ನ್ಯೂಸ್

ಕ್ರೀಡಾಪಟುಗಳೆ? ಸೆಂಟ್ರಲ್ ರೈಲ್ವೆಯಲ್ಲಿವೆ 21 ಹುದ್ದೆಗಳು- ಮೀಸಲಾತಿ ಇಲ್ಲದೇ ಅರ್ಹರಿಗೆ ನೇಮಕಾತಿ

ಸೆಂಟ್ರಲ್ ರೈಲ್ವೆ ವಲಯದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಕ್ರೀಡಾಪಟುಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿ ಅಧಿಸೂಚನೆ ಹೊರಡಿಸಲಾಗಿದೆ. 2021-22ನೇ ಸಾಲಿನ ನೇಮಕಾತಿ ಇದಾಗಿದ್ದು, ಹುದ್ದೆಗಳಲ್ಲಿ ಜಾತಿ ಆಧಾರಿತ ಮೀಸಲಾತಿ ಇರುವುದಿಲ್ಲ ಎಂದು ತಿಳಿಸಲಾಗಿದೆ.

ಒಟ್ಟು ಹುದ್ದೆಗಳು: 21

ಯಾವ ಕ್ರೀಡಾಪಟುಗಳಿಗೆ ಅವಕಾಶ

- ವೇತನ ಶ್ರೇಣಿ 4/5 ಅಡಿ ನೇಮಕ ಮಾಡಿಕೊಳ್ಳಲಾಗುವ ಹುದ್ದೆಗಳು - 3

* ಬಾಸ್ಕೆಟ್​ಬಾಲ್ (ಮಹಿಳಾ)- 1

* ಬಾಕ್ಸಿಂಗ್ (ಪುರುಷ) - 1

* ಹಾಕಿ (ಪುರುಷ) - 1

- ವೇತನ ಶ್ರೇಣಿ 2/3ರ ಅಡಿಯಲ್ಲಿನ ಹುದ್ದೆಗಳು - 18

* ವಾಟರ್ ಪೊಲೊ (ಪುರುಷ) - 1

* ಅಥ್ಲೆಟಿಕ್ಸ್ (ಮಹಿಳಾ) - 1

* ಬಾಡ್ಮಿಂಟನ್ (ಪುರುಷ) - 1

* ಬಾಸ್ಕೆಟ್​ಬಾಲ್ -1

* ಬಾಕ್ಸಿಂಗ್ - 1

* ಕ್ರಿಕೆಟ್ - 3

* ಕ್ರಿಕೆಟ್ (ಮಹಿಳಾ) - 2

* ಹಾಕಿ - 1

* ಕಬಡ್ಡಿ - 1

* ಕಬಡ್ಡಿ (ಮಹಿಳಾ) - 2

* ವಾಲಿಬಾಲ್ (ಮಹಿಳಾ) - 1

* ವೈಟ್ ಲಿಫ್ಟಿಂಗ್ (ಮಹಿಳಾ) - 1

* ವ್ರಿಸ್ಲಿಂಗ್ (ಜಿಆರ್-1, ಎಫ್​ಎಸ್-1) - 2

ಶೈಕ್ಷಣಿಕ ಅರ್ಹತೆ: ವೇತನ ಶ್ರೇಣಿ 2-3ರ ಹುದ್ದೆಗೆ ದ್ವಿತೀಯ ಪಿಯುಸಿ ಅಥವಾ ತತ್ಸಮಾನ ಶಿಕ್ಷಣ, ವೇತನ ಶ್ರೇಣಿ 4-5ರ ಹುದ್ದೆಗೆ ಯಾವುದೇ ಪದವಿ ಪಡೆದಿರಬೇಕು. ಜತೆ ಕ್ರೀಡಾ ಸಾಧನೆಗಳು ಅವಶ್ಯ.

ವಯೋಮಿತಿ: 1.1.2022ಕ್ಕೆ ಅನ್ವಯವಾಗುವಂತೆ ಕನಿಷ್ಠ 18 ವರ್ಷ, ಗರಿಷ್ಠ 25 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.

ಅರ್ಜಿ ಶುಲ್ಕ: ಎಸ್​ಸಿ, ಎಸ್​ಟಿ, ಮಾಜಿ ಸೈನಿಕ, ಅಂಗವಿಕಲ, ಮಹಿಳಾ, ಆರ್ಥಿಕವಾಗಿ ದುರ್ಬಲವಾಗಿರುವ ಅಭ್ಯರ್ಥಿಗಳಿಗೆ 250 ರೂ. ನಿಗದಿಪಡಿಸಿದ್ದು, ಇತರ ಅಭ್ಯರ್ಥಿಗಳಿಗೆ 500 ರೂ. ಅರ್ಜಿಶುಲ್ಕ ನಿಗದಿಪಡಿಸಲಾಗಿದೆ.

ಯಾವ ಸಾಧನೆ ಪರಿಗಣನೆ?

ಒಲಿಂಪಿಕ್ ಗೇಮ್ ವಿಶ್ವ ಕಪ್, ವಿಶ್ವ ಚಾಂಪಿಯನ್​ಷಿಪ್, ಏಷಿಯನ್ ಗೇಮ್್ಸ, ಕಾಮನ್​ವೆಲ್ತ್ ಗೇಮ್್ಸ, ಯೂಥ್ ಒಲಿಂಪಿಕ್ಸ್, ಡೇವಿಸ್ ಕಪ್, ಚಾಂಪಿಯನ್ಸ್ ಟ್ರೋಫಿ, ಥಾಮಸ್/ಊಬರ್ ಕಪ್, ಕಾಮನ್​ವೆಲ್ತ್ ಚಾಂಪಿಯನ್​ಷಿಪ್, ಏಷಿಯನ್ ಚಾಂಪಿಯನ್​ಷಿಪ್/ ಏಷಿಯಾ ಕಪ್, ಸೌತ್ ಏಷಿಯಾ ಫೆಡರೇಷನ್ ಗೇಮ್್ಸ, ಯುಎಸ್​ಐಸಿ (ವರ್ಲ್ಡ್ ರೈಲ್ವೆ) ಚಾಂಪಿಯನ್​ಷಿಪ್, ವರ್ಲ್ಡ್ ಯನಿವರ್ಸಿಟಿ ಗೇಮ್ಸ್​ಗಳಲ್ಲಿ ದೇಶವನ್ನು ಪ್ರತಿನಿಧಿಸಿರಬೇಕು. ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಕ್ರೀಡೆಗಳಲ್ಲಿ ಸಾಧನೆ ಮಾಡಿರಬೇಕು.

ಅರ್ಜಿ ಸಲ್ಲಿಸಲು ಕೊನೇ ದಿನ: 27.12.2021

ಅಧಿಸೂಚನೆಗೆ: https://bit.ly/31UKf7a

ಮಾಹಿತಿಗೆ: http://www.rrccr.com