ಯೂಕ್ರೇನ್: ರಷ್ಯಾ-ಉಕ್ರೇನ್ ನಡುವೆ ಯುದ್ಧ ಘೋಷಣೆಯಾಗುವ ಸೂಚನೆ ಇದ್ದಂತೆಯೇ ಅಲ್ಲಿ ವಾಸಿಸಿರುವ ಭಾರತೀಯರನ್ನು ಕರೆತರುವ ಪ್ರಕ್ರಿಯೆ ಶುರುವಾಗಿದೆ. ಭಾರತೀಯರು ದೇಶ ತೊರೆಯುವಂತೆ ಭಾರತ ಸರ್ಕಾರ ಮನವಿ ಮಾಡಿ, ವಿಶೇಷ ವಿಮಾನ ವ್ಯವಸ್ಥೆ ಮಾಡಿತ್ತು. ಅದರಂತೆ ಮೊದಲ ವಿಮಾನ 2 ದಿನಗಳ ಹಿಂದೆಯೇ 241 ಜನರನ್ನು ದೇಶಕ್ಕೆ ತಂದಿಳಿಸಿತ್ತು.
ಆದರೆ ದುರದೃಷ್ಟ ಎಂದರೆ ರಷ್ಯಾದ ಕೀವ್ನಲ್ಲಿ ಕೂಡ ಹಲವಾರು ಭಾರತೀಯರು ನೆಲೆಸಿದ್ದಾರೆ. ಆದರೆ ಇದಾಗಲೇ ಈ ವಿಮಾನ ನಿಲ್ದಾಣವನ್ನು ಸೇನೆಯು ವಶಕ್ಕೆ ಪಡೆದುಕೊಂಡಿದೆ. ಅಪಾಯಕಾರಿ ಸನ್ನಿವೇಶವಿರುವ ಹಿನ್ನೆಲೆಯಲ್ಲಿ ತನ್ನ ವಾಯುಪ್ರದೇಶದಲ್ಲಿ ನಾಗರಿಕ ವಿಮಾನ ಹಾರಾಟವನ್ನು ಉಕ್ರೇನ್ ನಿರ್ಬಂಧಿಸಿದೆ. ಇದರಿಂದಾಗಿ ಇಲ್ಲಿ ಸಿಲುಕಿರುವ ಭಾರತೀಯರ ಸ್ಥಿತಿ ಚಿಂತಾಜನಕವಾಗಿದೆ. ಕೀವ್‌ಗೆ ತೆರಳಿದ್ದ ಏರ್ ಇಂಡಿಯಾ ವಿಮಾನ AI1947 ಭಾರತೀಯರನ್ನು ಕರೆತರಲಾಗದೆ ನವದೆಹಲಿಗೆ ವಾಪಸ್ ಬರುತ್ತಿದೆ.
ಈ ನಡುವೆಯೇ, ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಿದೆ. ಯೂಕ್ರೇನ್ಗೆ ಬರುವ ಮತ್ತು ಹೊರಡುವ ಎಲ್ಲ ವಿಮಾನಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಬೇಕು ಎಂದು ಅಲ್ಲಿನ ಸರ್ಕಾರ ಆದೇಶಿಸಿದೆ. ಆದರೆ ಯೂಕ್ರೇನ್ನ ವಿವಿಧ ನಿಲ್ದಾಣಗಳಿಗೆ ಭಾರತ ಸರ್ಕಾರ ವಿಶೇಷ ವಿಮಾನವನ್ನು ಕಳಿಸಿದ್ದು, ಭಾರತೀಯರು ಇಂದು ಕೂಡ ವಾಪಸಾಗಿದ್ದಾರೆ. ತುರ್ತು ಪರಿಸ್ಥಿತಿ ಘೋಷಿಸಿದ ಬಗ್ಗೆ ಮಾಹಿತಿ ತಿಳಿದ ತಕ್ಷಣವೇ ನಾವು ಅಲ್ಲಿಂದ ಹೊರಡಲು ಸಿದ್ಧವಾದೆವು. ಅದರಂತೆ ಭಾರತೀಯ ದೂತಾವಾಸ ಕಚೇರಿಯ ಅಧಿಕಾರಿಗಳನ್ನು ಸಂಪರ್ಕಿಸಿ ವಿಮಾನದ ವ್ಯವಸ್ಥೆ ಬಗ್ಗೆ ತಿಳಿದುಕೊಂಡು, ಇದೀಗ ತಾಯ್ನಾಡಿಗೆ ವಾಪಸ್ ಬಂದಿದ್ದೇವೆ' ಎಂದು ವಿದ್ಯಾರ್ಥಿಯೊಬ್ಬರು ಹೇಳಿದ್ದಾರೆ. ಆದರೆ ಕೀವ್ನಲ್ಲಿ ಸಿಲುಕಿರುವ ಭಾರತೀಯರು ಮಾತ್ರ ವಿಮಾನ ಸಿಗದೇ ಪರದಾಡುವಂತಾಗಿದೆ.