ನ್ಯೂಸ್

ವಿವಿಧ ಪದವಿ, ವಿಧವಿಧ ಉದ್ಯೋಗ: ನೀತಿ ಆಯೋಗದಿಂದ ಅರ್ಜಿ ಆಹ್ವಾನ- 1.45 ಲಕ್ಷ ರೂ.ವರೆಗೆ ಸಂಬಳ

ದೇಶದ ಅಭಿವೃದ್ಧಿಯ ದಿಶಾನಿದೇರ್ಶನಗಳನ್ನು ರೂಪಿಸುವ ಸಂವಿಧಾನಬದ್ಧ ಸಂಸ್ಥೆ ನ್ಯಾಷನಲ್​ ಇನ್​ಸ್ಟಿಟ್ಯೂಟ್​ ಆ್​ ಟ್ರಾನ್ಸ್​ಫಾರ್ಮಿಂಗ್​ ಇಂಡಿಯಾ ಆಯೋಗ್​ (ನೀತಿ ಆಯೋಗ) ನಲ್ಲಿ ಯಂಗ್​ ಪ್ರೊಫೆಷನಲ್ಸ್​ ಹಾಗೂ ಕನ್ಸಲ್ಟೆಂಟ್​ ಹುದ್ದೆಗೆ ನೇಮಕ ಮಾಡಿಕೊಳ್ಳುತ್ತಿರುವುದಾಗಿ ಅಧಿಸೂಚನೆ ಹೊರಡಿಸಲಾಗಿದೆ. ಗುತ್ತಿಗೆ ಆಧಾರದಲ್ಲಿ ಗರಿಷ್ಠ 5 ವರ್ಷ, ಕನಿಷ್ಠ 2 ವರ್ಷದ ಅವಧಿಗೆ ಈ ನೇಮಕಾತಿ ನಡೆಯುತ್ತಿದೆ.

ಹುದ್ದೆಗಳ ವಿವರ
* ಯಂಗ್​ ಪ್ರೊಫೆಷನಲ್​- 22
ವಿಜ್ಞಾನ/ ಅರ್ಥಶಾಸ್ತ್ರ/ ಸ್ಟ್ಯಾಟಿಸ್ಟಿಕ್ಸ್​/ ಆಪರೇಷನ್​ ರಿಸರ್ಚ್​/ ಪಬ್ಲಿಕ್​ ಪಾಲಿಸಿ/ ಡೆವಲಪ್​ಮೆಂಟ್​ ಸ್ಟಡಿಸ್​/ ಬಿಜಿನೆಸ್​ ಅಡ್ಮಿನಿಸ್ಟ್ರೆಷನ್​/ ಮ್ಯಾನೇಜ್​ಮೆಂಟ್​ನಲ್ಲಿ ಪದವಿ ಅಥವಾ ಬಿಇ/ ಬಿಟೆಕ್​/ ಎಂಬಿಬಿಎಸ್​/ ಸಿಎ/ ಐಸಿಡಬ್ಲುಎ ಅಥವಾ ದ್ವಿತೀಯ ಪಿಯುಸಿ ನಂತರ ಅಧ್ಯಯನ ಮಾಡಿದ ಯಾವುದೇ ಪ್ರೊಫೆಷನ್​ ಕೋರ್ಸ್​ ಮಾಡಿರುವ ಅಭ್ಯರ್ಥಿಗಳು ಅರ್ಹರಾಗಿದ್ದು, ಎಂಫಿಲ್​/ ಎಂಟೆಕ್​/ ಎಂಎಸ್​/ ಎಲ್​ಎಲ್​ಎಂ/ ಪಿಎಚ್​ಡಿ/ ಸಂಶೋಧನಾ ಅಭ್ಯರ್ಥಿಗಳೂ ಅರ್ಜಿ ಸಲ್ಲಿಸಬಹುದು. ಗರಿಷ್ಠ 32 ವರ್ಷ ವಯೋಮಿತಿ ನಿಗದಿಪಡಿಸಲಾಗಿದ್ದು, ಮಾಸಿಕ ಎಲ್ಲ ಭತ್ಯೆ ಸೇರಿ 70,000 ರೂ. ವೇತನ ನಿಗದಿಪಡಿಸಲಾಗಿದೆ.

ಒಂದು ವರ್ಷದ ವೃತ್ತಿ ಅನುಭವ ಇರುವವರಿಗೆ ಆದ್ಯತೆ ಎಂದು ತಿಳಿಸಲಾಗಿದೆ. ಡಿಎಂಇಒ ಕೈಗೊಂಡಿರುವ ಕೇಂದ್ರ ಸರ್ಕಾರದ ಸಚಿವಾಲಯ/ ಇಲಾಖೆಗಳ ವಿವಿಧ ವಲಯಗಳ ಯೋಜನೆಗಳ ಮಾನಿಟರಿಂಗ್​, ಮೌಲ್ಯಮಾಪನಗಳನ್ನು ನೋಡಿಕೊಳ್ಳುವ ಜತೆ ಇತರ ಜವಾಬ್ದಾರಿ ನೀಡಲಾಗುವುದು.

* ಕನ್ಸ್​ಲ್ಟೆಂಟ್​ ಗ್ರೇಡ್​ 1 - 6
ಮಾನ್ಯತೆ ಪಡೆದ ಶೈಕ್ಷಣಿಕ ಸಂಸ್ಥೆಗಳಿಂದ ವಿಜ್ಞಾನ/ ಅರ್ಥಶಾಸ್ತ್ರ/ ಸ್ಟಾ$ಟಿಸ್ಟಿಕ್ಸ್​/ ಆಪರೇಷನ್​ ರಿಸರ್ಚ್​/ ಪಬ್ಲಿಕ್​ ಪಾಲಿಸಿ/ ಡೆವಲಪ್​ಮೆಂಟ್​ ಸ್ಟಡಿಸ್​/ ಬಿಜಿನೆಸ್​ ಅಡ್ಮಿನಿಸ್ಟ್ರೆಷನ್​/ ಮ್ಯಾನೇಜ್​ಮೆಂಟ್​ನಲ್ಲಿ ಸ್ನಾತಕೋತ್ತರ ಪದವಿ ಅಥವಾ ಬಿಇ/ ಬಿಟೆಕ್​/ ಎಂಬಿಬಿಎಸ್​/ ಎಲ್​ಎಲ್​ಬಿ/ ಸಿಎ/ ಐಸಿಡಬ್ಲುಎ ಅಥವಾ ದ್ವೀತಿಯ ಪಿಯುಸಿ ನಂತರ ಅಧ್ಯಯನ ಮಾಡಿದ ಯಾವುದೇ ಪ್ರೊಫೆಷನ್​ ಕೋರ್ಸ್​ ಮಾಡಿರುವ ಅಭ್ಯರ್ಥಿಗಳು ಅರ್ಹರಾಗಿದ್ದು, ಪಿಎಚ್​ಡಿ ಮಾಡಿರುವ ಅಭ್ಯರ್ಥಿಗಳಿಗೆ ಆದ್ಯತೆ ಇರುತ್ತದೆ. 3-8 ವರ್ಷದ ವೃತ್ತಿ ಅನುಭವ ಕೇಳಲಾಗಿದೆ. ಗರಿಷ್ಠ 45 ವರ್ಷ ವಯೋಮಿತಿ ಇದ್ದು, ಎಲ್ಲ ಭತ್ಯೆ ಸೇರಿ ಮಾಸಿ 80,000 - 1,45,000 ರೂ. ವೇತನ ಇರಲಿದೆ.

ಅರ್ಜಿ ಸಲ್ಲಿಕೆ: ಆನ್​ಲೈನ್​ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ಅಭ್ಯರ್ಥಿಗಳು ನೀತಿ ಆಯೋಗದ ವೆಬ್​ಸೈಟ್​ http://niti.gov.inವೆಬ್​ಸೈಟ್​ನಲ್ಲಿ ಕರಿಯರ್​ ವಿಭಾಗವನ್ನು ಕ್ಲಿಕ್​ ಮಾಡಿದಾಗ ನೇಮಕಾತಿ ಪುಟ ತೆರೆದುಕೊಳ್ಳುತ್ತದೆ. ಅರ್ಜಿ ಸಲ್ಲಿಸುವ ಮುನ್ನ ಸೂಚನೆಗಳನ್ನು ಓದಿಕೊಂಡು ಅರ್ಜಿ ಸಲ್ಲಿಸಬೇಕು.

ಅರ್ಜಿ ಸಲ್ಲಿಸಲು ಕಡೇ ದಿನ: 12.10.2022
ಅರ್ಜಿ ಸಲ್ಲಿಕೆ ಹಾಗೂ ಅಧಿಸೂಚನೆಗೆ: http://niti.gov.in/node/3430
ಮಾಹಿತಿಗೆ: http://www.niti.gov.in