯನ್ನು ಅಲ್ಲಿಯೇ ಇರಿಸಿಕೊಳ್ಳಲಾಗಿತ್ತು.

    ಸ್ನೇಹಿತೆಯ ದೈಹಿಕ ಸಂಪರ್ಕ ಮಾಡಿದಾಗ ಕೆಲವು ಅನುಮಾನ ಶುರುವಾಗಿದೆ; ಹೇಗೆ ಬಗೆಹರಿಸಿಕೊಳ್ಳಲಿ?

    ಮತ ಎಣಿಸುತ್ತಲೇ ಕುಸಿದುಬಿದ್ದು ಮೈಸೂರಿನ ಚುನಾವಣಾಧಿಕಾರಿ ಸಾವು

    ಹೆಚ್ಚುತ್ತಲೇ ಸಾಗಿದೆ ಬ್ರಿಟನ್​ ವೈರಾಣು: ಮತ್ತಷ್ಟು ಜನರಲ್ಲಿ ಹೊಸ ಕೋವಿಡ್​ ಪಾಸಿಟಿವ್​- ಬೆಂಗಳೂರಲ್ಲಿ ಅಧಿಕ

    ಸದಾ ಯೌವನ ಬಯಸಿರುವಿರಾ? ಹಾಗಿದ್ದರೆ ಮೈಮೇಲೆ ಹೆಬ್ಬಾವು ಬಿಟ್ಕೊಳಿ- ಈ ವಿಡಿಯೋ ನೋಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts