ರೈಲ್ವೆ ಸಚಿವಾಲಯದ ಅಧೀನದಲ್ಲಿರುವ ಸ್ವಾಯತ್ತ ಸಂಸ್ಥೆಯಾಗಿರುವ ರೈಲ್ವೆ ಮಾಹಿತಿ ವ್ಯವಸ್ಥೆ ಕೇಂದ್ರದಿಂದ ಸಹಾಯಕ ಸಾಫ್ಟ್‌ವೇರ್ ಇಂಜಿನಿಯರ್ ಮತ್ತು ಸಹಾಯಕ ಡೇಟಾ ವಿಶ್ಲೇಷಕರನ್ನು ಐದು ವರ್ಷದ ಅವಧಿಗೆ ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತರು ಸಂಸ್ಥೆಯ ಅಧಿಕೃತ ವೆಬ್ಸೈಟ್ನಲ್ಲಿ ಅರ್ಜಿ ಸಲ್ಲಿಸಬಹುದು. ಐಐಟಿ 2022ರಲ್ಲಿ ನಡೆಸಿದ ಆಪ್ಟಿಟ್ಯೂಟ್ ಪರೀೆಯಲ್ಲಿ ಉತ್ತೀರ್ಣರಾದವರಿಗೆ ಆದ್ಯತೆ ನೀಡಲಾಗಿದೆ. ಅಗತ್ಯಕ್ಕೆ ಅನುಗುಣವಾಗಿ ಹುದ್ದೆಗಳ ಸಂಖ್ಯೆ ಹೆಚ್ಚಾಗಲೂಬಹುದು. ಕಡಿಮೆಯೂ ಆಗಬಹುದು.
ಒಟ್ಟು ಹುದ್ದೆಗಳು-150
ಹುದ್ದೆಗಳ ವಿವರ
ಅಸಿಸ್ಟೆಂಟ್ ಸಾಫ್ಟ್‌ವೇರ್‌ಇಂಜಿನಿಯರ್-144
ಸಾಮಾನ್ಯ-58, ಆಥಿರ್ಕವಾಗಿ ಹಿಂದುಳಿದ ಅಭ್ಯಥಿರ್-14, ಇತರ-39, ಎಸ್ಸಿ-22, ಎಸ್ಟಿ-11 ಹುದ್ದೆಗಳನ್ನು ಮೀಸಲಿರಿಸಲಾಗಿದೆ. 22ರಿಂದ 27 ವರ್ಷ ವಯೋಮಿತಿ ನಿಗದಿಪಡಿಸಲಾಗಿದ್ದು, ಮೀಸಲಾತಿ ಅಭ್ಯರ್ಥಿಗಲಿಗೆ 3 ವರ್ಷ ವಯೋಸಡಿಲಿಕೆ ಇದೆ. 7ನೇ ವೇತನ ಶ್ರೇಣಿ ಅನ್ವಯ 7ನೇ ಹಂತದ ವೇತನ ಅಂದರೆ 60,000 ಮಾಸಿಕ ವೇತನ ಇರಲಿದ್ದು, ಇದರೊಂದಿಗೆ ಇತರ ಭತ್ಯೆ ಸಹ ಇರಲಿದೆ.
ಅಸಿಸ್ಟೆಂಟ್ ಡೇಟಾ ಅನಲಿಸ್ಟ್-6
ಸಾಮಾನ್ಯ-3, ಇತರ-2 ಮತ್ತು ಎಸ್ಸಿ ಅಭ್ಯರ್ಥಿಗಳಿಗೆ ಒಂದು ಹುದ್ದೆ ಮೀಸಲಿರಿಸಲಾಗಿದೆ. 22ರಿಂದ 27 ವರ್ಷ ವಯೋಮಿತಿ ನಿಗದಿಪಡಿಸಲಾಗಿದ್ದು, ಇತರ, ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ 3 ವರ್ಷ ವಯೋಸಡಿಲಿಕೆ ಇದೆ. 7ನೇ ವೇತನ ಶ್ರೇಣಿ ಅನ್ವಯ 60,000 ಮಾಸಿಕ ವೇತನದೊಂದಿಗೆ ಡಿಎ ಹಾಗೂ ಇತರ ಸೌಲಭ್ಯ ಇರಲಿದೆ.
ಶೈಕ್ಷಣಿಕ ಅರ್ಹತೆ:
ಹುದ್ದೆಗಳಿಗೆ ಅನುಗುಣವಾಗಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್ ಸೈನ್ಸ್, ಇನ್ಮೇರ್ಷನ್ ಟೆಕ್ನಾಲಜಿ, ಕಂಪ್ಯೂಟರ್ ಅಪ್ಲಿಕೇಷನ್ಸ್ನಲ್ಲಿ ಬಿಇ/ಬಿಟೆಕ್/ಎಂಇ/ಎಂಟೆಕ್ ಪದವಿ, ಎಂಸಿಎ/ಬಿಎಸ್ಸಿ/ಎಂಎಸ್ಸಿ/ಎಂಸಿಎ ಅಥವಾ ತತ್ಸಮಾನ ಪದವಿ ಪಡೆದಿರಬೇಕು. ಶೇಕಡಾ 60 ಅಂಕದೊಂದಿಗೆ, ಮೀಸಲಾತಿ ಅಭ್ಯರ್ಥಿಗಳು ಶೇ.55 ಅಂಕದೊಂದಿಗೆ ತೇರ್ಗಡೆಯಾಗಿರಬೇಕು.
ನಿಗದಿತ ಶೈಕ್ಷಣಿಕ ಅರ್ಹತೆ ಜೊತೆಗೆ 2022ರ ಗೇಟ್ ಪರೀಕ್ಷೆಯಲ್ಲಿ (ಕಂಪ್ಯೂಟರ್ ಸೈನ್ಸ್/ಸ್ಟಾ$ಟಿಸ್ಟಿಕ್ಸ್ ವಿಷಯ) ಉತ್ತೀರ್ಣರಾಗಿರಬೇಕು. ಕಟ್ ಆ್ ಮಾರ್ಕ್ಸ್ಗಿಂತ ಕಡಿಮೆ ಇರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಲ್ಲ. ಪದವಿಯ ಅಂತಿಮ ವರ್ಷದಲ್ಲಿ ಅಧ್ಯಯನ ಮಾಡುತ್ತಿರುವ ಅಭ್ಯರ್ಥಿಗಳು ಸಹ ಅರ್ಜಿ ಸಲ್ಲಿಸಬಹುದು.
ಅರ್ಜಿ ಶುಲ್ಕ:
ಸಾಮಾನ್ಯ ಅಭ್ಯರ್ಥಿಗಳಿಗೆ 1000 ರೂ. ಅರ್ಜಿ ಶುಲ್ಕ (ಜಿಎಸ್ಟಿ ಹೊರತುಪಡಿಸಿ) ಇದ್ದು, ಮೀಸಲಾತಿ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕ ಇರುವುದಿಲ್ಲ.
ಅರ್ಜಿ ಸಲ್ಲಿಸುವ ವಿಧಾನ:
ಸಂಸ್ಥೆಯ ಅಧಿಕೃತ ವೆಬ್ಸೈಟ್ನಲ್ಲಿ ಆನ್ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ. ಸೂಕ್ತ ದಾಖಲೆ ಇಲ್ಲದ ಮತ್ತು ಅಪೂರ್ಣ ಅರ್ಜಿಗಳನ್ನು ತಿರಸ್ಕರಿಸಲಾಗುವುದು. ಒಬ್ಬ ಅಭ್ಯರ್ಥಿ ಒಂದು ಅರ್ಜಿ ಸಲ್ಲಿಸಲು ಮಾತ್ರ ಅವಕಾಶ. ಇ-ಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆ ಕಡ್ಡಾಯವಾಗಿ ನಮೂದಿಸತಕ್ಕದ್ದು.
ಆಯ್ಕೆ ಪ್ರಕ್ರಿಯೆ:
ಗೇಟ್ ಸ್ಕೋರ್ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಆಯ್ಕೆಯಾಗುವವರು ಭಾರತದ ಯಾವ ಪ್ರದೇಶದಲ್ಲೂ ಕೆಲಸ ಮಾಡಲು ಸಿದ್ಧರಿರಬೇಕು. ಭಾರತೀಯ ನಾಗರಿಕರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು.
ಅರ್ಜಿ ಸಲ್ಲಿಸಲು ಕೊನೇ ದಿನ: 25.5.2022
ಅಧಿಸೂಚನೆಗೆ: https://bit.ly/3vxR1MH
ಮಾಹಿತಿಗೆ: http://www.cris.org.in