ನ್ಯೂಸ್

ಎಚ್​ಎಎಲ್​ನಲ್ಲಿ ಉದ್ಯೋಗ ಬಯಸಿರುವಿರಾ? ಅಪ್ರೆಂಟೀಸ್‌ಷಿಪ್‌ಗೆ ಅರ್ಜಿ ಆಹ್ವಾನ- 150 ಮಂದಿಗೆ ಅವಕಾಶ

suchetana

ಕೇಂದ್ರ ಸರ್ಕಾರಿ ಸ್ವಾಮ್ಯದ ಕೆಲಸ ಮಾಡುವ ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್​ಎಎಲ್) ನವರತ್ನ ಸಂಸ್ಥೆಗಳಲ್ಲಿ ಒಂದಾಗಿದೆ. ಪ್ರಸ್ತುತ ಹೈದರಾಬಾದ್ ಘಟಕದಲ್ಲಿ ಒಂದು ವರ್ಷದ ಅಪ್ರೆಂಟೀಸ್ ತರಬೇತಿ ನೀಡಲು ಸಿದ್ಧತೆ ನಡೆಸಲಾಗುತ್ತಿದ್ದು, ಆಸಕ್ತ, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಒಟ್ಟು ಸ್ಥಾನಗಳು: 150

ಯುದ್ಧ ವಿಮಾನ, ಲಘು ಯುದ್ಧ ವಿಮಾನ, ಹೆಲಿಕಾಪ್ಟರ್ ಹಾಗೂ ವೈಮಾನಿಕ ತರಬೇತಿ ಸಾಧನಗಳ ಉತ್ಪಾದನೆಯಲ್ಲಿ ತೊಡಗಿರುವ ಎಚ್​ಎಎಲ್, ತಂತ್ರಜ್ಞಾನ ಆವಿಷ್ಕಾರ, ಉತ್ಪಾದನೆ, ವಿನ್ಯಾಸ ಹಾಗೂ ತರಬೇತಿ ಮೊದಲಾದ ಕಾರ್ಯಗಳನ್ನು ದೇಶದ ವಿವಿಧೆಡೆ ಇರುವ ಘಟಕಗಳಲ್ಲಿ ನಡೆಸುತ್ತದೆ. ಪ್ರಸ್ತುತ ಹೈದರಾಬಾದ್ ಘಟಕದಲ್ಲಿರುವ ಟ್ರೇನಿಂಗ್ ಇನ್​ಸ್ಟಿಟ್ಯೂಟ್​ನಲ್ಲಿ ಉದ್ಯೋಗ ತರಬೇತಿ ನೀಡಲಾಗುವುದು. ಈಗಾಗಲೇ ಅಪ್ರೆಂಟೀಸ್ ತರಬೇತಿ ಪಡೆದಿರುವ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ ಎಂದು ತಿಳಿಸಲಾಗಿದೆ. ದಾಖಲೆ ಪರಿಶೀಲನೆ ಕುರಿತ ಮಾಹಿತಿಯನ್ನು ಎಚ್​ಎಎಲ್ ಹೈದರಾಬಾದ್ ಡಿವಿಷನ್​ನಿಂದ ತಿಳಿಸಲಾಗುವುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಯಾವ ವಿಭಾಗಗಳಲ್ಲಿ ನೇಮಕ?: ಎಲೆಕ್ಟ್ರಾನಿಕ್ಸ್ ಆಂಡ್ ಕಮ್ಯುನಿಕೇಷನ್ ಇಂಜಿನಿಯರಿಂಗ್, ಎಲೆಕ್ಟ್ರಿಕಲ್ ಆಂಡ್ ಎಲೆಕ್ಟ್ರಾನಿಕ್ಸ್, ಮೆಕಾನಿಕಲ್, ಸಿವಿಲ್, ಕಂಪ್ಯೂಟರ್ ಸೈನ್ಸ್, ಏರೋನಾಟಿಕಲ್, ಕಮರ್ಷಿಯಲ್ ಆಂಡ್ ಕಂಪ್ಯೂಟರ್ ಪ್ರಾಕ್ಟೀಸಿಂಗ್ ಇಂಜಿನಿಯರಿಂಗ್ ವಿಭಾಗಗಳಲ್ಲಿ ನೇಮಕ ಮಾಡಿಕೊಳ್ಳಲಾಗುವುದು.

ಸ್ಥಾನಗಳ ವಿವರ

* ಟೆಕ್ನಿಕಲ್ ಅಪ್ರೆಂಟೀಸ್ (ಟ್ರೇನಿ) - 80

* ಗ್ರಾಜುಯೇಟ್ ಅಪ್ರೆಂಟೀಸ್ (ಟ್ರೇನಿ) - 70

ವಿದ್ಯಾರ್ಹತೆ: ಎಲೆಕ್ಟ್ರಾನಿಕ್ಸ್ ಆಂಡ್ ಕಮ್ಯುನಿಕೇಷನ್ ಇಂಜಿನಿಯರಿಂಗ್, ಎಲೆಕ್ಟ್ರಿಕಲ್ ಆಂಡ್ ಎಲೆಕ್ಟ್ರಾನಿಕ್ಸ್, ಮೆಕಾನಿಕಲ್, ಸಿವಿಲ್, ಕಂಪ್ಯೂಟರ್ ಸೈನ್ಸ್, ಏರೋನಾಟಿಕಲ್, ಕಮರ್ಷಿಯಲ್ ಆಂಡ್ ಕಂಪ್ಯೂಟರ್ ಪ್ರಾಕ್ಟೀಸಿಂಗ್ ಇಂಜಿನಿಯರಿಂಗ್​ನಲ್ಲಿ ಡಿಪ್ಲೊಮಾ (ಟೆಕ್ನಿಕಲ್ ಅಪ್ರೆಂಟೀಸ್), ಗ್ರಾಜುಯೇಟ್ ಅಪ್ರೆಂಟೀಸ್​ಗೆ ಬಿಇ/ ಬಿ.ಟೆಕ್ ಪದವಿ ಕೇಳಲಾಗಿದೆ. 2019, 2020, 2021ರ ಶೈಕ್ಷಣಿಕ ಸಾಲಿನಲ್ಲಿ ಪದವಿ ಪಡೆದ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ.

ಸ್ಟೈಪೆಂಡ್: ಟೆಕ್ನಿಷಿಯನ್ ಅಪ್ರೆಂಟೀಸ್​ಗೆ ಮಾಸಿಕ 8,000 ರೂ. ಹಾಗೂ ಗ್ರಾಜುಯೇಟ್ ಅಪ್ರೆಂಟೀಸ್​ಗೆ ಮಾಸಿಕ 9,000 ರೂ. ಗೌರವಧನ ನೀಡಲಾಗುವುದು.

ಸೂಚನೆ: ಆಸಕ್ತ ಅಭ್ಯರ್ಥಿಗಳು ನ್ಯಾಷನಲ್ ವೆಬ್ ಪೋರ್ಟಲ್ -http://www.mhrdnats.gov.in

ನಲ್ಲಿ ನೋಂದಾಯಿತರಾಗಬೇಕು. ಆ ಲಿಂಕ್ ಮೂಲಕವೇ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ.

ಅರ್ಜಿ ಸಲ್ಲಿಸಲು ಕೊನೇ ದಿನ: 19.1.2022

ಅಧಿಸೂಚನೆಗೆ: https://bit.ly/3Kb03ob

ಮಾಹಿತಿಗೆ: http://portal.mhrdnats.gov.in